Advertisement
ಸೆ. 11 ರಂದು ನಗರದ ಬೋಟ್ ಕ್ಲಬ್ ಸಭಾಂಗಣದಲ್ಲಿ ನಡೆದ ಮುಲ್ಕಿ ಸುಂದರ್ ರಾಮ ಶೆಟ್ಟಿ ಸಭಾಭವನ ನಿರ್ಮಾಣ ಪ್ರಯುಕ್ತ ನಡೆದ ಪುಣೆಯ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಪುಣೆಯ ಬಂಟರು ಸ್ವಾಭಿಮಾನಿಗಳು. ಇಲ್ಲಿ ಸಂತೋಷ್ ಶೆಟ್ಟಿಯವರ ಸಾಮೂಹಿಕ ನೇತೃತ್ವದಲ್ಲಿ ಸಮಾಜ ಬಾಂಧವರ ನೆರವಿನಿಂದ ಭವ್ಯವಾದ ಸಮಾಜದ ಭವನವನ್ನು ನಿರ್ಮಿಸಿರುವುದು ಅಭಿಮಾನವೆನಿಸುತ್ತದೆ. ಅದೇ ರೀತಿ ಮುಲ್ಕಿಯಲ್ಲಿ 1 ಎಕ್ರೆ 82 ಸೆಂಟ್ಸ್ ಜಾಗವನ್ನು ಖರೀದಿಸಲಾಗಿದ್ದು, ಇಲ್ಲಿ ಸುಂದರ್ ರಾಮ ಶೆಟ್ಟಿಯವರ ಸುಂದರವಾದ ಭವನವನ್ನು ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವಲ್ಲಿ ತೊಡಗಿಕೊಂಡಿದ್ದೇವೆ. ಈ ಕಾರ್ಯಕ್ಕೆ ಸಮಾಜಬಾಂಧವರ ನೆರವಿನ ಒಂದೊಂದು ಇಟ್ಟಿಗೆಯೂ ಸೇರಿದರೆ ಮಹತ್ವದ ಕಾರ್ಯ ನೆರವೇರುತ್ತದೆ. ಪುಣೆಯಲ್ಲಿರುವ ಪ್ರತಿ ಯೋರ್ವ ಸಮಾಜ ಬಾಂಧವರಿಗೂ ಈ ಮಾಹಿತಿಯನ್ನು ತಲುಪಿಸುವ ಕಾರ್ಯ ಆಗಬೇಕಾಗಿದೆ ಎಂದರು.
Related Articles
Advertisement
ಸಭೆಯಲ್ಲಿ ಪಿಂಪ್ರಿ-ಚಿಂಚಾÌಡ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಎರ್ಮಾಳ್ ವಿಶ್ವನಾಥ ಶೆಟ್ಟಿ, ಎರ್ಮಾಳ್ ಸೀತಾರಾಮ್ ಶೆಟ್ಟಿ,ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಜಯಂತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಉಪಾಧ್ಯಕ್ಷ ರಾಮಕೃಷ್ಣ ಶೆಟ್ಟಿ, ಪದಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ, ಸತೀಶ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಟ್ಟೆ, ವಿವೇಕಾನಂದ ಶೆಟ್ಟಿ ಆವರ್ಸೆ, ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ನಿವೃತ್ತ ಐಜಿ ಜಯಾನಂದ ಶೆಟ್ಟಿ, ಜಗದೀಶ್ ಹೆಗ್ಡೆ, ಸತೀಶ್ ಸೂಡಾ, ಕರುಣಾಕರ ಶೆಟ್ಟಿ, ಸದಾಶಿವ ಶೆಟ್ಟಿ, ಉಮಾನಾಥ ಶೆಟ್ಟಿ, ಸುರೇಶ ಶೆಟ್ಟಿ, ಸಂಕಯ್ಯ ಶೆಟ್ಟಿ, ನಾಗೇಶ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸ್ನೇಹಭೋಜನದೊಂದಿಗೆ ಸಭೆ ಮುಕ್ತಾಯಗೊಂಡಿತು. ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ ಸ್ವಾಗತಿಸಿ ವಂದಿಸಿದರು.
ಬಂಟ ಸಮಾಜದ ಒಳಿತನ್ನು ಬಯಸಿ ಬದುಕನ್ನು ಸವೆಸಿದ ದಿ| ಸುಂದರ್ ರಾಮ ಶೆಟ್ಟಿಯವರನ್ನು ಎರಡು ಸಲ ಭೇಟಿ ಮಾಡಿದ್ದ ನೆನಪಿದೆ. ಅವರಂತಹ ಮಹಾನ್ ವ್ಯಕ್ತಿತ್ವವನ್ನು ನಾನು ಇನ್ನೆಲ್ಲೂ ಕಂಡಿಲ್ಲ. ನಮ್ಮ ಸಮಾಜಬಾಂಧವರಿಗೆ ಬದುಕೇ ಬರಿದಾದಂತಹ ಸಂದರ್ಭದಲ್ಲಿ ಆಸರೆ ನೀಡಿ ಕಾಪಾಡಿದ ಮಾನವತಾವಾದಿಯಾಗಿ¨ªಾರೆ. ಅವರ ನೆನಪಿನ ಭವನವನ್ನು ನಿರ್ಮಿಸುವ ಕಾರ್ಯಕ್ಕೆ ನನ್ನಿಂದಾದ ನೆರವನ್ನು ನೀಡುತ್ತೇನೆ .ಕುಶಲ್ ಹೆಗ್ಡೆ , ಅಧ್ಯಕ್ಷರು : ಪುಣೆ ಕನ್ನಡ ಸಂಘ ನಮ್ಮ ಆತ್ಮೀಯರಾದ ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದಿದ ಮೇರು ವ್ಯಕ್ತಿತ್ವದ ಪ್ರಕಾಶ್ ಶೆಟ್ಟಿಯವರು ಪುಣೆ ಬಂಟರ ಭವನಕ್ಕೆ ಮಹತ್ವದ ಕೊಡುಗೆಯನ್ನು ನೀಡಿರುವುದು ಅವರ ಸಮಾಜದ ಬಗೆಯ ಸಾಮಾಜಿಕ ಕಳಕಳಿಯ ಉತ್ತಮ ನಿದರ್ಶನವಾಗಿದೆ. ಇದೀಗ ಅವರ ನೇತೃತ್ವದಲ್ಲಿ ಬಂಟ ಸಮಾಜದ ಸಾವಿರಾರು ಸಮಾಜ ಬಾಂಧವರ ಬದುಕಿಗೆ ಆಶಾಕಿರಣದಂತೆ ವಿಜಯಾ ಬ್ಯಾಂಕಿನಲ್ಲಿ ಕೆಲಸವನ್ನು ನೀಡಿ ಮಾನವೀಯತೆ ಮೆರೆದ ಸುಂದರ್ ರಾಮ ಶೆಟ್ಟಿಯವರ ಹೆಸರಿನ ಉಳಿವಿಗಾಗಿ ಭವನವನ್ನು ನಿರ್ಮಿಸುವ ಯೋಜನೆ
ಅಭಿನಂದನೀಯವಾಗಿದೆ. ಇದು ಒಂದು ಉತ್ತಮ ಕಾರ್ಯ ಎಂದು ತಾನು ಭಾವಿಸುತ್ತೇನೆ. ಸಮಾಜ ರಚನೆಯ ಹಾದಿಯಲ್ಲಿ ಮಾನವೀಯತೆಯ ಸೆಳೆತದೊಂದಿಗೆ ಜನರ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟ ಮಹಾಚೇತನಕ್ಕೆ ಗೌರವ ಸಲ್ಲಿಸುವ ಮಹತ್ಕಾರ್ಯ ಆಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಈ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣ .
ಸಂತೋಷ್ ಶೆಟ್ಟಿ ಇನ್ನಕುರ್ಕಿಲ್‌ಬೆಟ್ಟು ,
ಅಧ್ಯಕ್ಷರು : ಪುಣೆ ಬಂಟರ ಸಂಘ ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು