Advertisement

ಮೂಕನಹಳ್ಳಿ ಗ್ರಾಪಂ ಅಧ್ಯಕ್ಷೆ ಮಹದೇವಮ್ಮ

12:19 PM Nov 09, 2018 | |

ಹುಣಸೂರು: ನ್ಯಾಯಾಲಯದ ಆದೇಶದಂತೆ ಎಂಟು ತಿಂಗಳ ಹಿಂದೆ ನಡೆದಿದ್ದ ಹುಣಸೂರು ತಾಲೂಕು ಮೂಕನಹಳ್ಳಿ ಗ್ರಾಪಂ ಚುನಾವಣೆ ಮತ ಎಣಿಕೆ ನಡೆದು ಅಧ್ಯಕ್ಷರಾಗಿ ಕಿರಿಜಾಜಿಯ ಮಹದೇವಮ್ಮ ಹಾಗೂ ಉಪಾಧ್ಯಕ್ಷರಾಗಿ ಅಗ್ರಹಾರದ ಕುಮುದಾ ಆಯ್ಕೆಯಾದರು.

Advertisement

ಮತ ಎಣಿಕೆ: ಪೊಲೀಸ್‌ ಬಿಗಿ ಭದ್ರತೆಯಲ್ಲಿ ನಡೆದ ಮತ ಎಣಿಕೆಯಲ್ಲಿ 13 ಸದಸ್ಯರ ಪೈಕಿ ಅಧ್ಯಕ್ಷೆ (ಎಸ್‌ಸಿ ಮಹಿಳೆ) ಮಹದೇವಮ್ಮರಿಗೆ 8 ಹಾಗೂ ಮಾಜಿ ಅಧ್ಯಕ್ಷೆ ಲಕ್ಷ್ಮಮ್ಮಗೆ 4 ಮತ ಬಂದಿತ್ತು. ಉಪಾಧ್ಯಕ್ಷೆ (ಸಾಮಾನ್ಯ ಮಹಿಳೆ) ಕುಮುದಾರಿಗೆ 7 ಮತ ಹಾಗೂ ಪ್ರತಿಸ್ಪರ್ಧಿ ಮೂಕನಹಳ್ಳಿ ಮಹದೇವಮ್ಮಗೆ 6 ಮತ ಬಂದಿದ್ದರಿಂದ ಅಧ್ಯಕ್ಷರಾಗಿ ಮಹದೇವಮ್ಮ ಹಾಗೂ ಉಪಾಧ್ಯಕ್ಷರಾಗಿ ಅಗ್ರಹಾರದ ಕುಮುದಾ ಚುನಾವಣೆಯಲ್ಲಿ ಆಯ್ಕೆಯಾದರೆಂದು ಚುನಾವಣಾಧಿಕಾರಿ ಘೋಷಿಸಿದರು. 

2018 ಫೆಬ್ರವರಿ 8ರಂದು ಅಧ್ಯಕ್ಷೆ ಲಕ್ಷ್ಮಮ್ಮ ಹಾಗೂ ಉಪಾಧ್ಯಕ್ಷೆ ಮಣಿಶಿವಣ್ಣನಾಯ್ಕರನ್ನು ಅವಿಶ್ವಾಸ ಗೊತ್ತುವಳಿ ಮಂಡಿಸುವ ಮೂಲಕ ಪದಚ್ಯುತಗೊಳಿಸಲಾಗಿತ್ತು. ತೆರವಾದ ಸ್ಥಾನಕ್ಕೆ 2018 ಮಾರ್ಚ್‌ 5ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತಾದರೂ, ಮತ ಎಣಿಕೆಗೆ ಉಚ್ಚ ನ್ಯಾಯಾಲಯದ ಮೂಲಕ ತಡೆಯಾಜ್ಞೆ  ತಂದಿದ್ದರಿಂದ ಮತದಾನ ಪತ್ರಗಳನ್ನು ಹಾಗೆಯೇ ಭದ್ರಪಡಿಸಲಾಗಿತ್ತು.

ಅಂದಿನಿಂದಲೂ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ತಡೆಯಾಜ್ಞೆ ತೆರವುಗೊಳಿಸಿ ಮತ ಎಣಿಕೆ ನಡೆಸಿ, ಫ‌ಲಿತಾಂಶ ಪ್ರಕಟಿಸಬೇಕೆಂಬ ಆದೇಶದ ಹಿನ್ನೆಲೆಯಲ್ಲಿ ಮತ ಎಣಿಕೆ ಮಾಡಿದ ಚುನಾವಣಾಧಿಕಾರಿ, ಲೋಕೋಪಯೋಗಿ ಇಲಾಖೆಯ ಎಇಇ ಕೃಷ್ಣ  ಫಲಿತಾಂಶ ಪ್ರಕಟಿಸಿದರು. ಪಿಡಿಒ ಶ್ರೀನಿವಾಸ್‌ ಹಾಜರಿದ್ದರು. ಮಾಜಿ ಅಧ್ಯಕ್ಷೆ ಲಕ್ಷ್ಮಮ್ಮ ಹಾಗೂ ಸದಸ್ಯ ಮಲ್ಲೇಶ್‌ ಮತ ಎಣಿಕೆ ಸಂದರ್ಭದಲ್ಲಿ ಗೈರಾಗಿದ್ದರು. ಫಲಿತಾಂಶದ ನಂತರ ಬೆಂಬಲಿಗರು ವಿಜಯೋತ್ಸವ ಆಚರಿಸಿ ಸಿಹಿ ಹಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next