Advertisement

ಮಲಾನಿ ಎಂಬ ಮೂಕವಿಸ್ಮಿತ !

10:33 PM May 15, 2019 | Sriram |

ನಟ ಸಂದೀಪ್‌ ಮಲಾನಿ ಮುಖ್ಯ ಪಾತ್ರದಲ್ಲಿರುವ ಗುರುದತ್ತ್ ಶ್ರೀಕಾಂತ್‌ ನಿರ್ದೇಶನದ “ಮೂಕ ವಿಸ್ಮಿತ’ ಸಿನೆಮಾ ಈ ವಾರದಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ. ಟಿ.ಪಿ. ಕೈಲಾಸಂ ಅವರ “ಟೊಳ್ಳು ಗಟ್ಟಿ’ ನಾಟಕ ಕೃತಿ ಆಧಾರಿತ ವಾಣಿಜ್ಯಿಕ ಮತ್ತು ಸೃಜನಶೀಲಾತ್ಮಕ ಚಿತ್ರ ಇದು.

Advertisement

ಕುಟುಂಬ ಸಮೇತರಾಗಿ ಎಲ್ಲರೂ ನೋಡಬಹುದಾದ ಚಿತ್ರ. ಬಹುತೇಕ ಹೊಸ ಮುಖಗಳನ್ನೇ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ. 20 ಮಂದಿ ಕಲಾವಿದರ ಕೂಡುವಿಕೆಯಲ್ಲಿ 50 ಲಕ್ಷ ರೂ. ವೆಚ್ಚದೊಳಗೆ ಚಿತ್ರ ನಿರ್ಮಿಸಲಾಗಿದೆ. ಚಿತ್ರದಲ್ಲಿ ಮಲಾನಿ ಬ್ರಾಹ್ಮಣ ಪಾತ್ರ ಮಾಡಿದ್ದು, ಸ್ವಾಭಿಮಾನ ಬದುಕಿಗೆ ಸಂಬಂಧಿತ ಕಥೆ.

1950ರ ಆಸುಪಾಸಿನ ಸೆಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ 4 ಹಾಡುಗಳಿದ್ದು, ಸಾಗರ, ಶಿವಮೊಗ್ಗ, ಜೋಗ್‌ಫಾಲ್ಸ್‌ ಆಸುಪಾಸಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರಾಯಕ್ಕೆ ಬಂದ ಗಂಡು ಮಕ್ಕಳಿರುವಾಗ ಕಥೆಯ ಪ್ರಮುಖ ಪಾತ್ರಧಾರಿ 55ನೇ ವಯಸ್ಸಿನಲ್ಲಿ ಮಗುವಿನ ತಂದೆಯಾಗುವುದು ಸಿನೆಮಾದ ಕಥೆ. ಇದರಿಂದ ಸಮಾಜದಲ್ಲಿ ಹುಟ್ಟಿಕೊಳ್ಳುವ ಸಮಸ್ಯೆಗಳನ್ನು ಚಿತ್ರಕಥೆಯಲ್ಲಿ ಹೆಣೆಯಲಾಗಿದೆ. ಜೈಗುರು ಕ್ರಿಯೇಷನ್ಸ್‌ ಈ ಚಿತ್ರ ನಿರ್ಮಾಣ ಮಾಡಿದ್ದು, ಸಿದ್ದು ಕ್ಯಾಮೆರಾಮೆನ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next