Advertisement

ಲಹರಿ ಭಾವಗೀತೆಗೆ ಯೂ-ಟ್ಯೂಬ್‌ ಅವಾರ್ಡ್‌

11:18 AM Oct 29, 2018 | |

ಯೂ-ಟ್ಯೂಬ್‌ ಕನ್ನಡ ಭಾವಗೀತೆ ವಿಭಾಗದಲ್ಲಿ ಸುಮಾರು 2.5 ಲಕ್ಷ ಚಂದಾದಾರರನ್ನು ಹೊಂದಿರುವ ಲಹರಿ ಆಡಿಯೋ ಸಂಸ್ಥೆಗೆ ಯೂ-ಟ್ಯೂಬ್‌ ಸಿಲ್ವರ್‌ ಬಟನ್‌ ಅವಾರ್ಡ್‌ ಲಭಿಸಿದೆ. ಭಾರತದಲ್ಲಿ ಮೊದಲಬಾರಿಗೆ ಪ್ರಾದೇಶಿಕ ಸಂಗೀತದಲ್ಲಿ ಭಾವಗೀತೆ ವಿಭಾಗವನ್ನು ಲಹರಿ ಸಂಸ್ಥೆ ಯು-ಟ್ಯೂಬ್‌ನಲ್ಲಿ ಪರಿಚಯಿಸಿತ್ತು. ಸುಮಾರು ಒಂದು ವರ್ಷಗಳ ಹಿಂದೆ ಲಹರಿ ಸಂಸ್ಥೆ ಪ್ರಾರಂಭಿಸಿದ್ದ ಭಾವಗೀತೆ ವಿಭಾಗದಲ್ಲಿ, ಕನ್ನಡದ ನೂರಾರು ಕವಿಗಳು ಮತ್ತು ಗಾಯಕರ ಸಾವಿರಾರು ಭಾವಗೀತೆಗಳನ್ನು ಯೂ-ಟ್ಯೂಬ್‌ನಲ್ಲಿ ಡಿಜಿಟಲ್‌ ಸ್ವರೂಪದಲ್ಲಿ ದೊರೆಯುವಂತೆ ಮಾಡಿತ್ತು.

Advertisement

ಯೂ-ಟ್ಯೂಬ್‌ ವೀಕ್ಷಕರಿಂದ ಈ ಭಾವಗೀತೆಗಳಿಗೆ ನಿರೀಕ್ಷೆಗೂ ಮೀರಿದ ರತಿಕ್ರಿಯೆ ಸಿಗುತ್ತಿದ್ದು, ಒಂದೇ ವರ್ಷದೊಳಗೆ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಈ ಭಾವಗೀತೆಗಳಿಗೆ ಚಂದಾದಾರರಾಗಿದ್ದಾರೆ. ಈ ಪ್ರಶಸ್ತಿ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಲಹರಿ ಸಂಸ್ಥೆ ಮುಖ್ಯಸ್ಥ ವೇಲು, “70-80ರ ದಶಕದಿಂದಲೂ ಲಹರಿ ಸಂಸ್ಥೆ ಭಾವಗೀತೆಗಳಿಗೆ ಮೊದಲ ಆದ್ಯತೆ ಕೊಟ್ಟು ಅದನ್ನು ಆಡಿಯೋ ಮೂಲಕ ಬಿಡುಗಡೆ ಮಾಡುತ್ತ ಬಂದಿದೆ.

ಕನ್ನಡದ ಕೇಳುಗರಿಂದಲೂ ಅದಕ್ಕೆ ಸಹಕಾರ, ಬೆಂಬಲ ಸಿಗುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆಡಿಯೋ ಸ್ವರೂಪ ಬದಲಾಗಿದ್ದರಿಂದ, ನಾವು ಕೂಡ ಭಾವಗೀತೆಗಳನ್ನು ಡಿಜಿಟಲ್‌ ಸ್ವರೂಪದಲ್ಲಿ ವೀಕ್ಷಕರಿಗೆ ಸಿಗುವಂತೆ ಯೂ-ಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದೆವು. ಅಲ್ಲಿ ನಮ್ಮ ನಿರೀಕ್ಷೆಗೂ ಮೀರಿ ವೀಕ್ಷಕರು ಭಾವಗೀತೆಗಳನ್ನು ನೋಡಿ ಬೆಂಬಲಿಸುತ್ತಿದ್ದಾರೆ. ಭಾವಗೀತೆಗಳು ಯಾವತ್ತೂ ಎವರ್‌ ಗ್ರೀನ್‌, ಅವುಗಳಿಗೆ ಯಾವತ್ತು ಕೊನೆಯಿಲ್ಲ ಎಂಬುದು ಇದರಿಂದ ಮತ್ತೆ ಸಾಬೀತಾಗಿದೆ’ ಎಂದಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next