ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುವ ಇಲ್ಲಿನ ಪುತ್ತಿಗೆ ಮತ್ತು ಮಾರ್ಪಾಡಿ ಗ್ರಾಮಗಳಲ್ಲಿ ಈ ಹಿಂದೆ ಗುರುತಿಸಲಾದ ರಾ.ಹೆ. ಪಥವನ್ನು ಕೆಲವು ಹಿತಾಸಕ್ತಿಗಳ ಒತ್ತಡದಿಂದ ಬದಲಾಯಿಸಿರುವುದಕ್ಕೆ ಈ ಭಾಗದ ಸಂತ್ರಸ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಈಗ ಮರುಪರಿಶೀಲನೆಯ ಹಂತಕ್ಕೆ ಬಂದಿದೆ.
ಸೋಮವಾರ ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ಮತ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಸಂತ್ರಸ್ತರ ಆಕ್ಷೇಪದ ಕುರಿತ ದಾಖಲೆಗಳನ್ನು ಪರಿಶೀಲಿಸಿದರು.
ಜ. 19ರಂದು ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಮಂಗಳೂರಿ ನಲ್ಲಿ ಸಂತ್ರಸ್ತರು ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆದಿತ್ತು. ಸಭೆಯಲ್ಲಿ ಚರ್ಚೆ ನಡೆದು ಸ್ಥಳ ಪರಿಶೀಲನೆ ಮಾಡು ವಂತೆ ಯೋಜನಾ ನಿರ್ದೇಶಕರಿಗೆ ಸೂಚಿಸಲಾಗಿತ್ತು.
ಗರಿಷ್ಠ ಸರಕಾರಿ ಭೂಮಿ ಸ್ವಾಧೀನ
ಸಂತ್ರಸ್ತರ ಆಕ್ಷೇಪದಂತೆ, ಬದ ಲಾಯಿಸಿದ ಪಥದಿಂದಾಗಿ ಸಂತ್ರಸ್ತ ರಾಗುವ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳು ಮತ್ತು ಕೆಲವು ಉದ್ಯಮ ಸಂಸ್ಥೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಪಥ ಬದಲಾಯಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿ ಕಂದಾಯ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರದ ಸರ್ವೇಯರ್‌ಗಳನ್ನೊಳಗೊಂಡ ತಂಡದಿಂದ ಜಂಟಿ ಸರ್ವೇ ನಡೆಸಲಾಗುವುದು. ಕಡಲಕೆರೆ ಕೈಗಾರಿಕಾ ಪ್ರಾಂಗಣದ ಯಾವುದೇ ಕೈಗಾರಿಕೆಗಳಿಗೆ ಹಾನಿಯಾಗದಂತೆ ಚತುಷ್ಪಥ ರೂಪಿಸಲಾಗುವುದು. ಖಾಸಗಿ ಜಾಗ ಉಳಿಸಿಕೊಂಡು ಗರಿಷ್ಠ ಮಟ್ಟದಲ್ಲಿ ಸರಕಾರಿ ಭೂಮಿಯನ್ನೇ ಸ್ವಾಧೀನ ಪಡಿಸಿಕೊಳ್ಳುವುದಾಗಿ ಲಿಂಗೇ ಗೌಡ ಸಂತ್ರಸ್ತರಿಗೆ ಭರವಸೆ ನೀಡಿದರು.
ಕಂದಾಯ ಇಲಾಖೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಹೆದ್ದಾ ರಿಯ ಗುತ್ತಿಗೆ ಪಡೆದಿರುವ ದಿಲೀಪ್ ಬಿಲ್ಡ್‌ಕಾನ್‌ನ ಅಧಿಕಾರಿಗಳು ಉಪಸ್ಥಿತರಿದ್ದರು.