Advertisement

ಮೂಡ್ಲಕಟ್ಟೆ : ಸಿಗಡಿಗೆ ಬಂಪರ್‌ ಬೆಲೆ

10:12 PM Jun 21, 2019 | Sriram |

ಕುಂದಾಪುರ: ಮೂಡ್ಲಕಟ್ಟೆಯ ಚಟ್ಲಿ ಕೆರೆಯಲ್ಲಿ ಶ್ರೀಧರ ಹೆಗ್ಡೆ, ವಸಂತ ಪೂಜಾರಿ, ಸುಬ್ರಹ್ಮಣ್ಯ, ಆನಂದ ಪೂಜಾರಿ ಹಾಗೂ ಸಂತೋಷ ಪೂಜಾರಿ ಪಾಲುದಾರಿಕೆಯಲ್ಲಿ ಮಾಡಿರುವ ಸಿಗಡಿ ಕೃಷಿಗೆ ಈ ಬಾರಿ ಬಂಪರ್‌ ಬೆಲೆ ಸಿಕ್ಕಿದೆ.

Advertisement

ಅದು ಕೆ.ಜಿ.ಗೆ 370 ರೂ.ಯಂತೆ ಮಾರಾಟವಾಗಿದೆ. 3.5 ಟನ್‌ ಸಿಗಡಿ ಉತ್ಪನ್ನ ಸಿಕ್ಕಿದ್ದು, ಕೆ.ಜಿ.ಗೆ 370 ರೂ.ಯಂತೆ ಮಾರಾಟ ವಾಗಿದೆ. ಸಾಮಾನ್ಯವಾಗಿ 250 – 300ರ ಆಸುಪಾಸಿನಲ್ಲಿ ದರವಿದ್ದರೆ, ಈ ಬಾರಿ ಹೆಚ್ಚಿನ ಬೇಡಿಕೆ ಇದ್ದುದರಿಂದ ಉತ್ತಮ ಬೆಲೆ ಸಿಕ್ಕಿದೆ. ಇದರಿಂದ 1.75 ಲಕ್ಷ ರೂ. ಸಂಗ್ರಹವಾಗಿದೆ. ಅತಿ ಕಡಿಮೆ ಉಷ್ಣಾಂಶದಲ್ಲಿಯೂ ಸಿಗಡಿ ಮರಿಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದರೂ, ಸಾಂಪ್ರದಾಯಿಕವಾಗಿ ಸಿಗಡಿ ಕೃಷಿ ಮಾಡಿರುವುದರಿಂದ ಉತ್ತಮ ಲಾಭ ಬಂದಿದೆ ಎನ್ನುವುದು ಪಾಲುದಾರರ ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next