Advertisement

ಸಾಮಾಜಿಕ ಅಂತರ ಕಾಪಾಡಿ

06:45 PM May 21, 2020 | Naveen |

ಮೂಡಿಗೆರೆ: ಚಾಲಕರು ಸಾಮಾಜಿಕ ಜವಾಬ್ದಾರಿ ವಹಿಸಿಕೊಂಡು ತಮ್ಮ ವೃತ್ತಿ ನಿರ್ವಹಣೆ ಮಾಡಿದ್ದಲ್ಲಿ ಕುಟುಂಬದ ಹಾಗೂ ಸಮಾಜದ ಹಿತವನ್ನು ಕಾಪಾಡಬಹುದು ಎಂದು ಕಳಸ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ| ಪ್ರೇಮ್‌ ಕುಮಾರ್‌ ಅಭಿಪ್ರಾಯಪಟ್ಟರು.

Advertisement

ಕೋವಿಡ್ ಮುಕ್ತ ಕಳಸ ವಾಟ್ಸ್‌ಆ್ಯಪ್‌ ಗ್ರೂಪ್‌ ವತಿಯಿಂದ ಆಶೀರ್ವಾದ್‌ ಕಂಫರ್ಟ್ಸ್ ನಲ್ಲಿ ಆಯೋಜಿಸಲಾಗಿದ್ದ ಪ್ರಯಾಣಿಕ ಹಾಗೂ ಸರಕು ವಾಹನಗಳ ಚಾಲಕರು ಹಾಗೂ ಮಾಲೀಕರಿಗೆ ಆರೋಗ್ಯ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಚಾಲಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಕಣ್ಣಿಗೆ ಕನ್ನಡಕ ಧರಿಸಬೇಕು. ತಮ್ಮ ವಾಹನಗಳಿಗೆ ಹತ್ತುವಾಗ ಮತ್ತು ಇಳಿಯುವಾಗ ಕಡ್ಡಾಯವಾಗಿ ಸ್ಯಾನಿಟೈಸರ್‌ ಧರಿಸಬೇಕು ಎಂದರು.

ಕುದುರೆಮುಖ ಠಾಣಾಧಿಕಾರಿ ನಂಜಪ್ಪ ಮಾತನಾಡಿ, ಆರೋಗ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಮೇಲೆ ಹೆಚ್ಚಿನ ಒತ್ತಡ ಇದೆ. ಬಹುತೇಕ ಸಾರ್ವಜನಿಕರು ನಮ್ಮ ಮನವಿಗಳಿಗೆ ಸ್ಪಂದನೆ ನೀಡಿ ಸಹಕರಿಸುತ್ತಿದ್ದಾರೆ ಎಂದರು. ಕಾರ್ಯಾಗಾರಕ್ಕೆ ಬಂದಿದ್ದ ಸುಮಾರು 60 ಮಂದಿ ಚಾಲಕರುಗಳಿಗೆ ಹಾಗೂ ವಾಹನಗಳ ಮಾಲೀಕರುಗಳಿಗೆ ಸ್ಯಾನಿಟೈಸರ್‌ ಹಾಗೂ ಮಾಸ್ಕ್ ವಿತರಿಸಲಾಯಿತು. ಕಳಸ ವಾಟ್ಸ್‌ಆ್ಯಪ್‌ ಗ್ರೂಪ್‌ ಅಡ್ಮಿನ್‌ ರವಿ ಕೆಳಂಗಡಿ, ಕುದುರೆಮುಖ ವೃತ್ತ ನಿರೀಕ್ಷಕ ವಿಜಯ್‌ ಕುಮಾರ್‌, ಉದ್ಯಮಿ ರವಿ ರೈ, ವೈದ್ಯ ಡಾ|ವಿಕ್ರಮ್‌ ಪ್ರಭು, ಕಳಸ ಠಾಣಾ ಹೆಡ್‌ ಕಾನ್ಸಸ್ಟೇಬಲ್‌ ರಾಜಣ್ಣ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next