Advertisement

ಗೃಹ ಸಚಿವರ ನಡವಳಿಕೆ ಸರಿಯಿಲ್ಲ…: ಸ್ವಪಕ್ಷದ ಶಾಸಕ ಎಂ.ಪಿ‌.ಕುಮಾರಸ್ವಾಮಿ ಬೇಸರ

03:09 PM Nov 23, 2022 | Team Udayavani |

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ದ ಆಡಳಿತ ಪಕ್ಷದ ಮೂಡಿಗೆರೆ ಶಾಸಕ ಎಂ.ಪಿ‌.ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಾನೊಬ್ಬ ದಲಿತ ಶಾಸಕ ಎಂಬ ಕಾರಣದಿಂದ ಮೊನ್ನೆ ನನ್ನ ಕ್ಷೇತ್ರದಲ್ಲಿ ನಡೆದ ಘಟನೆ ಸಂಬಂಧ ಸೌಜನ್ಯಕ್ಕೂ ಮಾತನಾಡಿಸಿ ವಿಷಾದ ಹೇಳುವುದು ಮಾಡಿಲ್ಲ ಎಂದು ಹೇಳಿದರು.

Advertisement

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆಯ ದಾಳಿಗೆ ಸಿಲುಕಿ ಮೃತಪಟ್ಟ ಮಹಿಳೆಯ ಕುಟುಂಬದವರನ್ನು ನೋಡಿ ಮಾತನಾಡಿಸಲು ಸಾಂತ್ವಾನ ಹೇಳಲು ತೆರಳಿದ್ದೆ. ಇದು ಸಣ್ಣ ಘಟನೆ ಅಲ್ಲ ಜನರು ನನಗೆ ದೊಣ್ಣೆಯಿಂದ ಹೊಡೆಯಲು ಬಂದಿದ್ದರು. ಕಲ್ಲಲ್ಲಿ ಹೊಡೆಯಲು ಬಂದಿದ್ದರು, ದೊಣ್ಣೆಯಲ್ಲಿ ಹೊಡೆಯಲು ಬಂದಿದ್ದರು, ಇದೊಂದು ಸಣ್ಣ ಘಟನೆ ಹೇಗೆ ಆಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ

ನಾನು ದೂರು ಕೊಡಲಿಲ್ಲ. ನಾನು ಕುಮಾರಸ್ವಾಮಿ ಅಲ್ಲ. ನಾನೊಬ್ಬ ಶಾಸಕ ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇದುವರೆಗೂ ನನ್ನ ಮಾತನಾಡಿಸುವ ಕೆಲಸ ಮಾಡ್ತಿಲ್ಲ. ಸೌಜನ್ಯಕ್ಕೂ ಕರೆದು ಏನಾಯ್ತು ಅಂತ ಕೇಳಿಲ್ಲ ಜನಪ್ರತಿನಿಧಿಗಳಿಗೆ ಹೀಗೆ ಆದರೆ ಜನರ ಪರಿಸ್ಥಿತಿ ಎಲ್ಲಿಗೆ ಹೋಗಲಿದೆ ಎಂದರು.

ನಾನು ಆನೆ ಸಾಕಲು ಆಗುತ್ತಾ ಗೃಹ ಸಚಿವರು ಸಂಪೂರ್ಣವಾಗಿ ನನ್ನ ನಿರ್ಲಕ್ಷ್ಯ ಮಾಡಿದ್ದಾರೆ. ಇದುವರೆಗೂ ಒಂದು ಪೋನ್ ಮಾಡಿ ಏನಾಯ್ತು ಅಂತ ಕೇಳಿಲ್ಲ ಎಂದು ನೇರವಾಗಿ ಗೃಹ ಸಚಿವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಹಾಗೂ ಮಾಜಿ‌ ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ‌ಆರೋಗ್ಯದ ಬಗ್ಗೆ ಪೋನ್ ಮಾಡಿ ವಿಚಾರಿಸಿದ್ದಾರೆ. ನಾವು ಹಲ್ಲೆಗೆ ಒಳಪಡುವರು ಅಂತ ಗೃಹ ಸಚಿವರು ಸುಮ್ಮನೆ ಆಗಿರಬಹುದು ಎಂದರು.

Advertisement

ನನಗೆ ಬಹಳ ತೊಂದರೆ ಆಗಿದೆ, ಕೊಲೆ ಮಾಡಲು ಬಂದವರು, ಹುಚ್ಚು ನಾಯಿ ಅಟ್ಟಿಸಿಕೊಂಡು ಬಂದ ರೀತಿಯಲ್ಲಿ ಜನ ನನ್ನ ಅಟ್ಟಿಸಿಕೊಂಡು ಬಂದರು. ನಾನು ಅಂದು ಪ್ರಾಣ ಉಳಿಸಿಕೊಂಡಿದ್ದೇ ಹೆಚ್ಚು. ಬಟ್ಟೆ ಹೋದರೆ ಹೋಯ್ತು, ಪ್ರಾಣ ಹೋದರೆ ಏನು ಗತಿ ಎಂದು ಹೇಳಿದರು.

ನನ್ನ ನೋವು ಏನಂದರೆ ನಾನು ನನ್ನ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಗೃಹ ಸಚಿವರು ಇಲ್ಲಿಯವರೆಗೆ ಶಾಸಕ ಅಲ್ಲ ಸಹೋದ್ಯೋಗಿ ಎಂದೂ ಪೋನ್ ಮಾಡಿಲ್ಲ ಇವರು ಹೊಡೆಸಿಕೊಳ್ಳುವ ಜನ ಬೈಸಿಕೊಳ್ಳುವ ಜನ ಅಂತ ಅವರ ಮನಸ್ಸಿಗೆ ಬಂದಿರಬಹುದು ಎಂದು ಹೇಳಿದರು.

ಶಾಸಕ ಸ್ಥಾನದಲ್ಲಿ ಇದ್ದು, ಪ್ರತಿಯೊಂದು ರಕ್ಷಣೆ ಮಾಡುವಂತವರು ಈ ಘಟನೆಯಲ್ಲಿ ಸುಮ್ಮನೆ ಆಗಿದ್ದು ಬೇಸರವಿದೆ ನಮಗೆ ಅಧಿಕಾರಿಗಳನ್ನು ಹಾಕಿ ಕೊಡಿ ಅಂದಿದ್ದೆ, ಒಬ್ಬ ಗ್ರಹ ಸಚಿವರಾಗಿ ನನ್ನ ಮಾತನಾಡಿಸಿಲ್ಲವೆಂದರೆ ನಿಮಗೆ ಏನ್ ಅನಿಸಬಹುದು. ಸಿ.ಟಿ ರವಿ ಹಾಗೂ ಯಡಿಯೂರಪ್ಪ ಅವರು ತಾಳ್ಮೆಯಿಂದ ಇರುವಂತೆ ಹೇಳಿದ್ದಾರೆ. ನಾನು ಮಾತನಾಡಿದ ಮೇಲೆ ಅವರು ಮಾತನಾಡಬೇಕೆ? ನನ್ನ ವಿಚಾರದಲ್ಲಿ ಗೃಹ ಸಚಿವರು ಸರಿಯಾಗಿ ನಡೆದುಕೊಂಡಿಲ್ಲ. ಆನೆ ದಾಳಿ ನಡೆದೇ ನಡೆಯುತ್ತೆ, ಇನ್ನೂ ಆನೆ ದಾಳಿ ತಪ್ಪಲ್ಲ, ಕ್ಷೇತ್ರದಲ್ಲಿ ಏನಾದರೂ ಆದರೆ ಶಾಸಕರು ಸಾಂತ್ವನ ಹೇಳೋಕೆ ಹೋಗಬಾರದೆ ಎಂದು ಪ್ರಶ್ನಿಸಿದರು.

ಗೃಹ ಸಚಿವರ ನಡವಳಿಕೆ ಸರಿಯಿಲ್ಲ. ರಾಜ್ಯದ ಹೊಣೆ ಹೊತ್ತಿರುವ ತಾವು ನನ್ನ ಪ್ರಾಣ ಹೊಂದರೆ ಯಾರು ಹೊಣೆಗಾರರು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next