Advertisement
ಹಲವಾರು ವರ್ಷಗಳಿಂದ ಎಂಜಿಎಂ ಆಸ್ಪತ್ರೆ ರಸ್ತೆ ಹಾಗೂ ಆಸ್ಪತ್ರೆ ಪ್ರಾಂಗಣದಲ್ಲಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯ ಕೇಳಿಬಂದಿತ್ತು. ಇದರಿಂದ ಜಿಲ್ಲಾಡಳಿತ ಆಸ್ಪತ್ರೆಗೆ ಸಾಗುವ ಹಾಗೂ ಒಳಾಂಗಣದ ರಸ್ತೆಗಳನ್ನು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಂತೆ ಅನುದಾನ ಬಿಡುಗಡೆಗೊಳಿಸಿತ್ತು. ಈ ಕಾರಣಕ್ಕಾಗಿ ಇಲ್ಲಿಗೆ ಒಂದು ತಿಂಗಳಿಗೆ ಸರಿಯಾಗಿ ಕೆಲಸ ಪ್ರಾರಂಭಿಸುವ ಉದ್ದೇಶದಿಂದ ಆಸ್ಪತ್ರೆಯ ಬಲಭಾಗದ ಗೇಟ್ ಮುಚ್ಚಲಾಗಿದೆ.
Related Articles
Advertisement
ಅಲ್ಲದೇ, ತಾಲೂಕು ಆಸ್ಪತ್ರೆ ಎಂದರೆ ಬಹಳ ಪ್ರಾಮುಖ್ಯತೆ ಇರುತ್ತದೆ. ಪ್ರತಿನಿತ್ಯ ಸಾವಿರಾರು ರೋಗಿಗಳು ಬಂದು ಹೋಗುವ ಸ್ಥಳವಾಗಿದೆ. ಕಾಮಗಾರಿ ಬೇಗ ಮುಕ್ತಾಯಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿತ್ತು. ತುರ್ತು ಸಂದರ್ಭಗಳಲ್ಲಿ ಒಂದೊಂದು ನಿಮಿಷ ಸಹ ಗಣನೆಗೆ ಬರುತ್ತದೆ. ಮತ್ತೂಂದು ಗೇಟ್ ಬಳಸಿಕೊಂಡು ಸಾಗಲು ಸಮಯ ವ್ಯರ್ಥವಾಗುವುದರಿಂದ ತೊಂದರೆ ಹೆಚ್ಚು ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ಕೆಲಸ ದೇವರ ಕೆಲಸ ಎಂಬ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಸರ್ಕಾರದ ಕೆಲಸವನ್ನು ದೇವರೇ ಬಂದು ಮಾಡಿಕೊಳ್ಳಲಿ ಎಂಬಂತೆ ಇಲ್ಲಿ ಕೆಲಸದ ಕುರಿತು ಅಸಡ್ಡೆ ಪ್ರದರ್ಶನ ಮಾಡಲಾಗುತ್ತಿದೆ. ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿರುವುದು ಒಳ್ಳೆಯ ಕಾರ್ಯ. ಆದರೆ, ಸಾರ್ವಜನಿಕರ, ವೃದ್ಧರ, ಮಹಿಳೆಯರ, ಮಕ್ಕಳ ಹಾಗೂ ರೋಗಿಗಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಿಗದಿತ ಸಮಯಕ್ಕಿಂತ ಬೇಗ ಕಾಮಗಾರಿ ಮುಗಿಸಿದ್ದರೆ ಎಲ್ಲರಿಗೂ ಅನುಕೂಲವಾಗುತ್ತಿತ್ತು. ಆದರೆ, ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯತನ ಖಂಡನೀಯ ಎಂದು ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಅವರು ಆರೋಪ ವ್ಯಕ್ತಪಡಿಸಿದರು.
ಆರೋಪ- ಪ್ರತ್ಯಾರೋಪಗಳು ಏನೇ ಇದ್ದರೂ ಕಾಮಗಾರಿಯ ನಿಧಾನಗತಿಯಿಂದಾಗಿ ಸಾರ್ವಜನಿಕರು ಪ್ರತಿನಿತ್ಯ ಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಸದಾ ಜನನಿಬಿಡತೆಯಿಂದ ಕೂಡಿರುವ ತಾಲೂಕು ಆಸ್ಪತ್ರೆ ಇಂತಹದ್ದೊಂದು ನಿರ್ಲಕ್ಷ್ಯತೆಯ ಕಾರಣದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿ ಗುರುತಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.
ಸುಧೀರ್ ಮೊದಲಮನೆ