ಮೂಡಿಗೆರೆ : ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ ಚಾರ್ಮಾಡಿ ಘಾಟ್ ವರೆಗೆ ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಸ್ವಚ್ಛತಾ ಅಭಿಯಾನ ನಡೆಯಿತು.
ಈ ಅಭಿಯಾನದಲ್ಲಿ ಜಿ.ಪಂ, ತಾ.ಪಂ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ತೋಟಗಾರಿಕಾ ಇಲಾಖೆ, ಶಿಕ್ಷಣ ಇಲಾಖೆ, ಆಶಾ ಕಾರ್ಯಕರ್ತೆಯರು, ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳು, ಶಾಲೆಗಳ ಎನ್ ಎಸ್ ಎಸ್ ಶಿಬಿರಾರ್ಥಿಗಳು, ಶೌರ್ಯ ವಿಪತ್ತು ನಿರ್ವಹಣಾ ತಂಡಗಳು ಸೇರಿ ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಭಕ್ತರು ಧರ್ಮಸ್ಥಳ ಪಾದಯಾತ್ರೆ ನಡೆಸಿದ ಮಾರ್ಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ ಚಾರ್ಮಾಡಿ ಘಾಟ್ ವರೆಗೆ ಸುಮಾರು 800 ಮಂದಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ದಿನವಿಡಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.
ಚಿಕ್ಕಮಗಳೂರಿನಿಂದ ಮೂಡಿಗೆರೆವರೆಗೆ, ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ ಚಾರ್ಮಾಡಿ ಘಾಟ್ ವರೆಗೆ, ಮೂಡಿಗೆರೆಯಿಂದ ಕಸ್ಕೆಬೈಲ್ ವರೆಗೆ ಸ್ವಚ್ಛತೆ ನಡೆಯಿತು ಈ ವೇಳೆ ರಸ್ತೆ ಬದಿಯಲ್ಲಿ ಎಸೆದಿದ್ದ ಪ್ಲಾಸ್ಟಿಕ್ ಬಾಟಲಿ, ತಿಂಡಿ ಪ್ಯಾಕೆಟ್ ಸೇರಿ ಲೋಡ್ ಗಟ್ಟಲೆ ತ್ಯಾಜ್ಯ ಸಂಗ್ರಹ ಮಾಡಲಾಯಿತು.
ಇದನ್ನೂ ಓದಿ : ಯುಪಿ ಚುನಾವಣೆ ಫೈನಲ್ ಮತದಾನ: ಮತಗಟ್ಟೆಯಲ್ಲಿ ಗಮನ ಸೆಳೆದ ವೃದ್ಧ ದಂಪತಿ