Advertisement
ಮೂಡುಬಿದಿರೆಯ ಶುಕ್ರವಾರದ ಸಂತೆ ಜಿಲ್ಲೆಯಲ್ಲೇ ಸುಪ್ರಸಿದ್ಧ. ಆ ದಿನ ಇಲ್ಲಿನ ಪರಿಸರದ ಗ್ರಾಮಗಳ ಕೃಷಿಕರು ಮಾತ್ರವಲ್ಲ ಜಿಲ್ಲೆ, ಹೊರಜಿಲ್ಲೆಗಳ ವ್ಯಾಪಾರಿಗಳೂ ಪಾಲ್ಗೊಳ್ಳುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಾರೆ. ಆದರೆ ಶುಕ್ರವಾರ ರಾತ್ರಿ ಸಂತೆ ವ್ಯಾಪಾರ ಮುಗಿದ ಬಳಿಕ ಏನಾಗುತ್ತಿದೆ ಎಂಬುದನ್ನು ಶನಿವಾರ ಮುಂಜಾನೆ ಬಂದೊಮ್ಮೆ ನೋಡಬೇಕು.
Related Articles
Advertisement
ಸಮಸ್ಯೆ ತಡೆಯಲು ಹೀಗೆ ಮಾಡಿ
ಅಲ್ಲಲ್ಲಿ ಒಣಕಸ, ಹಸಿಕಸ ಸಂಗ್ರಹಕ್ಕೆ ಪ್ರತ್ಯೇಕವಾಗಿರುವ, ಟಿಲ್ಟಿಂಗ್ ಮಾದರಿಯ ಡ್ರಮ್ ಗಳನ್ನು ಶಾಶ್ವತವಾಗಿರಿಸಬೇಕು; ವ್ಯಾಪಾರಿಗಳು ತಮ್ಮ ಬಿಡಾರ ಬಿಚ್ಚಿ ಹೊರಡುವಾಗ ತಮ್ಮ ವ್ಯವಹಾರದಲ್ಲಾದ ತ್ಯಾಜ್ಯವಸ್ತುಗಳನ್ನೆಲ್ಲ ಅದರಲ್ಲಿ ಸುರಿದು ಹೋಗುವಂತೆ ತಾಕೀತು ಮಾಡಬೇಕು. ಆಗ, ಮರುದಿನ ಬರುವ ಪೌರಕಾರ್ಮಿಕರು ತಮ್ಮ ವಾಹನಕ್ಕೆ ತ್ಯಾಜ್ಯ ವಸ್ತುಗಳನ್ನು ಹೇರಿ ಹೊರ ಸಾಗಿಸಲು ಅನುಕೂಲವಾಗುತ್ತದೆ.