Advertisement

ಸಾಮಾಜಿಕ ಕಾರ್ಯಚಟುವಟಿಕೆಗಳಿಂದ ಹೆಸರುವಾಸಿಯಾಗಿರುವ ಸಂಘ

10:25 PM Feb 15, 2020 | Team Udayavani |

ಗ್ರಾಮೀಣ ಭಾಗದ ಹೈನುಗಾರರನ್ನು ಸ್ವಾವಲಂಬಿಯನ್ನಾಗಿಸುವುದರ ಜತೆಗೆ ನಿರಂತರ 53 ವರ್ಷಗಳಿಂದ ಸಾಮಾಜಿಕ ಕಾರ್ಯಚಟುವಟಿಕೆಗಳಿಂದ ಕಡಂದಲೆ ಹಾಲು ಉತ್ಪಾದಕರ ಸಹಕಾರ ಸಂಘವೂ ಗುರುತಿಸಿಕೊಂಡಿದೆ. ಗ್ರಾಹಕರಿಗೆ ಉತ್ತಮ ಹಾಲಿನದರದ ಜತಗೆ ಗುಣಮಟ್ಟವನ್ನು ಕೂಡ ನೀಡಲಾಗುತ್ತಿದೆ.

Advertisement

ಮೂಡುಬಿದಿರೆ: 1967ರ ಮಾರ್ಚ್‌ 16ರಂದು 50 ಮಂದಿ ಹೈನುಗಾರ ಸದಸ್ಯರೊಂದಿಗೆ ಸ್ಥಾಪನೆಯಾದ ಕಡಂದಲೆ ಹಾಲು ಉತ್ಪಾದಕರ ಸಹಕಾರ ಸಂಘವು ಸ್ಥಾಪನೆಯಾಗಿ 53 ವರ್ಷ ಕಳೆದಿವೆ. ಇತ್ತೀಚೆಗೆ ನಿಧನ ಹೊಂದಿದ ಮಾಜಿ ಸಚಿವ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಅವರು ಸ್ಥಾಪಕಾಧ್ಯಕ್ಷರಾಗಿ ಸಹಕಾರಿ ರಂಗವನ್ನು ಪ್ರವೇಶಿಸಿದವರು. ಲಕ್ಷ್ಮಣ ಸನಿಲ್‌ ಸ್ಥಾಪಕ ಕಾರ್ಯದರ್ಶಿ. ಮೊದಲು ಪಾಲಡ್ಕದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಈ ಸಂಘವು ಕಡಂದಲೆ ಪಲ್ಕೆಯಲ್ಲಿ 1994ರಲ್ಲಿ ನೂತನ ಕಟ್ಟಡದಲ್ಲಿ ನೆಲೆಗೊಂಡಿತು. ಆರಂಭದಲ್ಲಿ ದಿನಕ್ಕೆ 20 ಲೀ. ಈಗ 1,380 ಲೀ. ಹಾಲು ಸಂಗ್ರಹವಾಗುತ್ತಿದೆ. ಮೊದಲು ಕೆನರಾ ಮಿಲ್ಕ್ ಯೂನಿಯನ್‌ಗೆ ಹಾಲು ಪೂರೈಸಲಾಗುತ್ತಿದ್ದು ಅನಂತರ ಕೆಎಂಎಫ್‌ಗೆ ಹಾಲು ನೀಡಲಾಗುತ್ತಿದೆ. 2012ರಲ್ಲಿ ಬಿಎಂಸಿ (ಬಲ್ಕ್ ಮಿಲ್ಕ್ ಕೂಲರ್‌) ವ್ಯವಸ್ಥೆಯಿಂದ ಶೀಥಲೀಕರಣ ನಡೆಸಲಾಗುತ್ತಿದೆ. ಸಂಘದ ವತಿಯಿಂದ

ಇತರ ಚಟುವಟಿಕೆಗಳು
ಆರೋಗ್ಯ ಶಿಬಿರಗಳು, ಯುವಜನತೆ ಮತ್ತು ಮಹಿಳೆಯರಿಗೆ ಹೈನುಗಾರಿಕೆ ಮಾಹಿತಿ ಶಿಬಿರ, ಮಹಿಳೆಯರಿಗೆ ಜನಜಾಗೃತಿ ಶಿಬಿರ, 20ಗೆ ಮಂದಿ ವಿದ್ಯಾರ್ಥಿ ವೇತನ (ರೂ. 12,000), ಹಾಲು ಉತ್ಪಾದಕರ ಒಕ್ಕೂಟದ ಯೋಜನೆಗಳಾದ ಕರು ಸಾಕಾಣಿಕೆ, ಮಿನಿ ಡೈರಿ, ಗೋಬರ್‌ ಗ್ಯಾಸ್‌, ಹಾಲು ಕರೆಯುವ ಯಂತ್ರ ಖರೀದಿ ಮೊದಲಾದ ಯೋಜನೆಗಳನ್ನು ಸದಸ್ಯರಿಗಾಗಿ ಕಾರ್ಯಗತಗೊಳಿಸಲಾಗಿದೆ. ಸ್ವಂತ ನೀರಿನ ವ್ಯವಸ್ಥೆ ಇದೆ. ಸಂಘವು ಪಡಿತರ ವಿತರಣ ಕಾರ್ಯವನ್ನೂ ನಡೆಸುತ್ತಿದೆ.

ಅಧ್ಯಕ್ಷರು
ಅಮರನಾಥ ಶೆಟ್ಟಿ (1967-72), ಗೋವಿಂದ ಶೆಟ್ಟಿ (1972-73), ಕೆ. ಪಾಂಡುರಂಗ ಶೆಟ್ಟಿ (1974-77), ಲಿಗೊರಿ ದಾಂತಿಸ್‌ (1977-81), ಅಂಬ್ರೋಜ್‌ ಸಿಕ್ವೇರ (1981-85), ಕೆ. ಪಾಂಡುರಂಗ ಶೆಟ್ಟಿ (1985-91), ಅಂಬ್ರೋಜ್‌ ಸಿಕ್ವೇರ (1991-95), ಕೆ. ಪಾಂಡುರಂಗ ಶೆಟ್ಟಿ (1995-2004) ಮತ್ತು ಕೆ.ಪಿ. ಸುಚರಿತ ಶೆಟ್ಟಿ 2004ರ ಸೆ. 30ರಿಂದ ಇದುವರೆಗೂ ಅಂದರೆ 16 ವರ್ಷಗಳಿಂದಲೂ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

ಕಾರ್ಯದರ್ಶಿಗಳು
ಲಕ್ಷ್ಮಣ ಸನಿಲ್‌ ಅವರು ಆರಂಭದಿಂದ 1972 ಜು. 25ರ ವರೆಗೆ , ಎಂ. ಅಂಥೋನಿ ಡಿ’ಸೋಜಾ ಅವರು 1972ರ ಜು. 26ರಿಂದ 1977ರ ಜು. 25ರ ವರೆಗೆ, ಪ್ರವೀಣ್‌ ಕುಮಾರ್‌ ಅವರು 1977ರ ಡಿ.1ರಿಂದ 2012 ಆ. 31ರ ವರೆಗೆ ಹಾಗೂ ಶಿವರಾಮ ಶೇರಿಗಾರ್‌ ಅವರು 2012ರ ಸೆ. 1ರಿಂದ ಇದುವರೆಗೂ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ದ.ಕ.ಹಾಲು ಉತ್ಪಾದಕರ ಸಂಘಕ್ಕೆ ನಾವು ಗುಣಮಟ್ಟದ ಹಾಲು ಸಂಗ್ರಹಿಸಿ ನೀಡುತ್ತಿದ್ದೇವೆ. ಸಂಘ ಸ್ಥಾಪನೆಯಾದ ಬಳಿಕ ಸುತ್ತಮುತ್ತ ಹಲವಾರು ಸಂಘಗಳು ಹುಟ್ಟಿಕೊಂಡಿದ್ದರೂ ನಮ್ಮ ಹಾಲು ಉತ್ಪಾದನೆ, ಸಂಗ್ರಹ ಉತ್ತಮವಾಗಿದೆ. ಸಬ್ಸಿಡಿ, ಆಧುನಿಕ ತಂತ್ರಜ್ಞಾನ, ಮಾಹಿತಿಗಳ ಪ್ರಯೋಜನ ಸದಸ್ಯರಿಗೆ ಲಭಿಸುವಂತೆ ಮಾಡುತ್ತಿದ್ದೇವೆ. ಸರಕಾರದ ನ್ಯಾಯಬೆಲೆ ಅಂಗಡಿಯ ಮೂಲಕ ಜನರಿಗೆ ಪಡಿತರವನ್ನೂ ವಿತರಿಸುತ್ತಿದ್ದೇವೆ. ಸಹಕಾರ ತತ್ತÌದಡಿ ಪಾರದರ್ಶಕ ಆಡಳಿತ ನೀಡುತ್ತಿದ್ದೇವೆ.
– ಕೆ.ಪಿ. ಸುಚರಿತ ಶೆಟ್ಟಿ,
ಅಧ್ಯಕ್ಷರು, ಕಡಂದಲೆ ಹಾಲು ಉತ್ಪಾದಕರ ಸಹಕಾರ ಸಂಘ ನಿ.

ಕೃತಕ ಗರ್ಭಧಾರಣ ವ್ಯವಸ್ಥೆ ಇದೆ. ನಾಲ್ಕು ಬಾರಿ ಜಾನುವಾರು ಪ್ರದರ್ಶನ ನಡೆಸಲಾಗಿದ್ದು ಉತ್ತಮ ಸ್ಪಂದನೆ ಕಂಡುಬಂದಿತ್ತು. ಈ ಸಂಘದಲ್ಲಿ ಇದುವರೆಗೂ ಚುನಾವಣೆ ನಡೆದಿಲ್ಲ; ಅವಿರೋಧ ಆಯ್ಕೆಯೇ ನಡೆದಿರುವುದು ವಿಶೇಷ.

ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next