Advertisement
ಪ್ರಕರಣದ ವಿವರ2019ರ ಜುಲೈ 1 ರಂದು ತಡರಾತ್ರಿ ಸಾವಿರ ಕಂಬದ ಬಸದಿಗೆ ನುಗ್ಗಿ ಬಸದಿಯ ಒಳಗಡೆ ಇದ್ದ ಆರು ಬೀಗಗಳನ್ನು ಒಡೆದು ಕಳವಿಗೆ ಯತ್ನಿಸಿದ ಘಟನೆ ಮರುದಿನ ಮುಂಜಾನೆ ಬಸದಿಯ ಸಿಬಂದಿಗಳಿಗೆ ಘಟನೆ ಬೆಳಕಿಗೆ ಬಂದಿತ್ತು. ಬಸದಿ ಮೊಕ್ತೇಸರ ಪಟ್ಣಶೆಟ್ಟಿ ವಸುದೇಶ್ ಕುಮಾರ್ ಪೊಲೀಸರಿಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಸುಮಾರು ಒಂದು ತಿಂಗಳ ಬಳಿಕ ಆರೋಪಿ ಪುನೀತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
Related Articles
ಆರೋಪಿಗೆ ಜಾಮೀನು ದೊರೆತರೂ ಭದ್ರತೆ ನೀಡಲು ಯಾರೂ ಮುಂದೆ ಬರದ ಕಾರಣ ಮತ್ತು ಈಗಾಗಲೇ ಆರೋಪಿ ಮೂರು ವರ್ಷಗಳಿಗಿಂತಲೂ ಹೆಚ್ಚು ಸಮಯ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಕಳೆದಿರುವುದರಿಂದ ಬಸದಿ ಕಳವು ಯತ್ನ ಪ್ರಕರಣದಲ್ಲಿ ವಿಧಿಸಬಹುದಾದ ಶಿಕ್ಷೆಯ ಅವಧಿಯನ್ನು ಅನುಭವಿಸಿ ಮುಗಿಸಿದ್ದಾನೆ. ಹೀಗಾಗಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸುವುದಾಗಿ ಆರೋಪಿ ಪರ ವಕೀಲರು ತಿಳಿಸಿದ್ದಾರೆ.
Advertisement