Advertisement

Moodbidri; ಭಜನೆಯಿಂದ ಮನಸ್ಸಿನ ಸಮತೋಲನ ಕಾಪಾಡಲು ಸಾಧ್ಯ

05:23 PM Oct 20, 2023 | Team Udayavani |

ಮೂಡುಬಿದಿರೆ: ಇರುವೈಲು ಶ್ರೀದುರ್ಗಾಪರಮೇಶ್ವರೀ ಕುಣಿತ ಭಜನ ಮಂಡಳಿಯ ವತಿಯಿಂದ ಸದಸ್ಯರಿಗೆ ಸಮ ವ ಸ್ತ್ರ ವಿತರಣೆ ಮತ್ತು ಹೈಕೋರ್ಟ್‌ನ ಹಿರಿಯ ನಿರ್ದೇಶಿತ ನ್ಯಾಯವಾದಿ ತಾರಾನಾಥ ಪೂಜಾರಿ ಅವರನ್ನು ದೇವಸ್ಥಾನದ ಸಭಾಭವನದಲ್ಲಿ ಸಮ್ಮಾನಿಸಲಾಯಿತು.

Advertisement

ತಾರಾನಾಥ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಭಜನೆ ಯಿಂದ ಮನಸ್ಸಿನ ಸಮತೋಲನ ಕಾಪಾಡಿ ಕೊಳ್ಳಲು ಸಾಧ್ಯ,
ಇದರಿಂದ ಶಿಸ್ತು, ಸಂಯಮ, ಶ್ರದ್ದೆ ಬೆಳೆಯುತ್ತದೆ. ವಿದ್ಯಾರ್ಥಿಗಳು ವಿದ್ಯಾ ಭ್ಯಾಸಕ್ಕೆ ಅಡಚಣೆ ಯಾಗದಂತೆ ಭಜನ
ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು.

ಯಾವುದೇ ಕಷ್ಟಗಳು ಬಂದರೂ ಎದುರಿಸುವ ಧೈರ್ಯ ಬೆಳಿಸಿಕೊಂಡು, ಋಣಾತ್ಮಕ ಚಿಂತನೆ ಹೊಂದಿರುವವರಿಂದ ದೂರವಿದ್ದು, ಧನಾತ್ಮಕ ಚಿಂತನೆಯ ಜನರೊಂದಿಗೆ ಬೆರೆತು ಯಾವುದೇ ಕಷ್ಟ ಬಂದರೂ ಇನ್ನೊಬ್ಬರನ್ನು ಅವಲಂಬಿ
ಸದೆ ಕಷ್ಟಗಳನ್ನು ಎದುರಿಸುವ ಮನೋಬಲವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ನಂದಿನಿ, ಪೂಜಾ ಅವರಿಗೆ ಅತಿಥಿಗಳು ಶಾಲು ಹೊದೆಸಿ, ಫಲಪುಷ್ಪ ನೀಡಿ ಗೌರವಿಸಿದರು. ಇರುವೈಲು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಐ. ಕುಮಾರ್‌ ಶೆಟ್ಟಿ ಮಾತನಾಡಿ, ಭಜನೆಯು ಮನಸ್ಸಿಗೆ ನೆಮ್ಮದಿಯ ಜತೆಗೆ ದೇವರನ್ನು ಒಲಿಸಿ ಕೊಳ್ಳುವ ಸರಳ ಮತ್ತು ಸುಲಭದ ದಾರಿ ಎಂದರು.

ಉದ್ಯಮಿಗಳಾದ ಸತೀಶ್ಚಂದ್ರ ಪಾಣಿಲ, ಶಾಂತಲಾ ಎಸ್‌. ಆಚಾರ್ಯ ಮೂಡುಬಿದಿರೆ ಮಾತನಾಡಿ, ಶುಭ ಹಾರೈಸಿದರು. ಶ್ರೀ ದುರ್ಗಾಪರಮೇಶ್ವರೀ ಭಜನ ಮಂಡಳಿ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಹಿರಿಯ ಭಜಕ ಹರಿಪ್ರಸಾದ್‌ ಶೆಟ್ಟಿ ಕೊಲ್ಲಾಯಿಕೊಡಿ ಉಪಸ್ಥಿತರಿದ್ದರು.

Advertisement

ಸ್ಥಳೀಯ ಗಣ್ಯರು, ಜನಪ್ರತಿನಿದಿಗಳು, ಸಂಘ-ಸಂಸ್ಥೆಗಳ ಪ್ರಮುಖರು, ಭಕ್ತರು ಪಾಲ್ಗೊಂಡಿದ್ದರು. ನಂದಿನಿ ಸ್ವಾಗತಿಸಿದರು.
ಗುರು ಪ್ರಸಾದ್‌, ಭರತ್‌, ಅಶ್ವತ್ಥ ಸಮ್ಮಾನ ಪತ್ರ ವಾಚಿಸಿದರು. ನಿಶಾ ನಿರೂಪಿಸಿ, ಗುರುಪ್ರಸಾದ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next