Advertisement
ಶ್ರೀ ಜೈನ ಮಠಕ್ಕೆ ಭೇಟಿ ನೀಡಿದ ಅವರು ಭಟ್ಟಾರಕ ಸ್ವಾಮೀಜಿಯವರೊಂದಿಗೆ ಶ್ರೀಗಳೊಂದಿಗೆ ಮಾತುಕತೆ ನಡೆಸಿ ಅಲ್ಲಿಂದ ನಗರ ಸಂಚಾರವನ್ನು ಆರಂಭಿಸಿದರು.
Related Articles
Advertisement
“ಒಂದು ಪ್ರದೇಶವನ್ನು ಪರಿವೀಕ್ಷಿಸುವ “ಏರಿಯಾ ಫೆಮಿಲಿಯರೈಸೇಶನ್’ ಕಾರ್ಯಕ್ರಮದನ್ವಯ ಪೊಲೀಸ್ ಅಧಿಕಾರಿಗಳು ನಗರ ಸಂಚಾರ ನಡೆಸುವ ಪರಿಕ್ರಮ ಇದಾಗಿದೆ. ಬಹಳ ಮುಖ್ಯವಾಗಿ ಪೊಲೀಸರು ಜನಸ್ನೇಹಿಯಾಗಿರುವ ಜತೆಗೆ ಪಕ್ಷಪಾತವಿಲ್ಲದೆ ಎಲ್ಲರನ್ನೂ ಸಮಾನವಾಗಿ, ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳಬೇಕು. ಎಲ್ಲೂ ರಾಜಕೀಯ, ರಾಜಕೀಯ ಹಸ್ತಕ್ಷೇಪವಿಲ್ಲದ ಹಾಗೆ ನೋಡಿಕೊಳ್ಳಬೇಕು. ಆದಷ್ಟು ಜನಸಂಪರ್ಕವನ್ನು ಹೆಚ್ಚಿಸಬೇಕು. ಅಪರಾಧ ಕೃತ್ಯಗಳು, ಅಕ್ರಮ ವ್ಯವಹಾರಗಳಿಗೆ ನಿರ್ದಾಕ್ಷಿಣ್ಯವಾಗಿ ಕಡಿವಾಣ ಹಾಕಬೇಕು. ಆರಾಧನ ತಾಣಗಳಲ್ಲಿ ಯಾವುದೇ ರೀತಿಯ ಅಶಾಂತಿ ತಲೆದೋರದ ಹಾಗೆ, ಸಾಮರಸ್ಯದ ಭಾವದಿಂದ ಜನರು ವ್ಯವಹರಿಸುವಂಥ ವಾತಾವರಣ ರೂಪಿಸುವುದು ಪೊಲೀಸರ ಕರ್ತವ್ಯ ಎಂದು ಪೊಲೀಸ್ ಕಮಿಷ ನರ್ ಎನ್. ಶಶಿಕುಮಾರ್ ತಿಳಿಸಿದರು.