Advertisement

ಸಾಹಸ ಪ್ರವೃತ್ತಿ ಉದ್ದೀಪಿಸುವ ತರಬೇತಿ

11:49 PM Dec 22, 2022 | Team Udayavani |

ಮೂಡುಬಿದಿರೆ: ಜಾಂಬೂರಿಯಲ್ಲಿ ಪ್ರಧಾನವಾಗಿ ಪ್ರಶಿಕ್ಷಣಾರ್ಥಿಗಳಲ್ಲಿ ಪರಿಸರ ಪ್ರೀತಿಯೊಂದಿಗೆ, ಪರಿಸರದೊಂ ದಿಗೆ ಹೊಂದಿ ಬಾಳುವ ಶಿಕ್ಷಣ ನೀಡುವ, ಮನೋಸ್ಥೈರ್ಯ, ಸಾಹಸ ಪ್ರವೃತ್ತಿಯನ್ನು ಉದ್ದೀಪಿಸುವ ತರಬೇತಿ ವಿಶೇಷವಾಗಿ ನಡೆಯುತ್ತಿದೆ.

Advertisement

ವಿವೇಕಾನಂದ ನಗರದ ಆಳ್ವಾಸ್‌ ಪ್ರಾಥಮಿಕ ಶಾಲೆಯ ಹಿಂಭಾಗದ ಗುಡ್ಡ ಪ್ರದೇಶದಲ್ಲಿ ರೂಪಿಸಲಾದ ಚ್ಯಾಲೆಂಜ್‌ ವ್ಯಾಲಿಯಲ್ಲಿ ಕಲೆತ ವಿದ್ಯಾರ್ಥಿಗಳು ಸುಮಾರು 100 ಬಗೆಯ ಸಾಹಸಮಯ ಅಟಗಳಲ್ಲಿ ತೊಡಗಿ ಖುಷಿ ಪಟ್ಟರು.

ಖುಷಿ… ಥ್ರಿಲ್ಲಿಂಗ್‌ ….

ನೀರಿನ ಹೊಂಡಕ್ಕೆ ಬೆನ್ನು ಹಾಕಿ ಜಿಗಿಯುವ ಹೊತ್ತು ಏನಾಗುತ್ತದೆಯೋ ಏನೋ ಎಂಬ ಭಾವನೆಯಿಂದಲೇ ಜಿಗಿ ದವರೇ ಹೆಚ್ಚು. ಕೋಲಾರದ ಎಂಡಿಆರ್‌ಎಸ್‌ ಸ್ಕೂಲಿನ ವೆಂಕಟರಾಯ, ಮುಕುಂದ ಇವರೆಲ್ಲ ಬಹಳ ಖುಷಿಯಾ ಗ್ತಿದೆ ಸರ್‌, ಥ್ರಿಲ್ಲಿಂಗ್‌ ಆಗ್ತಿದೆ ಎಂದರು. ದಾವಣ ಗೆರೆಯ ಪ್ರಥಮ ಪಿಯುಸಿಯ ವಿದ್ಯಾರ್ಥಿನಿ ನಿಸರ್ಗ “ಭಯವಾಗಿತ್ತು, ಆದರೂ ಜಿಗಿದ ಬಳಿಕ ಖುಷಿ ಆಗ್ತಿದೆ’ ಎಂದು ಮುಖವರಳಿಸಿದರು.

ಡೆರಿಕ್‌ ಬ್ರಿಜ್‌ನಲ್ಲಿ ಹಗ್ಗವನ್ನು ರಾಟೆ ಮೂಲಕ ಎಳೆದುಕೊಂಡು ಹೊಂಡದ ಒಂದು ಭಾಗದಿಂದ ಮತ್ತೂಂದೆಡೆ ಸಾಗುವ ಅನುಭವ ವಿಶಿಷ್ಟವಾಗಿದೆ ಎಂದು ಬೆಂಗಳೂರು ಗ್ರಾಮಾಂತರದ ಎ.ವಿ. ರೇವಲಾಶ್ವರೀ ಹೇಳಿದರು.

Advertisement

ಜೀವ ಬಾಯಿಗೆ ಬಂತು! : 

ಸುಮಾರು 10 ಅಡಿ ಎತ್ತರದಲ್ಲಿ ಚೌಕಾಕಾರದ ಜಾಯಿಂಟ್‌ ಪ್ರೋಜೆಕ್ಟ್ ನ ಹಾದಿಯಲ್ಲಿ ನಡೆಯುತ್ತ ಸಾಗುವ ಸವಾಲು ಪ್ರಶಿಕ್ಷಣಾರ್ಥಿಗಳಿಗಿತ್ತು. ಈ ತರಬೇತಿ ಟ್ರೆಕ್ಕಿಂಗ್‌ಗೆ ಸೂಕ್ತವಾಗಿದೆ ಎಂದ ಶಿವಮೊಗ್ಗದ 8ನೇ ತರಗತಿಯ ವಿದ್ಯಾರ್ಥಿನಿ ಶ್ರೀರಕ್ಷಾ “ಜೀವ ಬಾಯಿಗೆ ಬಂದ ಹಾಗಾಯಿತು’ ಎಂದರು.

ಹೀಗೆಯೇ ಹ್ಯಾಂಗಿಂಗ್‌ ಬ್ರಿಜ್‌, ಹಗ್ಗದ ಮಗ್ಗವನ್ನೇರ ಬೇಕಾದ ರಶಿಯನ್‌ ವಾಲ್‌ ರೋಪ್‌ ಕ್ಲೈಂಬಿಂಗ್‌ನ ಸಾಹಸ ಕ್ರಿಯೆ ನಡೆಸಿದೆ ತಮಿಳುನಾಡಿನ ಪ್ರಥಮ ಬಿಬಿಎ ವಿದ್ಯಾರ್ಥಿನಿ ತಿರುಮಗಳ್‌ ” ಇದು

ನಮಗೆ ಭಯ ನಿವಾರಿಸಿಕೊಳ್ಳಲು, ಆತ್ಮವಿಶ್ವಾಸ ಮೂಡಿಸಲು, ಮನಸ್ಸನ್ನು ಗಟ್ಟಿಯಾಗಿಸಲು ಸಹಕಾರಿ ಎಂದರು.

ರೋಚಕ ಅನುಭವ: 

ಇದೇ ರೀತಿ, ಬ್ಯಾಲೆನ್ಸಿಂಗ್‌ ಬೀಂ ವಾಕ್‌, ಪ್ಲಾಂಕ್‌ ಕ್ಲೈಂಬಿಂಗ್‌, ಮಂಕಿ ಬ್ರಿಜ್‌, ಅಗಲವಾದ ಏಣಿ ಹತ್ತುವ ವೈಡ್‌ ಲ್ಯಾಡರ್‌ ಕ್ಲೈಂಬಿಂಗ್‌, ಟಯರ್‌ ಬ್ಯಾಲೆನ್ಸ್‌ ವಾಕ್‌ ರೋಚಕ ಅನುಭವ ನೀಡಿದವು ಎಂದರು ದೊಡ್ಡ ಬಳ್ಳಾಪುರದ ಕಾರ್ಮೆಲ್‌ ಜ್ಯೋತಿ, ಮಿಥುನ್‌. ಸ್ವಿಂಗಿಂಗ್‌ ಪ್ಲಾಂಕ್‌ನಲ್ಲಿ ನಡೆದ ಕೊಪ್ಪಳ ಕಾರಟಗಿಯ ಚಿರು ರಾಘವೇಂದ್ರ ದೇಹ‌ದ ಸಮತೋಲನ ಕಾಪಾಡಿಕೊ ಳ್ಳುವ ಈ ತರಬೇತಿ ಉತ್ತಮ ಎಂದರು.

ಸೈನಿಕ ತರಬೇತಿಯಂತೆ ಜೋಡಿಸಿಟ್ಟ ಟಯರ್‌ಗಳ ಒಳಗೆ ದೇಹವನ್ನು ತೂರಿಸಿ ಹರಸಾಹಸ ಪಟ್ಟು 10 ದೂರ ಕ್ರಮಿಸಿ ಹೊರಬರುವ ಟಯರ್‌ ಕ್ರಾಲಿಂಗ್‌ ನಿಜಕ್ಕೂ ಒಂದು ಸೈನಿಕ ತರಬೇತಿಯಂತೆ ತೋರಿತು.

ಇದೇ ರೀತಿ ಮಂಕಿ ಕ್ರಾಲಿಂಗ್‌, ಲ್ಯಾಡರ್‌ ಕ್ರಾಸಿಂಗ್‌ ಮೊದಲಾದ ಸಾಹಸಮಯ ಆಟಗಳಲ್ಲಿ ವಿದ್ಯಾರ್ಥಿಗಳೂ ತೊಡಗಿಸಿಕೊಂಡರು. ಪ್ರತಿಯೊಂದು ಚಟುವಟಿಕೆ ನಡೆಸಿದ ಬಳಿಕ ನಿರ್ವಹಣ ಅಧಿಕಾರಿಗಳು ವಿದ್ಯಾರ್ಥಿಗಳ ಕೈಯಲ್ಲಿದ್ದ ದಾಖಲೆ ಪುಸ್ತಿಕೆಯಲ್ಲಿ ಮೊಹರು ಒತ್ತಿ ಮುಂದೆ ಕಳುಹಿಸುತ್ತಿದ್ದರು.

ಸೂಕ್ತ ಮುನ್ನೆಚ್ಚರಿಕೆ: 

ಈ ಎಲ್ಲ ಚಟುವಟಿಕೆಗಳನ್ನು ನಡೆಸುವಾಗ ಯಾವುದೇ ಅವಘಡ ಗಳಾಗದಂತೆ ನುರಿತ ತರಬೇತುದಾರರು ನೋಡಿಕೊಳ್ಳುತ್ತಿದ್ದು ಚಟುವಟಿಕೆ ನಡೆಯುವ ಪ್ರದೇಶದಲ್ಲಿ ಪ್ರಥಮ ಚಿಕಿತ್ಸಾ ಗುಡಾರವನ್ನೂ ಹಾಕಲಾಗಿತ್ತು.

ಕೊಡಗಿನ ಲೀಡರ್‌ ಟ್ರೈನರ್‌ ಜಿಮ್ಮಿ ಸಿಕ್ವೇರಾ ಅವರ ಮೇಲುಸ್ತುವಾರಿ, ನಿರ್ದೇಶನದಲ್ಲಿ ಬಾಬೂರಾವ್‌ ನೆಮ್ಮಾರೆ, ಶಿವಣ್ಣ ದಾವಣಗೆರೆ, ಚಂದ್ರು ಬೆಂಗಳೂರು ಮೊದಲಾದ ಸಹವರ್ತಿಗಳು ವಿವಿಧ ಸಾಹಸ ಕ್ರಿಯೆಗಳ ತರಬೇತಿಯನ್ನು ನೀಡುತ್ತಿದ್ದಾರೆ. 55 ಸಾವಿರ ಮಂದಿ ಪ್ರಶಿಕ್ಷಣಾರ್ಥಿಗಳಿರುವುದರಿಂದ ತಂಡ ತಂಡವಾಗಿ ಎಲ್ಲರಿಗೂ ತರಬೇತಿ ಲಭಿಸುವಂತೆ ವೇಳಾಪಟ್ಟಿ ಮಾv ಲಾಗಿದೆ ಎಂದವರು ತಿಳಿಸಿದರು.

- ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next