Advertisement

Moodbidre: ಭ|ಮಹಾವೀರರ ಜನ್ಮ ಕಲ್ಯಾಣ ಉತ್ಸವ

11:43 PM Apr 06, 2023 | Team Udayavani |

ಮೂಡುಬಿದಿರೆ: ಜೈನ ಕಾಶಿ ಮೂಡುಬಿದಿರೆಯ ಸಾವಿರ ಕಂಬದ ಬಸದಿಯ ಕಿರಿಯ ರಥೋತ್ಸವದೊಂದಿಗೆ ಬುಧವಾರ ಸಂಜೆ ಜರಗಿದ ಭ| ಮಹಾವೀರರ 2622ನೇ ಜನ್ಮಕಲ್ಯಾಣ ಉತ್ಸವವನ್ನು ಮಾಲ್ದಬೆಟ್ಟು ಜಯಪ್ರಕಾಶ್‌ ಪಡಿವಾಳ್‌ ಉದ್ಘಾಟಿಸಿದರು.

Advertisement

ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಸಿಎಸ್‌ ಬ್ಯಾಂಕ್‌ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್‌ ಮಹಾವೀರ ಜ್ಯೋತಿ ಬೆಳಗಿಸಿದರು.

ಭ| ಮಹಾವೀರ ಸ್ವಾಮಿ ಕ್ಷತ್ರಿಯ ಜೈನಕುಲದಲ್ಲಿ ಹುಟ್ಟಿ ನಾನಾ ರೀತಿಯ ಸವಾಲುಗಳನ್ನು ಎದುರಿಸಿದವರು. ಕಾಮ, ಕ್ರೋಧಾದಿ ಆರಿಷಡ್ವೆರಿಗಳು ನಮ್ಮಂತರಂಗದಲ್ಲಿಯೇ ಇವೆ. ಅವುಗಳನ್ನು ರತ್ನತ್ರಯ ಧರ್ಮದ ತಿರುಳು ತಿಳಿದು ಪಾಲಿಸಿ, ಶುದ್ಧ ಆತ್ಮನಾಗಿ, ಭಗವಂತನಾಗುವ ಮೋಕ್ಷಮಾರ್ಗ ಬೋಧಿಸಿ ಲೋಕ ಪ್ರಿಯರಾದವರು ಮಹಾವೀರರು ಎಂದು ಭಟ್ಟಾರಕ ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.

ಸಮ್ಮಾನ
ಜಯಪ್ರಕಾಶ ಪಡಿವಾಳ್‌ ಹಾಗೂ ರಶ್ಮಿತಾ ಯುವರಾಜ್‌ ಅವರನ್ನು ಧವಳತ್ರಯ ಜೈನಕಾಶಿ ಟ್ರಸ್ಟ್‌ ವತಿಯಿಂದ ಸ್ವಾಮೀಜಿ ಸಮ್ಮಾನಿಸಿದರು.
ಡಾ| ಪ್ರಭಾತ್‌ ಬಲ್ನಾಡು ಕಾರ್ಯಕ್ರಮ ನಿರೂಪಿಸಿದರು. ಬಸದಿಗಳ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ್‌ ಕುಮಾರ್‌, ಎ. ದಿನೇಶ್‌ ಕುಮಾರ್‌ ಬೆಟೆರಿ, ಆದರ್ಶ್‌ ಅರಮನೆ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌, ಪ್ರಭಾಚಂದ್ರ, ವೃಂದಾ ರಾಜೇಂದ್ರ, ಅಜಿತ್‌ಪ್ರಸಾದ್‌, ಶಂಭವ್‌ ಕುಮಾರ್‌ ಉಪಸ್ಥಿತರಿದ್ದರು, ರಾತ್ರಿ ಕಿರಿಯ ರಥೋತ್ಸವ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next