Advertisement

ಯಾದವಾಡ ಜಿಪಂ ಕ್ಷೇತ್ರದ ಜನರಲ್ಲಿ ತಿಳಿವಳಿಕೆ

06:10 PM Apr 10, 2020 | Naveen |

ಮೂಡಲಗಿ: ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಕೋವಿಡ್  ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮೂಡಲಗಿ ತಾಲೂಕಿನ ಕೊನೆಯ ಭಾಗವಾಗಿರುವ ಯಾದವಾಡ ಜಿಪಂ ಕ್ಷೇತ್ರದ ಹಳ್ಳಿಗಳಲ್ಲಿ ತಾಲೂಕಾಡಳಿತ ಮತ್ತು ಟೀಮ್‌ ಎನ್‌ಎಸ್‌ಎಫ್‌ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.

Advertisement

ಮುಧೋಳ ವ್ಯಕ್ತಿಯೊಬ್ಬನಲ್ಲಿ  ಕೋವಿಡ್  ವೈರಸ್‌ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುಧೋಳಕ್ಕೆ ಹೊಂದಿಕೊಂಡಿರುವ ಹಳ್ಳಿಗಳಿಗೆ ಭೇಟಿ ನೀಡಿ ತಿಳಿವಳಿಕೆ ನೀಡಲಾಯಿತು. ಈ ವೇಳೆ ಲಾಕ್‌ ಡೌನ್‌ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ಮನೆಯಲ್ಲಿಯೇ ಉಳಿದುಕೊಳ್ಳಬೇಕು. ಹೊರಗಡೆ ಯಾರು ಬರಬಾರದು. ಅಗತ್ಯವಿರುವ ಕೆಲಸಗಳಿಗೆ ಮಾತ್ರ ಹೊರ ಬಂದಲ್ಲಿ ಕಡ್ಡಾಯವಾಗಿ ಮಾಸ್ಕ್ ಮತ್ತು ಗ್ಲೌಸ್‌ಗಳನ್ನು ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನೊ ಬಗ್ಗೆ ಎಚ್ಚರದಿಂದ ಇರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮೂಡಲಗಿ ತಹಶೀಲ್ದಾರ್‌ ದಿಲಶಾದ ಮಹಾತ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ, ಕುಲಗೋಡ ಠಾಣೆ ಪಿಎಸ್‌ಐ ಹಣಮಂತ ನೆರಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಮನ್ನಿಕೇರಿ, ನಿಂಗಪ್ಪ ಕುರಬೇಟ, ಬಸವರಾಜ ಹತ್ತರಕಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next