Advertisement

ಮೂಡಬಿದಿರೆ: ಮೈಟ್‌ ತಂಡಕ್ಕೆ ಸಮಗ್ರ ಪ್ರಶಸ್ತಿ

12:30 AM Feb 23, 2019 | Team Udayavani |

ಮೂಡುಬಿದಿರೆ: ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಫಾರ್ಮುಲಾ ಇಂಪೀರಿಯಲ್‌ ಎಚ್‌ವಿಸಿ: 2019 ಸ್ಪರ್ಧೆಯಲ್ಲಿ ಬಡಗಮಿಜಾರ್‌ನಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆ್ಯಂಡ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ತಂಡ “ಸಮಗ್ರ ಪ್ರಶಸ್ತಿ’ ಗಳಿಸಿದೆ ಎಂದು “ಮೈಟ್‌’ನ ಪ್ರವರ್ತಕ ಸಂಸ್ಥೆ ರಾಜಲಕ್ಷ್ಮೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜೇಶ್‌ ಚೌಟ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಮೆಕಾಟ್ರಾನಿಕ್ಸ್‌ ಹಾಗೂ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಮಂಜುನಾಥ್‌ ಎಸ್‌.ಮತ್ತು ರೋಹನ್‌ ನೇತೃತ್ವದ 42 ಮಂದಿಯ ತಂಡವು ಕಾಲೇಜಿನ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗ ಮುಖ್ಯಸ್ಥ ಡಾ| ಸಿ. ಆರ್‌. ರಾಜಶೇಖರ್‌ ಮಾರ್ಗದರ್ಶನ ದಲ್ಲಿ ಈ ಕಾರನ್ನು ವಿನ್ಯಾಸಗೊಳಿಸಿದೆ.

ಹೈಬ್ರಿಡ್‌ ವಾಹನವನ್ನು ವಿನ್ಯಾಸ ಗೊಳಿಸುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ದೇಶದ 250 ಕಾಲೇಜುಗಳ 30,000ಕ್ಕೂ ಅಧಿಕ ವಿದ್ಯಾರ್ಥಿಗಳ 150 ತಂಡಗಳು ಭಾಗವಹಿಸಿದ್ದವು. ಅಂತಿಮ ಸುತ್ತಿನಲ್ಲಿ “ಮೈಟ್‌’ನ “ಟೀಮ್‌ ಅರವನ್ಸ್‌’ ಒಳಗೊಂಡಂತೆ 14 ತಂಡಗಳು ಉಳಿದುಕೊಂಡಿದ್ದವು. ಈ ತಂಡವು ಉತ್ಕೃಷ್ಟ ಗುಣಮಟ್ಟದ ಬಿಡಿ ಭಾಗಗಳನ್ನು ಬಳಸಿ 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಾರು ಅತ್ಯಂತ ವೇಗದ ಕಾರು ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಪರಿಸರ ಸ್ನೇಹಿ  ಈ ಹೈಬ್ರಿಡ್‌ ವಾಹನವು ಸಮಗ್ರ ಪ್ರಶಸ್ತಿ 1.5 ಲಕ್ಷ ರೂ. ನಗದು ಬಹುಮಾನದ ಜತೆಗೆ ಅತ್ಯಂತ ಜನಪ್ರಿಯ ವಾಹನ, ಬೆಸ್ಟ್‌ ಆಕ್ಸಲರೇಶನ್‌, ಬೆಸ್ಟ್‌ ಕ್ರಾಸ್‌ ಪ್ಯಾಡ್‌, ಬೆಸ್ಟ್‌ ಡ್ರೈವರ್‌, ಬೆಸ್ಟ್‌ ಎಂಡ್ಯುರೆನ್ಸ್‌ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದೆ ಪ್ರಾಚಾರ್ಯ ಡಾ| ಜಿ.ಎಲ್‌. ಈಶ್ವರ ಪ್ರಸಾದ್‌, ಉಪಪ್ರಾಚಾರ್ಯ ಡಾ| ಸಿ. ಆರ್‌. ರಾಜಶೇಖರ್‌ ಉಪಸ್ಥಿತರಿದ್ದರು.

ಕಾರಿನ ವೈಶಿಷ್ಟ್ಯ 
ಕೆಟಿಎಂ 390 ಇಂಜಿನ್‌ ಮತ್ತು 6 ಕಿ.ವ್ಯಾ. ಸಾಮರ್ಥ್ಯದ ಬಿಎಲ್‌ಡಿಸಿ ಮೋಟಾರ್‌ಗಳನ್ನು ಈ ವಾಹನದಲ್ಲಿ ಅಳವಡಿಸಲಾಗಿದ್ದು, ಎಂಜಿನ್‌ ಮತ್ತು ಮೋಟಾರ್‌ಗಳನ್ನು ಪ್ರತ್ಯೇಕವಾಗಿ ಅಥವಾ ಒಟ್ಟಿಗೆ ಬಳಸಿ ವಾಹನವನ್ನು ಚಾಲನೆ ಮಾಡುವ ಹೈಬ್ರಿಡ್‌ ವ್ಯವಸ್ಥೆ ಇದರ ವೈಶಿಷ್ಟ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next