Advertisement
ಎರಡು ದಿನಗಳ ಸಮ್ಮೇಳನವು ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್‌ನ ವಿವಿಧ ವಿಭಾಗಗಳಲ್ಲಿ ಸುಧಾರಿತ ತಂತ್ರಜ್ಞಾನಗಳು ಮತ್ತು ಪರಿಹಾರಗಳನ್ನು ಉತ್ತಮಗೊಳಿಸುವ ಕುರಿತು ಪ್ರಮುಖ ಮಾತುಕತೆಗಳು, ಸಂಶೋಧನಾ ಪ್ರಕಟಣೆಗಳು ಮತ್ತು ಚರ್ಚೆಗಳನ್ನು ಒಳಗೊಂಡಿದೆ.
Related Articles
Advertisement
ಧಾರವಾಡ ಐಐಟಿಯ ಡೀನ್ ಡಾ| ಮಹಾದೇವ ಪ್ರಸನ್ನ ಎಸ್.ಆರ್. ಅವರು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಹಿಂದಿನ, ವರ್ತಮಾನ ಮತ್ತು ಭವಿಷ್ಯದ ಕುರಿತು ದಿಕ್ಸೂಚಿ ಭಾಷಣ ಮಾಡಿ, ಕ್ಷಿಪ್ರ ತಾಂತ್ರಿಕ ಪ್ರಗತಿಗಳು, ಹೆಚ್ಚಿದ ಕಂಪ್ಯೂಟೇಶನಲ್ ಶಕ್ತಿ ಮತ್ತು ದೊಡ್ಡ ಡೇಟಾ ಲಭ್ಯತೆಯನ್ನು ವೇಗವರ್ಧಕಗಳಾಗಿ ತೋರಿಸಿದರು.
ನಾರ್ವೆಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಮಾಹಿತಿ ಭದ್ರತೆ ಮತ್ತು ಸಂವಹನ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ| ರಾಘವೇಂದ್ರ ರಾಮಚಂದ್ರ ಅವರು ಬಯೋಮೆಟ್ರಿಕ್ ಆಧಾರಿತ ಪ್ರವೇಶ ನಿಯಂತ್ರಣ: ಮುಂದಿನ ದಾರಿ ಕುರಿತು ಮಾತನಾಡಿ, ಬಯೋಮೆಟ್ರಿಕ್ ಭದ್ರತೆಯ ಭವಿಷ್ಯದ ಪಥವನ್ನು ವಿವರಿಸಿದರು.
ಡಿ. 9ರಂದು ಸಿಂಗಾಪುರದ ತರಬೇತಿ ವಿಷನ್ ಇನ್‌ಸ್ಟಿಟ್ಯೂಟ್‌ನ ಪ್ರಾಧ್ಯಾಪಕಿ ಶಾಂತಿ ಶೇಖರ್ ಅವರಿಂದ ಅಪ್ಲಿಕೇಶನ್ಸ್ ಆಫ್ ಡೇಟಾ ಸೆ„ನ್ಸ್ ಕುರಿತು ಮುಖ್ಯ ಉಪನ್ಯಾಸ ಏರ್ಪಡಿಸಲಾಗಿದೆ. ಸಮ್ಮೇಳನವು ಒಟ್ಟು 78 ಪ್ರಸ್ತುತಿಗಳನ್ನು ಹೊಂದಿದ್ದು, ಪ್ರಪಂಚದಾದ್ಯಂತದ ಸಂಶೋಧಕರಿಂದ 245 ವಿಚಾರ ಮಂಡನೆ ಅಂತಿಮಗೊಳಿಸಲಾಗಿದೆ.
ಮೈಟ್ ಪ್ರಾಂಶುಪಾಲ ಡಾ| ಪ್ರಶಾಂತ್ ಸಿ.ಎಂ. ಸ್ವಾಗತಿಸಿದರು. ಸಮ್ಮೇಳನದ ಕುರಿತು ಸಂಚಾಲಕ ಡಾ| ಶ್ರೀಕುಮಾರ್ ಮಾಹಿತಿ ನೀಡಿದರು. ಸಹ ಸಂಚಾಲಕಿ ಶ್ರೀಜಾ ರಾಜೇಶ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ದೀಪ್ತಿ ಶೆಟ್ಟಿ ನಿರೂಪಿಸಿದರು.