Advertisement

ಮೂಡಬಿದಿರೆ:ಪ್ರೇಯಸಿಯ ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ!

02:46 PM Sep 28, 2018 | |

ಮೂಬಿದಿರೆ: ಪ್ರೇಯಸಿಯನ್ನು  ಹತ್ಯೆ ಮಾಡಿ  ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.  

Advertisement

ಪ್ರಿಯತಮೆಯ ಮನೆಗೆ ಆಗಮಿಸಿದ  ಲೋಹಿತ್ ಎಂಬಾತ ಚರಿಷ್ಮಾ (22) ಮೇಲೆ ಸುತ್ತಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಗಂಭೀರ ಗಾಯಗೊಂಡಿದ್ದ  ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು . ಚಿಕಿತ್ಸೆ ಫ‌ಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ.  

ಇಬ್ಬರು ಹತ್ತಿರದ ಸಂಬಂಧಿಗಳು ಎನ್ನಲಾಗಿದ್ದು, ಲೋಹಿತ್‌ ಪ್ರೀತಿಗೆ ವಿರೋಧ ವ್ಯಕ್ತವಾಗಿತ್ತು ಎನ್ನಾಲಾಗಿದೆ. ಮೂಡಬಿದಿರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next