Advertisement

Moodabidri ಹಿರೇ ಅಮ್ಮನವರ ಬಸದಿ; ಫೆ. 10-16: ಧಾಮ ಸಂಪ್ರೋಕ್ಷಣೆ, ಪ್ರತಿಷ್ಠಾ ಮಹೋತ್ಸವ

10:51 PM Nov 29, 2023 | Team Udayavani |

ಮೂಡುಬಿದಿರೆ: ಜೈನಕಾಶಿ ಮೂಡುಬಿದಿರೆಯ ಅತ್ಯಂತ ಪ್ರಾಚೀನ ಬಸದಿಗಳಲ್ಲಿ ಒಂದಾಗಿರುವ ಶ್ರೀ ಶಾಂತಿ ನಾಥ ಸ್ವಾಮಿಯ ಹಿರೇ ಅಮ್ಮನವರ ಬಸದಿಯ ಧಾಮ ಸಂಪ್ರೋಕ್ಷಣೆ ಮತ್ತು ಪ್ರತಿಷ್ಠಾ ಮಹೋತ್ಸವ 2024ರ ಫೆ. 10ರಿಂದ 16ರ ವರೆಗೆ ಜರಗಲಿದೆ ಎಂದು ಬಸದಿಯ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿರುವ ಮಾಜಿ ಸಚಿವ ಕೆ. ಅಭಯಚಂದ್ರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

Advertisement

ನೂತನ ಧ್ವಜಸ್ತಂಭ ಸ್ಥಾಪನೆ, ಗ್ರಾನೈಟ್‌/ಟೈಲ್ಸ್‌ ಅಳವಡಿಕೆ, ಗಾರೆ, ಮರದ ಕೆತ್ತನೆ ಮೊದಲಾದ ಕೆಲಸಗಳು ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ನಡೆದಿದ್ದು ಇನ್ನುಳಿದ ಕೆಲಸ ಕಾರ್ಯಗಳಿಗೆ ಸುಮಾರು 35 ಲಕ್ಷ ರೂ. ಬೇಕಾಗಬಹುದೆಂದು ಅಂದಾ ಜಿಸಲಾಗಿದೆ ಎಂದರು.

ಪ.ಪೂ. 108 ಯುಗಲ ಮುನಿ ಮಹಾರಾಜರ ಸಾನಿಧ್ಯದಲ್ಲಿ, ಮೂಡು ಬಿದಿರೆ ಭಟ್ಟಾರಕ ಚಾರುಕೀರ್ತಿ ಪಂಡಿತಾ
ಚಾರ್ಯವರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುವ ಧಾಮ ಸಂಪ್ರೋಕ್ಷಣ, ಪ್ರತಿಷ್ಠೆ ಕಾರ್ಯಕ್ರಮ ಗಳಲ್ಲಿ ಶ್ರವಣಬೆಳಗೊಳ, ಕಾರ್ಕಳ, ಎನ್‌.ಆರ್‌. ಪುರ, ಕಂಬದಳ್ಳಿ, ಹೊಸಕೋಟೆ ಕ್ಷೇತ್ರಗಳ ಸ್ವಾಮೀಜಿಯವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಸಹಿತ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ನಿರಂತರ 7 ದಿನಗಳಲ್ಲಿ ಧಾರ್ಮಿಕ ಸಭೆ,ಭಜನೆ, ಸಾಂಸ್ಕೃತಿಕ ಕಲಾಪಗಳು ನಡೆಯಲಿದ್ದು ವಿಶೇಷವಾಗಿ 24 ತೀರ್ಥಂಕರರ ಬಿಂಬಗಳನ್ನು ಸಾಲಂಕೃತ ಮಂಟಪ ಗಳಲ್ಲಿರಿಸಿ ಭವ್ಯಮೆರವಣಿಗೆ ಮಾಡಲಾಗುವುದು, ಫೆ. ಪೆ.15ರಂದು ಮಹಾ ರಥೋತ್ಸವ ಜರಗಲಿದೆ ಎಂದರು. ಮೃಣ್ಮಯ ಪದ್ಮಾವತೀ ದೇವಿ, ಸರಸ್ವತೀ ದೇವಿಯ ಮೂರ್ತಿಗಳು, 24 ತೀರ್ಥಂಕರರ ಮೂರ್ತಿಗಳಿರುವ ಈ ಬಸದಿಗೆ ಜೈನರು ಮಾತ್ರವಲ್ಲದೆ ಇತರ ಭಕ್ತರೂ ನಡೆದುಕೊಳ್ಳುತ್ತಿದ್ದು ವಿಶೇಷ ವಾಗಿ ಶ್ರಾವಣ ಶುಕ್ರವಾರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಭೂಮ ಸೂದೆಯಿಂದಾಗಿ ಬಸದಿಯ ಭೂಮಿ ಒಕ್ಕಲುಗಳ ಪಾಲಾದ ಕಾರಣ ಭಕ್ತರ ಕೊಡುಗೆಗಳಿಂದಲೇ ಬಸದಿಯ ಆರಾ ಧನೆ, ಜೀರ್ಣೋದ್ಧಾರಾದಿ ನಡೆಯಬೇಕಾದ ಸ್ಥಿತಿ ಇದೆ ಎಂದು ಹೇಳಿದರು.

ಆಡಳಿತೆದಾರ ಭಾಸ್ಕರ ಎಸ್‌. ಕಟ್ಟೇಮಾರು, ಅವರ ಪುತ್ರ ಅನಂತಕೇಸರಿ ಕಟ್ಟೇಮಾರು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜವರ್ಮ ಬೈಲಂಗಡಿ, ಸದಸ್ಯರಾದ ಸುಧೀಶ್‌ ಕುಮಾರ್‌ ಆನಡ್ಕ, ದಿನೇಶ್‌ ಕುಮಾರ್‌
ಆನಡ್ಕ, ಪುಷ್ಪರಾಜ ಜೈನ್‌, ಎಂಜಿನಿ ಯರ್‌ ಪಾರ್ಶ್ವನಾಥ್‌, ಸಂಪತ್‌ ಕುಮಾರ್‌, ಸ್ವಾಮಿ ಪ್ರಸಾದ್‌, ಸೂರಜ್‌ ಆರಿಗಾ, ವಜ್ರನಾಭ ಕಂಬ್ಳಿ (ಭೋಜರು) ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next