Advertisement

ಪಿಎಕೆ ಲೀಗ್‌ನಲ್ಲಿ ಆಡಲ್ಲವೆಂದ ಮಾಂಟಿ ಪನೇಸರ್‌

07:55 PM Aug 04, 2021 | Team Udayavani |

ಲಂಡನ್‌: ಆ.7ರಿಂದ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಆರಂಭವಾಗಲಿರುವ ಕಾಶ್ಮೀರ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ನಲ್ಲಿ ತಾನು ಭಾಗವಹಿಸುವುದಿಲ್ಲವೆಂದು ಇಂಗ್ಲೆಂಡ್‌ ಸ್ಪಿನ್ನರ್‌ ಮಾಂಟಿ ಪನೇಸರ್‌ ಹೇಳಿದ್ದಾರೆ.

Advertisement

ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಚೆನ್ನಾಗಿಲ್ಲ, ಇಂತಹ ಹೊತ್ತಿನಲ್ಲಿ ನಾನು ಈ ಕೂಟದಲ್ಲಿ ಆಡಲು ಬಯಸುವುದಿಲ್ಲವೆಂದು ಹೇಳಿದ್ದಾರೆ. ಇದನ್ನು ಹಲವು ಪಾಕಿಸ್ತಾನೀಯರು ಟೀಕಿಸಿದ್ದಾರೆ. ಆದರೆ ಮಾಂಟಿ ಖಡಕ್ಕಾಗಿ ಉತ್ತರಿಸಿದ್ದು, ತಾನು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಸೂಚನೆಯನ್ನಷ್ಟೇ ಪಾಲಿಸಿದ್ದೇನೆಂದು ಹೇಳಿದ್ದಾರೆ.

ಈ ಕೂಟಕ್ಕೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಬೆಂಬಲವಿದೆ. ಇದಕ್ಕೆ ವಿಶ್ವಾದ್ಯಂತ ಆಟಗಾರರನ್ನು ಆಹ್ವಾನಿಸಲಾಗಿದೆ. ಆದರೆ  ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕೂಟದಲ್ಲಿ ಭಾಗವಹಿಸುವ ವಿದೇಶೀಯರಿಗೆ ಭಾರತದಲ್ಲಿ ನಡೆಯುವ ಯಾವುದೇ ಕ್ರಿಕೆಟ್‌ ಕೂಟಗಳಲ್ಲಿ ನಿರ್ಬಂಧ ಹಾಕಲಾಗುವುದು ಎಂದಿದೆ. ಅಲ್ಲದೇ ತನ್ನ ಆಟಗಾರರನ್ನು ಕಳುಹಿಸಿಕೊಡಲಿರುವ ವಿದೇಶಿ ಕ್ರಿಕೆಟ್‌ ಮಂಡಳಿಗಳೊಂದಿಗೆ ವಾಣಿಜ್ಯಾತ್ಮಕ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಎಚ್ಚರಿಸಿದೆ. ಇದರ ಮಧ್ಯೆ ದ.ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷಲ್‌ ಗಿಬ್ಸ್ ತಾನು ಆಡುವುದಾಗಿ ಹೇಳಿದ್ದಾರೆ. ಬಿಸಿಸಿಐ ತನ್ನನ್ನು ಪರೋಕ್ಷವಾಗಿ ಬೆದರಿಸುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next