Advertisement

ಸರ್ಕಾರದ ಯೋಜನೆ ಅರ್ಹರಿಗೆ ತಲುಪಿಸಿ

03:33 PM Jul 02, 2023 | Team Udayavani |

ಮೈಸೂರು: ಸರ್ಕಾರದ ಕಾರ್ಯಕ್ರಮಗಳನ್ನು ಅರ್ಹ ಫ‌ಲಾನುಭವಿಗಳಗೆ ತಲುಪಿಸಿ ಹಾಗೂ ಸರ್ಕಾರದ ಅನುದಾನವನ್ನು ನಿರ್ದಿಷ್ಟ ಕಾಮಗಾರಿಗಳಿಗೆ ಬಳಸಿಕೊಳ್ಳ ಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪಂಚಾಯತ್‌ ಆಡಳಿತಾಧಿಕಾರಿ ಡಾ. ಎಸ್‌. ಸೆಲ್ವಕುಮಾರ್‌ ಹೇಳಿದರು.

Advertisement

ಜಿಲ್ಲಾ ಪಂಚಾಯತ್‌ ಅಬ್ದುಲ್‌ ನಜೀರ್‌ ಸಾಬ್‌ ಸಭಾಂಗಣದಲ್ಲಿ ಶನಿವಾರ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ವಿಳಂಬವಾಗುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದರು.

ಜ್ಯೋತಿ ತಳಿಯ ಭತ್ತಕ್ಕೆ ಹೆಚ್ಚಿನ ಬೇಡಿಕೆ: ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್‌ ಮಾಹಿತಿ ನೀಡಿ, 2023 ರ ಜೂನ್‌ವರೆಗೆ ವಾಡಿಕೆ ಮಳೆ 290.1 ಮಿ.ಮಿ ನಷ್ಟಿದ್ದು 267.3 ಮಳೆಯಾಗಿರುತ್ತದೆ. ಶೇ. 8 ರಷ್ಟು ಮಳೆ ಕೊರತೆಯಾಗಿದೆ. ಅಗತ್ಯದಷ್ಟು ಬಿತ್ತನೆ ಬೀಜ ಲಭ್ಯವಿದ್ದು ಜ್ಯೋತಿ ತಳಿಯ ಭತ್ತಕ್ಕೆ ಹೆಚ್ಚಿನ ಬೇಡಿಕೆ ಇದೆ. ವರ್ತಕರು ಈ ಭತ್ತವನ್ನು ಹೊಲಕ್ಕೆ ಬಂದು ಖರೀದಿಸುತ್ತಾರೆ ಎಂದರು.

ಮೈಸೂರು ಜಿಲ್ಲೆಯಲ್ಲಿ ರಸಗೊಬ್ಬರ 1,15,220 ಟನ್‌ ಲಭ್ಯವಿದ್ದು, ಉಳಿಕೆ ದಾಸ್ತಾನು ಮುಂದಿನ ದಿನಗಳಲ್ಲಿ ಬರುವುದರಿಂದ ರಸಗೊಬ್ಬರದ ಯಾವುದೇ ಕೊರತೆ ಬರುವುದಿಲ್ಲ ಎಂದರು.

ರೈತ ಮುಖಂಡರ ಸಭೆ ನಡೆಸಿ: ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಎಲ್ಲ ತಹಶೀಲ್ದಾರ್‌ಗಳಿಗೂ ತಾಲೂಕು ಹಂತದಲ್ಲಿ ರೈತ ಮುಖಂಡರ ಸಭೆ ನಡೆಸಿ ಅವರಿಗೆ ಬೇಕಾದ ತಳಿಯ ಬೀಜಗಳನ್ನು ವಿತರಿಸಲು ಸೂಚಿಸಲಾಗಿದೆ. ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ರೈತರಿಗೆ ವಿತರಿಸುವ ಬೀಜಗಳು ಉತ್ಕಷ್ಟ ಗುಣಮಟ್ಟ, ಮೊಳಕೆಯೊಡೆಯುವ ಪ್ರಮಾಣದ ಬಗೆಗೆ ಕೃಷಿ ಇಲಾಖೆಯವರು ಖಾತರಿ ಒದಗಿಸಬೇಕೆಂದು ಸೂಚಿಸಿದ್ದಾರೆ ಎಂದರು.

Advertisement

ಡಿಡಿಪಿಐ ಅವರು ಸಭೆಗೆ ಮಾಹಿತಿ ನೀಡಿ, ಈ ಸಾಲಿನ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆಯಾಗಿವೆ, ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫ‌ಲಿತಾಂಶ 13 ನೇ ಸ್ಥಾನದಲ್ಲಿದೆ ಎಂದರು.

10 ಜಾನುವಾರುಗಳು ಗುಣಮುಖ: ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿ, ಜಾನುವಾರುಗಳಿಗೆ 30 ವಾರಗಳಿಗಾಗುವಷ್ಟು ಮೇವು ಲಭ್ಯವಿದೆ. ಜಿÇÉೆಯಲ್ಲಿ 5.14 ಲಕ್ಷ ಜಾನುವಾರು ಗಳಿದ್ದು, ಈ ಪೈಕಿ ಮೇಕೆ, ಕುರಿಗಳಿಗೆ ವಾಕ್ಸಿನೇಶನ್‌ ಆಗಿದೆ. ಚರ್ಮಗಂಟು ರೋಗವೂ ಕಡಿಮೆಯಾಗಿದೆ. ಚರ್ಮಗಂಟು ರೋಗದಿಂದ ಬಳಲುತ್ತಿದ್ದ 24 ಜಾನುವಾರುಗಳ ಪೈಕಿ 10 ಗುಣವಾಗಿವೆ ಎಂದರು. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಭಾಗವಹಿಸಿದ್ದರು.

ಇನ್ನೂ 15 ದಿನಗಳು ನೀರು ಬಳಸಬಹುದು : ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿ, ಬೋರ್ವೆಲ್‌ ನೀರನ್ನು ಭಾಗಶಃ ಅವಲಂಬಿಸಿರುವ ನಗರ ಸ್ಥಳೀಯ ಸಂಸ್ಥೆಗಳಾದ ಬೋಗಾದಿ, ರಮ್ಮನ ಹಳ್ಳಿ, ಕಡಕೋಳ, ಶ್ರೀರಾಂಪುರ ಪಟ್ಟಣ ಪಂಚಾಯಿತಿಗಳಿಗೆ ಮತ್ತು ಯಾವುದೇ ನಗರ ಸ್ಥಳೀಯ ಸಂಸ್ಥೆಗಳಿಗೆ ಸಫೇìಸ್‌ ವಾಟರ್‌ ಕೊರತೆ ಇರುವುದಿಲ್ಲ. ಲಭ್ಯವಿರುವ ನೀರನ್ನು ಇನ್ನೂ 15 ದಿನಗಳವರೆಗೆ ಬಳಸಬಹುದು. ಇನ್ನು 15 ದಿನಗಳ ಕಾಲ ಮಳೆ ಬಾರದೆ ಇದ್ದಲ್ಲಿ ಬೋರ್ವೆಲ್‌ ಮತ್ತು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಸಮಸ್ಯೆ ಎದುರಾಗಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next