Advertisement

ಮುಂಗಾರು: ಶೇ. 77ರಷ್ಟು ಮಳೆ ಕೊರತೆ

12:07 PM Jul 02, 2019 | Sriram |

ಹೊಸದಿಲ್ಲಿ: ಜೂನ್‌ ಮೊದಲ ವಾರದಿಂದ ಆರಂಭವಾಗಿದ್ದ ಈ ಬಾರಿಯ ಮುಂಗಾರಿನಿಂದಾಗಿ ಜೂನ್‌ ಅಂತ್ಯದವರೆಗೆ ಒಟ್ಟಾರೆ ಶೇ. 33ರಷ್ಟು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಆದರೆ, ಇಲಾಖೆ ಗುರುತಿಸಿರುವ ಮುಂಗಾರು ವ್ಯಾಪ್ತಿಯ ಪ್ರದೇಶಗಳಲ್ಲಿ ನಿರೀಕ್ಷಿಸಲಾಗಿದ್ದ ಮಳೆಯ ಪ್ರಮಾಣಕ್ಕೆ ಹೋಲಿಸಿದರೆ ಶೇ. 78ರಷ್ಟು ಕೊರತೆ ಉಂಟಾಗಿದೆ ಎಂದು ಐಎಂಡಿ ಹೇಳಿದೆ.

Advertisement

ಆದರೆ, ಇದರ ಬೆನ್ನಿಗೇ ಆಶಾದಾಯಕ ಮಾಹಿತಿ ಹಂಚಿಕೊಂಡಿರುವ ಐಎಂಡಿ ಹೆಚ್ಚುವರಿ ನಿರ್ದೇಶಕ ಮೃತ್ಯುಂಜಯ್‌ ಮಹಾಪಾತ್ರ, ಜುಲೈ ಮೊದಲ ವಾರದಲ್ಲಿ ಮುಂಗಾರು ಮಾರುತುಗಳು ಪ್ರಬಲವಾಗಲಿವೆ. ಜತೆಗೆ, ಬಂಗಾಲ ಕೊಲ್ಲಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತದಿಂದಾಗಿ ಒಡಿಶಾ, ರಾಜಸ್ಥಾನ ಸಹಿತ ಮಧ್ಯಭಾರತದಲ್ಲಿ ಉತ್ತಮ ಮಳೆಯಾಗಲಿದೆ ಎಂದಿದ್ದಾರೆ.

ಇನ್ನು, ಖಾಸಗಿ ಹವಾಮಾನ ಸಂಸ್ಥೆಯಾದ “ಸ್ಕೈ ಮೇಟ್‌’ನ ವ್ಯವಸ್ಥಾಪಕ ನಿರ್ದೇಶಕ ಜತಿನ್‌ ಸಿಂಗ್‌ ಕೂಡ, ಜೂ. 30ರಿಂದ ಜು. 15ರ ಅವಧಿಯಲ್ಲಿ ಮುಂಗಾರು ಮಾರುತಗಳು ಪ್ರಬಲಗೊಳ್ಳುತ್ತವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next