Advertisement

ಮುಂದಿನ 24 ತಾಸೊಳಗೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ

12:03 PM Jun 08, 2019 | Sathish malya |

ಹೊಸದಿಲ್ಲಿ : ಮುಂದಿನ 24 ತಾಸುಗಳ ಒಳಗೆ ಕೇರಳದಲ್ಲಿ ಮುಂಗಾರು ಮಳೆ ಬಹುತೇಕ ಆರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

Advertisement

ನೈಋತ್ಯ ಮಾರುತಗಳು ಮುಂದಿನ 24 ತಾಸುಗಳಲ್ಲಿ ಕೇರಳ ಕರಾವಳಿ ಪ್ರವೇಶಿಸುವ ಹಿನ್ನೆಲೆಯಲ್ಲಿ ಕೇರಳದ ಪ್ರಾಕೃತಿಕ ವಿಕೋಪ ವ್ಯವಸ್ಥಾಪನ ಪ್ರಾಧಿಕಾರ ರಾಜ್ಯಕ್ಕೆ ಆರೆಂಜ್‌ ಅಲರ್ಟ್‌ ಜಾರಿ ಮಾಡಿದೆ.

ಕೇರಳದ ತಿರುವನಂತಪುರ, ಕೊಲ್ಲಂ, ಅಳಪ್ಪುಝ ಮತ್ತು ಎರ್ನಾಕುಳಂ ಜಿಲ್ಲೆಗಳಿಗೆ ಸಂಬಂಧಿಸಿ ಆರೆಂಜ್‌ ಅಲರ್ಟ್‌ ಜಾರಿ ಮಾಡಲಾಗಿದೆ. ಇದರ ಪ್ರಕಾರ ಜೂನ್‌ 10ರಂದು ಈ ಜಿಲ್ಲೆಗಳಲ್ಲಿ ಭಾರಿಯಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚಿಸಲಾಗಿದೆ.

ಇದೇ ವೇಳೆ ಭಾರೀ ಮಳೆಯ ಯೆಲ್ಲೋ ಅಲರ್ಟ್‌ ಸೂಚನೆಯನ್ನು ಕೇರಳದ ಇತರ ಏಳು ಜಿಲ್ಲೆಗಳಿಗೆ ಸಂಬಂಧಿಸಿ ಜೂನ್‌ 9 ಭಾರೀ ಮಳೆಗೆ ಮತ್ತು ಐದು ಜಿಲ್ಲೆಗಳಿಗೆ ಜೂನ್‌ 10ರ ಭಾರೀ ಮಳೆಗೆ ಸಂಬಂಧಪಟ್ಟು ನೀಡಲಾಗಿದೆ.

ಮಾನ್ಸೂನ್‌ ಪ್ರವೇಶ ವಿಳಂಬವಾಗಿರುವುದನ್ನು ಅನುಸರಿಸಿ ಉತ್ತರ ಭಾರತದ ಬಹು ಭಾಗವನ್ನು ಈಗ ಕಾಡುತ್ತಿರುವ ತೀವ್ರತಮ ಉಷ್ಣತೆಯು ಇನ್ನೂ ಒಂದು ವಾರ ಕಾಲ ತನ್ನ ಪ್ರತಾಪವನ್ನು ತೋರಿಸಲಿದೆ ಎಂದೂ ಐಎಂಡಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next