Advertisement

ಮಾನ್ಸೂನ್‌ ಮಿಂಚು: ಮಳೆಗಾಲದ ಟ್ರೆಂಡೀ ಫ್ಯಾಶನ್‌ ಲುಕ್‌

10:11 AM Aug 02, 2017 | |

ಮಳೆಗಾಲದಲ್ಲಿ ನಿಸರ್ಗ ಸಂಪೂರ್ಣವಾಗಿ ಹೊಸ ಮೇಕಪ್‌ ಮಾಡಿಕೊಳ್ಳುತ್ತದೆ. ತಾಜಾ ಸೌಂದರ್ಯದ ಬಟ್ಟೆ ತೊಡುತ್ತದೆ. ಹೆಣ್ಣು ಕೂಡ ಈ ಋತುಮಾನದಲ್ಲಿ ಹಸಿರಿಗೆ ಸನಿಹವಾಗುತ್ತಾಳೆ. ಮಳೆಗಾಲಕ್ಕೆ ತಕ್ಕಂತೆ ಮೇಕಪ್‌ ಮಾಡಿಕೊಂಡು, ಮಿರಮಿರನೆ ಮಿಂಚುತ್ತಾಳೆ. ಅಷ್ಟಕ್ಕೂ ಅವಳ “ಮಾನ್ಸೂನ್‌ ಫ್ಯಾಶನ್‌’ ಹೇಗಿರಬೇಕು?

Advertisement

ಅಕ್ವಾ ಬ್ಲ್ಯೂ ಮೇಕಪ್‌
ನೀಲಿ ಬಣ್ಣದ ಲಿಪ್‌ಸ್ಟಿಕ್‌ ಆರ್ಟ್‌ ಮತ್ತು ಐ ಷಾಡೋ ಇದರ ಗುಟ್ಟು. ಮಳೆಗಾಲದ ಬಣ್ಣ ನೀಲಿ ಎನ್ನುತ್ತಾರೆ ಬ್ಯೂಟಿಷಿಯನ್‌ಗಳು. ಆ ನೀಲಿ ಬಣ್ಣವನ್ನು ಮೇಕಪ್‌ ಮೂಲಕ ತುಟಿ ಹಾಗೂ ಕಣ್ರೆಪ್ಪೆಯ ಮೇಲೆ ಆಕರ್ಷಕವಾಗಿ ಮೂಡಿಸಲಾಗುತ್ತದೆ. ಸಮುದ್ರದ ನೀಲಿ ಸುಂದರಿಯ ಕಣ್ಣುಗಳ ಮೇಲೆ ಲೇಪನಗೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ನೀಲಿ ಲಿಪ್‌ಸ್ಟಿಕ್‌, ಬ್ಲ್ಯೂ ಐ ಷಾಡೋಗಳನ್ನು ಬಳಸಿ ಇದನ್ನು ಮಾಡಲಾಗುತ್ತದೆ. 

ಮಾನ್ಸೂನ್‌ ನೈಲ್‌ ಆರ್ಟ್‌
ಮಳೆಗಾಲದ ಸೌಂದರ್ಯವನ್ನು ಉಗುರುಗಳ ಮೇಲೆ ಅತ್ಯಾಕರ್ಷಕವಾಗಿ ಅಚ್ಚು ಮಾಡಬಹುದು. ವರ್ಷ ಋತುವನ್ನು ಸಂಕೇತಿಸುವ ಛತ್ರಿ, ಮೋಡ, ಮಳೆಹನಿ, ಕಪ್ಪೆಗಳನ್ನು ಕೈ ಉಗುರುಗಳ ಮೇಲೆ ಚಿತ್ರಿಸಿಕೊಳ್ಳಬಹುದು. ನೈಲ್‌ ಪಾಲಿಷ್‌ ಬಳಸಿಯೇ ಈ ಸೌಂದರ್ಯವನ್ನು ರೂಪಿಸಿಕೊಳ್ಳಬಹುದು. ಅಂದದ ಮುಖಕ್ಕೆ ಬೆರಳುಗಳನ್ನು ಅಡ್ಡಹಿಡಿದಾಗ, ಉಗುರುಗಳ ಸೌಂದರ್ಯ ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತದೆ.

ಮಾನ್ಸೂನ್‌ ಫ‌ುಟ್‌ವೇರ್‌
ಹೈ ಹೀಲ್ಡ್‌ ಪ್ರಿಯರು ಮಳೆಗಾಲದಲ್ಲಿ ಅದರ ಮೋಹ ಬಿಡುವುದೇ ಉತ್ತಮ. ಉದ್ದನೆಯ ಬೂಟ್‌ ಬಳಸಿದರೆ, ಅದು ಟ್ರೆಂಡಿಯಾಗಿಯೂ ಇರುತ್ತದೆ, ಕೆಸರಿನಂಥ ಪ್ರದೇಶಗಳಲ್ಲಿ ಪಾದಗಳ ಅಂದವನ್ನೂ ಅದು ಕಾಪಾಡುತ್ತದೆ. ಇಲ್ಲದಿದ್ದರೆ, ಫ್ಲಿಪ್‌- ಫ್ಲಾಪ್‌, ಬ್ಯಾಲರಿನಾ ಫ‌ುಟ್‌ವೇರ್‌ಗಳ ಮೊರೆ ಹೋದರೆ, ಅದು ಕೂಡ ಫ್ಯಾಶನೇಬಲ್‌.

Advertisement

ರಂಗುರಂಗಿನ ರೈನ್‌ಕೋಟ್‌
ಜೋರು ಮಳೆಯಲ್ಲಿ ರೈನ್‌ ಕೋಟ್‌ ಧರಿಸಿ ನಡೆಯುವ ಮಜಾವೇ ಬೇರೆ. ಗಾಢ ಪಿಂಕ್‌, ಹಳದಿ, ಮ್ಯಾಂಗೋ, ಅಕ್ವಾ ಬ್ಲ್ಯೂ, ಸೀ ಗ್ರೀನ್‌, ಎನಿಮಲ್‌ ಇನ್‌ಸೈಡರ್‌ ಪ್ರಿಂಟ್ಸ್‌, ಮಿಲಿಟರಿ ಪ್ರಿಂಟ್‌, ಫ್ಲೋರಲ್‌ ಪ್ರಿಂಟ್‌, ಹೂಡೆಡ್‌ ಲಾಂಗ್‌ ರೈನ್‌ಕೋಟ್‌ಗಳನ್ನು ಧರಿಸಿದರೆ, ಅದರ ಲುಕ್‌ ಬಣ್ಣಿಸಲಸದಳ. 

ಟ್ರೆಂಡೀ ಅಂಬ್ರೆಲಾ
ಮಳೆಗಾಲ ಅಂದಮೇಲೆ ಛತ್ರಿಯದ್ದೇ ಅಧಿಪತ್ಯ. ಹಳೇ ಕಾಲದ ಕಪ್ಪು ಛತ್ರಿಯನ್ನು ಹಿಮ್ಮೆಟ್ಟಿಸಿ ನೂತನ ಫ್ಯಾನ್ಸಿ ರೇಂಬೋ ಕೊಡೆಗಳು ಎಲ್ಲೆಲ್ಲೂ ಕಾಣಿಸುತ್ತಿವೆ. ಪೋಲ್ಕಾ ಡಾಟ್ಸ್‌ ಛತ್ರಿ, ಫ್ರಿಲ್‌ ಟ್ರೆಂಡ್‌ ಛತ್ರಿ, ಲೇಸ್‌ ಟ್ರೆಂಡ್‌, ಟೈಪೋಗ್ರಫಿ, ಕಾರ್ಟೂನ್‌ ಪ್ರಿಂಟ್ಸ್‌ ಛತ್ರಿ… ಹೀಗೆ ಕೇವಲ ರೌಂಡ್‌ ಶೇಪ್‌ನಲ್ಲಷ್ಟೇ ಅಲ್ಲದೆ, ಹೃದಯ ಆಕಾರ ಮತ್ತು ಫ‌ಂಕಿ ಪ್ರಿಂಟ್ಸ್‌ನ ಛತ್ರಿಗಳೂ ಈ ಸೀಸನ್‌ನಲ್ಲಿ ಹೆಚ್ಚು ಮಿಂಚುತ್ತಿವೆ.

ಮಾನ್ಸೂನ್‌ ಹೇರ್‌ಸ್ಟೈಲ್‌
ಈ ವೇಳೆ ಲೂಸ್‌ ಹೇರ್‌ಸ್ಟೈಲ್‌ಗಿಂತಲೂ, ಶಾರ್ಟ್‌ ಬ್ಲಿಂಡ್‌ ಕಟ್‌, ಸ್ನೇಕ್‌ ಟೈಲ್‌, ಬ್ರೈಡಡ್‌ ಜಡೆ (ಸಾವಿರ ಕಾಲಿನ ಜಡೆ) ಬ್ರೈಡಡ್‌ ಬನ್ಸ್‌, ಮೆಸ್ಡ್- ಅಪ್‌ ಬನ್‌ ಹೇರ್‌ಸ್ಟೈಲ್‌ಗ‌ಳನ್ನು ಅನುಸರಿಸಿ. ಆದಷ್ಟು ಕೂದಲಿನಲ್ಲಿ ಡ್ಯಾಂಡ್ರಫ್ ನಿಲ್ಲದಂತೆ ನೋಡಿಕೊಂಡರೆ, ನೀವು ಮಾಡುವ ಎಲ್ಲ ಹೇರ್‌ಸ್ಟೈಲ್‌ಗ‌ಳೂ ಸಖತ್ತಾಗಿಯೇ ಕ್ಲಿಕ್‌ ಆಗುತ್ತವೆ.

ಚಿತ್ರಶ್ರೀ ಹರ್ಷ

Advertisement

Udayavani is now on Telegram. Click here to join our channel and stay updated with the latest news.

Next