Advertisement
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸೋಮವಾರವೂ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ಹಾನಿ ಸಂಭವಿಸಿದೆ.
ಉತ್ತರ ಕನ್ನಡದ ಕರಾವಳಿಯಲ್ಲೂ ಭಾರೀ ಮಳೆ ಸುರಿಯುತ್ತಿದೆ. ಅಘನಾಶಿನಿ, ವಾಲಗಳ್ಳಿ-ಅರೋಡಿ ರಸ್ತೆಗಳು ಜಲಾವೃತವಾಗಿವೆ. ಅಂಕೋಲಾದ ಹಾರವಾಡದಲ್ಲಿ ಕಡಲ್ಕೊರೆತವಾಗಿದೆ. ಕಾರವಾರದ ಚೆಂಡಿಯಾ, ಇಡೂರು ಬಳಿ ಮನೆಗಳಿಗೆ ಮಳೆ ನೀರು ನುಗ್ಗಿದ ಕಾರಣ ಜಲದಿಗ್ಬಂಧನ ಉಂಟಾಗಿತ್ತು. ಸುಪಾ ಹಿನ್ನೀರು, ಕೊಡಸಳ್ಳಿ, ಕದ್ರಾದಲ್ಲಿ ಭಾರೀ ಮಳೆ ಸುರಿದಿದೆ. ಘಟಪ್ರಭಾ, ಮಲಪ್ರಭಾ ನದಿಗಳಲ್ಲಿ ಹೆಚ್ಚಿದ ಒಳಹರಿವು
ಮಹಾರಾಷ್ಟ್ರದ ಸಾವಂತವಾಡಿ-ಅಂಬೋಲಿ ಅರಣ್ಯ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯ ಕಣಕುಂಬಿ-ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಘಟಪ್ರಭಾ ಹಾಗೂ ಮಲಪ್ರಭಾ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ. ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿ ನೀರಿನ ಮಟ್ಟದಲ್ಲಿ ಒಂದೇ ದಿನ 4 ಅಡಿಯಷ್ಟು ಹೆಚ್ಚಳವಾಗಿದೆ. ನಿಪ್ಪಾಣಿ ತಾಲೂಕಿನ 3 ಸೇತುವೆ ಮತ್ತು ಚಿಕ್ಕೋಡಿ ತಾಲೂಕಿನ 2 ಸೇತುವೆ ಸೇರಿ ಒಟ್ಟು ಚಿಕ್ಕೋಡಿ ಉಪವಿಭಾಗದ 5 ಸೇತುವೆಗಳು ಮುಳುಗಡೆಯಾಗಿ ಸಂಚಾರ ಕಡಿತಗೊಂಡಿದೆ.