Advertisement
ಈ ವರ್ಷ ಏನಾಯ್ತು?ಪ್ರಸಕ್ತ ವರ್ಷ ವಾಡಿಕೆಯಂತೆಯೇ ಜೂ.1ರಂದು ಮುಂಗಾರು ಕೇರಳ ಪ್ರವೇಶಿಸಿತು. ಆದರೆ, ವಾಡಿಕೆಗೂ 12 ದಿನಗಳ ಮುನ್ನ ಅಂದರೆ ಜೂ.26ರಂದೇ ಮುಂಗಾರು ದೇಶಾದ್ಯಂತ ವ್ಯಾಪಿಸಿತು. ಹೀಗಿದ್ದರೂ, ಮಳೆಗಾಲ ಮುಗಿಯುವ ದಿನಾಂಕವು ವಿಳಂಬವಾಯಿತು. ಪಶ್ಚಿಮ ರಾಜಸ್ಥಾನ ಮತ್ತು ಪಂಜಾಬ್‌ನ ಕೆಲ ಭಾಗಗಳಲ್ಲಿ ಸೆ.28ರ ವೇಳೆಗೆ ಮುಂಗಾರು ಅವಧಿ ಮುಗಿದರೆ, ದೇಶದ ಇತರೆ ಭಾಗಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಅ.28ರವರೆಗೆ ಕಾಯಬೇಕಾಯಿತು. ಈ ಮೂಲಕ, ವಾಡಿಕೆಗಿಂತ 13 ದಿನ ವಿಳಂಬವಾಗಿ ಮಳೆಗಾಲದ ಅವಧಿ ಮುಗಿಯಿತು.
ಮಳೆಗಾಲದ ಅವಧಿ ವಿಸ್ತರಣೆಯಾಗಲು ಜಾಗತಿಕ ತಾಪಮಾನವೂ ಕಾರಣವಿರಬಹುದು ಎನ್ನುತ್ತಾರೆ ಸ್ಕೈಮೆಟ್ ವೆದರ್‌ನ ಅಧ್ಯಕ್ಷ ಮಹೇಶ್ ಪಲಾವಟ್. ತಾಪಮಾನ ಹೆಚ್ಚಳದ ಪರಿಣಾಮದಿಂದಾಗಿ ಬಂಗಾಳಕೊಲ್ಲಿ ಯಲ್ಲಿ ಪದೇ ಪದೆ ವಾಯುಭಾರ ಕುಸಿತ, ಚಂಡಮಾರುತದಂಥ ವಿದ್ಯಮಾನಗಳು ಸಂಭವಿಸುತ್ತಿದ್ದು, ಇದರಿಂದಾಗಿಯೇ ಮುಂಗಾರು ಅಂತ್ಯ ವಿಳಂಬವಾಗುತ್ತಿರುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸುವ ದಿನ – ಜೂ.1
ಇಡೀ ದೇಶಕ್ಕೆ ಮುಂಗಾರು ವ್ಯಾಪಿಸುವುದು- ಜು.8
ಪ್ರಸಕ್ತ ವರ್ಷ ಮುಂಗಾರು ಪ್ರವೇಶಿಸಿದ್ದು- ಜೂ.1
ದೇಶಾದ್ಯಂತ ವ್ಯಾಪಿಸಿದ ದಿನಾಂಕ – ಜೂ.26
ಮುಂಗಾರು ಅಂತ್ಯ ಪ್ರಕ್ರಿಯೆಯಲ್ಲಾದ ವಿಳಂಬ- 13 ದಿನ
45 ವರ್ಷಗಳಲ್ಲಿ ಎಷ್ಟು ಬಾರಿ ವಿಳಂಬ?- 28