Advertisement

ಆಫಿಕಾದಿಂದ ಬಂದ ವ್ಯಕ್ತಿಯ ಮಂಕಿಪಾಕ್ಸ್‌ ಪರೀಕ್ಷೆ ವರದಿ ನೆಗೆಟಿವ್‌

08:12 PM Jul 31, 2022 | |

ಬೆಂಗಳೂರು: ಆಫ್ರಿಕಾದಿಂದ ಬೆಂಗಳೂರಿಗೆ ಬಂದಿರುವ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ನೆಗೆಟಿವ್‌ ಎಂದು ದೃಢಪಟ್ಟಿದ್ದು, ಅವರಿಗೆ ಚಿಕನ್‌ಪಾಕ್ಸ್‌ ಇರುವುದು ದೃಢವಾಗಿದೆ.

Advertisement

ಪ್ರಸ್ತುತ ರಾಜ್ಯದಲ್ಲಿ ಮಂಕಿ ಪಾಕ್ಸ್‌ ಭೀತಿ ದೂರವಾಗಿದೆ. ಶನಿವಾರ ಬೆಂಗಳೂರಿನಲ್ಲಿ ಆಫ್ರಿಕಾದಿಂದ ಕಿಡ್ನಿ ಶಸ್ತ್ರ ಚಿಕಿತ್ಸೆಗೆ ಬೆಂಗಳೂರಿಗೆ ಆಗಮಿಸಿದ್ದ ವ್ಯಕ್ತಿಗೆ ಮಂಕಿಪಾಕ್ಸ್‌ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ಮಾದರಿಯನ್ನು ಪುಣೆಗೆ ರವಾನೆ ಮಾಡಲಾಗಿತ್ತು. ವರದಿಯಲ್ಲಿ ಮಂಕಿಪಾಕ್ಸ್‌ ಇಲ್ಲವೆಂದು ದೃಢವಾಗಿದೆ.

ರಾಜ್ಯಕ್ಕೆ ವಿದೇಶಗಳಿಂದ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ತಪಾಸಣೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next