Advertisement

“ಮಂಕಿಗೇಟ್‌’ವಿವಾದ ತನ್ನ ಬದುಕಿನ ಕೆಟ್ಟ ಸನ್ನಿವೇಶ: ಪಾಂಟಿಂಗ್‌

09:26 AM Mar 19, 2020 | Sriram |

ಮೆಲ್ಬರ್ನ್: 12 ವರ್ಷಗಳ ಹಿಂದೆ ಕ್ರಿಕೆಟ್‌ ಜಗತ್ತನ್ನು ತಲ್ಲಣಗೊಳಿಸಿದ್ದ “ಮಂಕಿಗೇಟ್‌’ ಪ್ರಕರಣ ನೆನಪಿಸಿಕೊಂಡ ಆಸ್ಟ್ರೇಲಿಯ ತಂಡ ಮಾಜಿ ನಾಯಕ ರಿಕಿ ಪಾಂಟಿಂಗ್‌ ನನ್ನ ನಾಯಕತ್ವದಲ್ಲಿ ಘಟಿಸಿದ ಅತ್ಯಂತ ಕೆಟ್ಟ ಸನ್ನಿವೇಶ ಇದಾಗಿದೆ ಎಂದು ಹೇಳಿದ್ದಾರೆ.

Advertisement

2007-08ನೇ ಸಾಲಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯ ನಡುವೆ ಸಿಡ್ನಿಯಲ್ಲಿ ನಡೆದ ದ್ವಿತೀಯ ಟೆಸ್ಟ್‌ ಪಂದ್ಯದ ಸಂದರ್ಭದಲ್ಲಿ ಭಾರತೀಯ ಆಫ್ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಹಾಗೂ ಆಸ್ಟ್ರೇಲಿಯದ ಆಲ್‌ರೌಂಡರ್‌ ಆ್ಯಂಡ್ರೂé ಸೈಮಂಟ್ಸ್‌ ನಡುವೆ ಮಂಕಿಗೇಟ್‌ ವಿವಾದ ಹುಟ್ಟಿಕೊಂಡಿತ್ತು. ಅಂದು ಭಾರತೀಯ ನಾಯಕ ಅನಿಲ್‌ ಕುಂಬ್ಳೆ, ಸಚಿನ್‌ ತೆಂಡುಲ್ಕರ್‌ ಹಾಗೂ ಆಸೀಸ್‌ ನಾಯಕ ರಿಕಿ ಪಾಂಟಿಂಗ್‌ ಸೇರಿದಂತೆ ಇತ್ತಂಡಗಳ ಬಹುತೇಕ ಎಲ್ಲ ಆಟಗಾರರು ಆರೋಪ-ಪ್ರತ್ಯಾರೋಪಗಳಲ್ಲಿ ಭಾಗಿಯಾಗಿ ಪ್ರಕರಣ ಇನ್ನಷ್ಟು ತೀವ್ರತೆ ಪಡೆದಿತ್ತು.

ಇದೀಗ ಮಂಕಿಗೇಟ್‌ ವಿವಾದವನ್ನು ನೆನಪಿಸಿರುವ ರಿಕಿ ಪಾಂಟಿಂಗ್‌, ತಮ್ಮ ನಾಯಕತ್ವದ ಅವಧಿಯಲ್ಲಿ ನಡೆದ ಈ ಅನಿರೀಕ್ಷಿತ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬಹುಶಃ ತಮ್ಮ ನಾಯಕತ್ವದ ಅತ್ಯಂತ ಕೆಟ್ಟ ಕಾಲಘಟ್ಟ ಇದಾಗಿದೆ. 2005ರ ಆ್ಯಶಸ್‌ ಸರಣಿ ಕಳೆದುಕೊಳ್ಳುವುದು ಕಠಿಣವೆನಿಸಿತ್ತು. ಆದರೂ ಸಂಪೂರ್ಣ ಪಂದ್ಯವು ನನ್ನ ನಿಯಂತ್ರಣದಲ್ಲಿತ್ತು. ಆದರೆ “ಮಂಕಿಗೇಟ್‌ ‘ ವಿವಾದದ ಸಮಯದಲ್ಲಿ ಏನಾಯಿತು ಎಂಬುದು ನನ್ನ ನಿಯಂತ್ರಣ ಪರಿಧಿಯಲ್ಲಿರಲಿಲ್ಲ ಈ ವಿವಾದ ನನ್ನ ಕ್ರಿಕೆಟ್‌ ಕೆರಿಯರ್‌ನ ಬಹಳ ಕಷ್ಟದ ದಿನಗಳಾಗಿತ್ತು ಎಂದು ಪಾಂಟಿಂಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next