ಚಿಕ್ಕಮಗಳೂರು: ರೇಗಿಸಿದವನ ವಿರುದ್ಧ ರೊಚ್ಚಿಗೆದ್ದ ಕೋತಿಯೊಂದು ಆತನನ್ನು ಹುಡುಕಿ-ಹುಡುಕಿ ಕಚ್ಚಿ ಗಾಯಗೊಳಿಸಿದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.
ಈ ಕೋತಿ ಕೊಟ್ಟಿಗೆಹಾರದ ಮೊರಾರ್ಜಿ ದೇಸಾಯಿ ಹಾಸ್ಟೇಲ್ಗೆ ಬಂದಿತ್ತು. ಆಟೋ ಚಾಲಕ ಜಗದೀಶ್ ಎಂಬವರು ಕೋತಿಗೆ ರೇಗಿಸಿದ್ದರು. ಇದರಿಂದ ಜಗದೀಶ್ ಬೆನ್ನತ್ತಿದ್ ಕೋತಿ ಅವರನ್ನು ಹುಡುಕಿ-ಹುಡುಕಿ ಕೈಗೆ ಕಚ್ಚಿದೆ.
ಇದನ್ನೂ ಓದಿ:ಚಿಕ್ಕಮಗಳೂರು: ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ
ಬೇರೆಯವರ ತಲೆ ಮೇಲೆ ಕೂತ ಕೋತಿ ಆಟವಾಡುತ್ತಿತ್ತು. ಅವರಿಗೆ ಏನೂ ಮಾಡದ ಕೋತಿ ಕೀಟಲೆ ಮಾಡಿದ ಜಗದೀಶ್ ಮಾತ್ರ ಬೆನ್ನು ಬಿಡದೆ ಹೋಗಿ ಕಚ್ಚಿದೆ. ಮಂಗನಿಗೆ ಹೆದರಿ ಜಗದೀಶ್ ಆಟೋ, ಕಾರುಗಳಲ್ಲಿ ಕದ್ದು ಕೂತಿದ್ದರು. ಆದರೆ ಹುಡುಕಿಗೊಂಡು ಬಂದ ಕೋತಿ ಆಟೋವನ್ನು ಪತ್ತೆ ಹಚ್ಚಿ, ಟಾಪ್ ಹರಿದು ಸೇಡು ತೀರಿಸಿಕೊಂಡಿದೆ.
ಕೋತಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.