Advertisement

ಮಂಗನ ಕಾಯಿಲೆಗೆ ಇನ್ನೊಂದು ಬಲಿ

12:24 AM May 02, 2019 | Sriram |

ಸಾಗರ/ಉಡುಪಿ: ಮಾರಣಾಂತಿಕ ಮಂಗನ ಕಾಯಿಲೆಗೆ ತುತ್ತಾದವರ ಸಾವಿನ ಸರಣಿ ಮುಂದುವರಿದಿದೆ. ತಾಲೂಕಿನ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ವ್ಯಕ್ತಿಯೊಬ್ಬರು ಬುಧವಾರ ಬೆಳಗ್ಗೆ ಕಾಯಿಲೆಯಿಂದ ಮೃತಪಟ್ಟಿದ್ದಾರೆ.

Advertisement

ಈ ಕಾಯಿಲೆಗೆ ತುತ್ತಾಗಿದ್ದ ನಂದೋಡಿಯ ಕರಿಯಪ್ಪ (50) ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಎ. 27ರಂದು ಕೆಎಂಸಿಗೆ ದಾಖಲಾಗಿದ್ದ ಇವರಿಗೆ ಕೆಎಫ್‌ಡಿ ವೈರಸ್‌ ಸೋಂಕುತಗುಲಿರುವುದು ದೃಢಪಟ್ಟಿತ್ತು. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದರೂ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅರಳಗೋಡು ಗ್ರಾ. ಪಂ. ವ್ಯಾಪ್ತಿಯಲ್ಲಿ ಡಿಸೆಂಬರ್‌ನಿಂದ ಈಚೆಗೆ ಸುಮಾರು 21 ಮಂದಿ ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.

ಮಣಿಪಾಲ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದ ತಾಳಗುಪ್ಪ ಸಮೀಪದ ಹಿರೇಮನೆಯ ಸುಬ್ಬಮ್ಮ ಶೆಡ್ತಿ ಅವರಲ್ಲಿ ಮಂಗನಕಾಯಿಲೆಯ ವೈರಸ್‌ ಇದ್ದದ್ದು ದೃಢಪಟ್ಟಿದೆ. ಅವರ ರಕ್ತ ಪರೀಕ್ಷೆ ವರದಿ ಪಾಸಿಟಿವ್‌ ಬಂದಿದೆ ಎಂದು ಡಾ| ಮುನಿವೆಂಕಟರಾಜು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next