Advertisement

ಮಕ್ಕಳ ಮೇಲೆ ಕಣ್ಣಿಡಿ: ಎಸ್‌ಪಿ ಮನವಿ

10:50 AM Feb 25, 2017 | Team Udayavani |

ಉಳ್ಳಾಲ: ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತಿರುವ ಜಿಲ್ಲೆಯಲ್ಲಿ ಮಾದಕ ದ್ರವ್ಯ ವ್ಯಸನಿಗಳಿಗಿಂತ ಮಾರಾಟ ಮಾಡುವವರ ಸಂಖ್ಯೆ ಅಧಿಕವಾಗುತ್ತಿರುವುದು ಕಳವಳಕಾರಿ ಯಾಗಿದ್ದು, ಇಂತಹವರಿಂದ ತಮ್ಮ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಹೆತ್ತವರು ತಮ್ಮ ಮಕ್ಕಳ ದೈನಂದಿನ ಚಟುವಟಿಕೆಯ ಮೇಲೆ ತೀವ್ರ ನಿಗಾ ಇಡುವ ಕಾರ್ಯ ಆಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ್‌ ಜಿ. ಬೊರಸೆ ಅಭಿಪ್ರಾಯಪಟ್ಟರು.

Advertisement

ದೇರಳಕಟ್ಟೆಯ ಯೇನಪೊಯ ವಿಶ್ವವಿದ್ಯಾನಿಲಯದ ಯೇನಪೊಯ ನಾರ್ಕೋಟಿಕ್ಸ್‌ ಎಜುಕೇಶನಲ್‌ ಫೌಂಡೇಶನ್‌ ಆಫ್‌ ಇಂಡಿಯಾ ದಕ್ಷಿಣ ಕನ್ನಡ, ಉಡುಪಿ ಕೊಡಗು ಮತ್ತು ಕಾಸರಗೋಡು ಜಿಲ್ಲಾ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ತಮ್ಮ ಮಕ್ಕಳನ್ನು ಕಲಿಯಲೆಂದು ಕಳುಹಿಸಿದಾಗ ಅವರ ಬೇಡಿಕೆಗಳ ಕಡೆ ಗಮನ ಹರಿಸಬೇಕು. ಅದರಲ್ಲೂ ಆರ್ಥಿಕವಾಗಿ ಉತ್ತಮವಾಗಿರುವ ಕುಟುಂಬದವರು ತಮ್ಮ ಮಕ್ಕಳಿಗೆ ಹಣ ನೀಡುವಾಗ ಹಣವನ್ನು ಯಾವುದಕ್ಕೆ ಖರ್ಚು ಮಾಡಲಾಗುತ್ತದೆ ಎನ್ನುವ ವಿಚಾರ ತಿಳಿದಿರಬೇಕಾಗುತ್ತದೆ. ಮಕ್ಕಳ ಮೇಲಿನ ಹಿಡಿತ ತಪ್ಪಿದಾಗ ಅಮಲು ಪದಾರ್ಥಗಳ ವ್ಯಸನಕ್ಕೆ ಬಲಿಯಾಗುವ ಪ್ರಸಂಗಗಳು ಹೆಚ್ಚಾಗಿದ್ದು ಆ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಬೇಕು ಎಂದರು.

ಶಿಕ್ಷಕರ ಪಾತ್ರವೂ ಮಹತ್ತರ
ಹೆತ್ತವರೊಂದಿಗಿದ್ದು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಚಲನವಲ ನದ ಕಡೆ ಹೆತ್ತವರು ನಿಗಾ ವಹಿಸಲು ಸಾಧ್ಯವಿದೆ. ಆದರೆ ವಿದ್ಯಾರ್ಥಿ ನಿಲಯ ಗಳಲ್ಲಿರುವ ಮಕ್ಕಳ ಚಲನವಲನದ ಕಡೆ ಹೆತ್ತವರು ಗಮನ ನೀಡುವುದು ಕಷ್ಟ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಶೈಕ್ಷಣಿಕ ಸಂಸ್ಥೆಗಳ ಪಾತ್ರವೂ ಪ್ರಾಮುಖ್ಯವಾಗಿದ್ದು, ವಿದ್ಯಾರ್ಥಿಗಳು ಮಾದಕದ್ರವ್ಯ ವ್ಯಸನದಲ್ಲಿ ಸಿಲುಕಿಕೊಂಡಿದ್ದರೆ ಅವರನ್ನು ಆರೋಪಿಗಳಂತೆ ನೋಡದೆ ಆಪ್ತ ಸಮಾಲೋಚನೆಯೊಂದಿಗೆ ಸ್ನೇಹ ಪರತೆಯಿಂದ ನಡೆದುಕೊಂಡರೆ ಅವರನ್ನು ಮಾದಕ ವ್ಯಸನದಿಂದ ದೂರ ಮಾಡಲು ಸಾಧ್ಯ ಎಂದರು.

ಸಮನ್ವಯ ಅಗತ್ಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೇನಪೊಯ ವಿಶ್ವವಿದ್ಯಾಲ ಯದ ಕುಲಾಧಿಪತಿ ವೈ. ಅಬ್ದುಲ್ಲ ಕುಂಞಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಜತೆಯಾಗಿ ಮಾದಕ ವ್ಯಸನಗಳ ವಿರುದ್ಧ ಕಾರ್ಯಾಚರಿಸಿ, ಯುವ ಸಮುದಾಯವನ್ನು ಸಮಾಜಮುಖೀ ಚಿಂತನೆಗಳಿಂದ ಬೆಳೆಸುವಲ್ಲಿ ಕಾರ್ಯೋನ್ಮುಖವಾಗಬೇಕು ಎಂದರು.

Advertisement

ಮಂಗಳೂರಿನ ಸಂತ ಅಲೋಶಿ ಯಸ್‌ ಕಾಲೇಜಿನ ಕುಲಸಚಿವ ಡಾ| ಎ.ಎಂ. ನರಹರಿ ಮಾಹಿತಿ ನೀಡಿದರು. ಯೇನೆಪೊಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಬಿ.ಎ ಚ್‌. ಶ್ರೀಪತಿ ರಾವ್‌ ಉಪಸ್ಥಿತರಿದ್ದರು.
ಯೇನಪೊಯ ವಿವಿಯ ಕುಲ ಸಚಿವ ಡಾ| ಶ್ರೀಕುಮಾರ್‌ ಮೆನನ್‌ ಸ್ವಾಗತಿಸಿದರು. ಡಾ| ಶೆಮ್‌ ಜಾಸ್‌ ಅರಕ್ಕಲ ಎಂ. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next