Advertisement

US ‘ನೀಲಿ ತಾರೆ’ ಬಾಯಿ ಮುಚ್ಚಿಸಲು ಹಣ; ಡೊನಾಲ್ಡ್‌ ಟ್ರಂಪ್‌ ದೋಷಿ: ಮುಂದೇನು?

12:50 AM Jun 01, 2024 | Team Udayavani |

ನ್ಯೂಯಾರ್ಕ್‌: 2016ರ ಅಧ್ಯಕ್ಷೀಯ ಚುನಾವಣೆ ವೇಳೆ ತಮ್ಮ ವಿರುದ್ಧ ಹೇಳಿಕೆ ನೀಡದಂತೆ “ನೀಲಿ ತಾರೆ’ಗೆ ಹಣ ನೀಡಿದ್ದ ಪ್ರಕರಣದಲ್ಲಿ (ಹಶ್‌ ಮನಿ ಕೇಸ್‌) ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೋಷಿ ಎಂದು ನ್ಯಾಯಾಲಯ ಘೋಷಿಸಿದೆ. ದೋಷಿ ಎನಿಸಿಕೊಂಡ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿ ಟ್ರಂಪ್‌ಗೆ ಅಂಟಿದೆ.

Advertisement

ಜು.11ರಂದು ಶಿಕ್ಷೆ ಪ್ರಕಟವಾಗಲಿದೆ. ಟ್ರಂಪ್‌ 2016ರ ಅಧ್ಯಕ್ಷೀಯ ಚುನಾವಣೆ ವೇಳೆ ಸ್ಪರ್ಧೆಯ ಮೇಲೆ ಪ್ರಭಾವ ಬೀರದಂತೆ “ವಯಸ್ಕ ಸಿನಿಮಾ’ ತಾರೆ ಸ್ಟಾರ್ಮಿ ಡೇನಿಯಲ್‌ಗೆ 130,000 ಡಾಲರ್‌ ಹಣ (1.08 ಕೋಟಿ ರೂ.) ನೀಡಿದ್ದು ಸಾಬೀತಾಗಿದೆ ಎಂದು 12 ಮ್ಯಾನ್‌ಹಟನ್‌ ನ್ಯಾಯಾಧೀಶರ ಸಮಿತಿ ಗುರುವಾರ ಸರ್ವಾನುಮತದಿಂದ ತೀರ್ಪು ನೀಡಿದೆ. ಇಷ್ಟಾಗಿಯೂ, ಟ್ರಂಪ್‌ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಬಂಧ ಹೇರಿಲ್ಲ. ಅವರು ಈ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ
ಎನ್ನಲಾಗಿದೆ.

ಮುಂದೇನು?
2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ತೊಂದರೆ ಇಲ್ಲ.

ಈ ಪ್ರಕರಣದಲ್ಲಿ ಗರಿಷ್ಠ 4 ವರ್ಷ ಜೈಲು ಶಿಕ್ಷೆಯಾಗಬಹುದು. ಆದರೆ ಜಡ್ಜ್ರನ್ನು ಅವಲಂಬಿಸಿದೆ

ಜೈಲು ಶಿಕ್ಷೆಯಾಗದಿದ್ದರೆ ದಂಡ ಅಥವಾ ನಿರ್ಬಂಧದಂಥ ಕ್ರಮ ಕೈಗೊಳ್ಳಬಹುದು.

Advertisement

ಗೃಹಬಂಧನ ಶಿಕ್ಷೆಯಾದರೆ ಮನೆಯಿಂದಲೇ ವರ್ಚುವಲ್‌ ಪ್ರಚಾರಕ್ಕೆ ಟ್ರಂಪ್‌ ಸಿದ್ಧತೆ

ಶಿಕ್ಷೆ ಪ್ರಶ್ನಿಸಿ ಟ್ರಂಪ್‌ ನ್ಯೂಯಾರ್ಕ್‌ನ ಉನ್ನತ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು

ಇನ್ನೂ 3 ಪ್ರಕರಣದಲ್ಲಿ ಗಂಭೀರ ಆರೋಪವಿದ್ದು, ಚುನಾವಣೆ ಮೊದಲೇ ಶಿಕ್ಷೆ ಎದುರಿಸಬಹುದು

Advertisement

Udayavani is now on Telegram. Click here to join our channel and stay updated with the latest news.

Next