Advertisement

ಮಳಲಿ: ಫೈನಾನ್ಸರ್‌ ನಿಂದ ಲಕ್ಷಾಂತರ ರೂ. ದರೋಡೆ

09:50 AM Jul 15, 2019 | Team Udayavani |

ಮಂಗಳೂರು: ಮಾರಕಾಯುಧಗಳನ್ನು ಹಿಡಿದುಕೊಂಡು ಜೀವ ಬೆದರಿಕೆ ಹಾಕಿದ ದರೋಡೆಕೋರರು, ಖಾಸಗಿ ಫೈನಾನ್ಸರ್‌ ಓರ್ವ ರಿಂದ ಲಕ್ಷಾಂತರ ರೂ. ದೋಚಿ ಪರಾರಿಯಾದ ಘಟನೆ ಬಜಪೆ ಸಮೀಪದ ಮಳಲಿಯಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.

Advertisement

ಮಳಲಿ ನಿವಾಸಿ, ಫೈನಾನ್ಸರ್‌ ಸೆಂಥಿಲ್‌ ಕುಮಾರ್‌ ದರೋಡೆಗೊಳಗಾದ ವ್ಯಕ್ತಿ.

ಸೆಂಥಿಲ್‌ಕು ಮಾರ್‌ ಸಹಿತ ಕೆಲವರು ಸೇರಿಕೊಂಡು ಬಜಪೆ ವ್ಯಾಪ್ತಿಯಲ್ಲಿ ಫೈನಾನ್ಸ್‌ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಸೆಂಥಿಲ್‌ ಕುಮಾರ್‌ ಅವರು ಪ್ರತಿ ರವಿವಾರ ಜನರಿಂದ ಹಣ ಸಂಗ್ರಹಿಸುತ್ತಿದ್ದರು. ಅದರಂತೆ ರವಿವಾರ ಮಧ್ಯಾಹ್ನ 2.30ಕ್ಕೆ ಹಣ ಸಂಗ್ರಹಿಸಿ ಮಳಲಿ ಸಮೀಪದ ಕಾಲನಿಯೊಂದರ ಸಮೀಪದಲ್ಲಿ ತೆರಳುತ್ತಿದ್ದರು.

ಆಗ ಎರಡು ಬೈಕುಗಳಲ್ಲಿ ಬಂದ ನಾಲ್ವರು ತಂಡ ಅವರನ್ನು ಹಿಂಬಾಲಿಸಿದೆ. ಕೆಲಹೊತ್ತಿನ ಈ ತಂಡ ಸೆಂಥಿಲ್‌ಕುಮಾರರಿಂದ ಮುಂದೆ ತೆರಳಿ, ಮತ್ತೆ ವಿರುದ್ಧ ದಿಕ್ಕಿನಲ್ಲಿ ವಾಪಸಾಯಿತು. ಅದರಲ್ಲಿದ್ದವರು ಮಚ್ಚು ಹಿಡಿದು ಜೀವ ಬೆದರಿಕೆ ಹಾಕಿ, 2 ಲ.ರೂ. ನಗದು ಇದ್ದ ಪೆಟ್ಟಿಗೆಯನ್ನು ಒಡೆದಿದ್ದಾರೆ. ಜತೆಗೆ ಅವರ ಜೇಬಲ್ಲಿದ್ದ 5 ಸಾವಿರ ರೂ. ಸಹಿತ ಒಟ್ಟು 2.05 ಲಕ್ಷ ರೂ.ನ್ನು ದರೋಡೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next