Advertisement

ಹಗಲಲ್ಲೇ ಚಿಲ್ಲರೆ ನೆಪದಲ್ಲಿ ಹಣ ದೋಚಿ ಪರಾರಿ: ಹೆಚ್ಚುತ್ತಿರುವ ಪ್ರಕರಣಗಳಿಂದ ಜನತೆ ಕಂಗಾಲು

09:23 AM Apr 03, 2021 | Team Udayavani |

ಬನಹಟ್ಟಿ(ಬಾಗಲಕೋಟೆ) : ಚಿಲ್ಲರೆ ಕೇಳುವ ನೆಪದಲ್ಲಿ ಬಂದು 15 ಸಾವಿರ ನಗದು ದೋಚಿ ಪರಾರಿಯಾದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಬನಹಟ್ಟಿಯ ವೈಭವ ಚಿತ್ರಮಂದಿರ ಬಳಿಯಿರುವ ರಾಜ್ ವರ್ಲ್ಡ್ ಮೊಬೈಲ್ ಸೆಂಟರ್‌ನಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಒಂಟಿ ಯುವತಿ ಅಂಗಡಿಯಲ್ಲಿ ಕುಳಿತಿದ್ದನ್ನು ಕಂಡ ಇಬ್ಬರು ಅನಾಮಿಕ ವ್ಯಕ್ತಿಗಳು ಬೈಕ್ ಮೇಲೆ ಬಂದು 500 ರೂ.ಗಳ ಚಿಲ್ಲನೆ ನೀಡಿ ಎಂದು ಕೇಳಿದ್ದಾರೆ. ಅಂಗಡಿಯೊಳಗಿದ್ದ ಯುವತಿ ಚಿಲ್ಲರೆಯಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದರೂ ಕೊನೆಗೆ 100 ರೂ.ಗಳದದ್ದಾರೂ ಕೊಡಿ, ಹೊಸದಾದ ನೋಟುಗಳನ್ನು ಕೊಡಿ ಎಂದು ಒಬ್ಬರು ಮಾತಿಗಿಳಿದ್ದರು.

ಇದನ್ನೂ ಓದಿ:

ಮತ್ತೋರ್ವ ವ್ಯಕ್ತಿ ನೇರವಾಗಿ ಅಂಗಡಿಯೊಳಗೆ ಹೋಗಿ ಹಣವಿದ್ದ ಡ್ರಾವರ್ ನಲ್ಲಿ ಇಲ್ಲಿವೆ ನೋಡಿ ಎಂದು ಹೇಳುತ್ತ, ಮತ್ತೋರ್ವ ವ್ಯಕ್ತಿಯೊಂದಿಗೆ ಮಾತಿನೊಂದಿಗೆ ಗೊಂದಲ ಸೃಷ್ಟಿಸಿ ಏಕಾಏಕಿ ಡ್ರಾವರ್ ದಲ್ಲಿದ್ದ ಹಣದ ಬಂಡಲ್‌ನ್ನು ಕ್ಷಣಾರ್ಧದಲ್ಲಿಯೇ ಕಣ್ಣು ಮುಂದೆಯೇ ಎತ್ತಿಕೊಂಡು ಇಬ್ಬರೂ ಬೈಕ್ ಏರಿ ಪರಾರಿಯಾದ ಘಟನೆ ನಡೆದಿದೆ. ಇದರಿಂದ ಕಕ್ಕಾಬಿಕ್ಕಿಯಾದ ಯುವತಿ ಜೋರಾಗಿ ಕೂಗುವಷ್ಟರಲ್ಲಿಯೇ ಪರಾರಿಯಾಗಿದ್ದಾರೆ. ಕಳ್ಳರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಚಿಲ್ಲರೆ ನೀಡಿ ಎಂದು 500 ಅಥವಾ 2000 ಮುಖಬೆಲೆಯ ನೋಟಿನೊಂದಿಗೆ ಫೀಲ್ಡಿಗಳಿಯುತ್ತಿರುವ ಅನಾಮಿಕ ವ್ಯಕ್ತಿಗಳಿಂದ ಕಳೆದೊಂದು ತಿಂಗಳಿನಿಂದ ಅಲ್ಲಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ.

Advertisement

ಕಳೆದೊಂದು ವಾರದ ಹಿಂದೆಯೇ ಇದೇ ಪ್ರದೇಶದ ಸೋಮವಾರ ಪೇಟೆಯ ಜನಧನ ಸೌಹಾರ್ದ ಸಂಘದಲ್ಲಿಯೇ ಇದೇ ರೀತಿ ಪ್ರಕರಣ ನಡೆದಿತ್ತು.

ಇದರಿಂದ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ವ್ಯಾಪಾರಿ ಹಾಗು ಸಹಕಾರಿ ಸಂಘಗಳಲ್ಲಿ ಆತಂಕ ಹೆಚ್ಚಾಗಿದೆ. ಇಂತಹ ಕೃತ್ಯವೆಸಗುತ್ತಿರುವ ಜಾಲವನ್ನು ಬೆನ್ನಟ್ಟಿ ಪೊಲೀಸರು ತಕ್ಕ ಶಾಸ್ತಿ ಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next