Advertisement
ಎಸ್.ಅಂಜಲಿ ಮಾರಿಸ್‌ರವರು ಈ ಹಿಂದೆ ಹನಗೋಡು ಶಾಲೆಯಲ್ಲಿ ಪ್ರಭಾರಿ ಮುಖ್ಯ ಶಿಕ್ಷಕರಾಗಿದ್ದ ವೇಳೆ ಮಕ್ಕಳ ಅಕ್ಷರ ದಾಸೋಹ-ಬಿಸಿಯೂಟ ಯೋಜನೆಯಡಿ ಹಂತ-ಹಂತವಾಗಿ 4,42,483 ರೂಗಳು ದುರುಪಯೋಗಪಡಿಸಿಕೊಂಡಿರುವುದು ಅಕ್ಷರ ದಾಸೋಹದ ಶಿಕ್ಷಣಾಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿದ್ದು, ಅವರ ವರದಿ ಆದಾರದ ಮೇಲೆ ಶಿಕ್ಷಣ ಇಲಾಖೆ ಕಾರಣ ಕೇಳಿ ನೀಡಿದ್ದ ನೋಟಿಸ್‌ಗೆ ಶಿಕ್ಷಕಿ ಅಂಜಲಿ ಮಾರಿಸ್‌ರವರು ದುರುಪಯೋಗಪಡಿಸಿಕೊಂಡಿರುವ ಹಣವನ್ನು ಶಾಲೆಯ ಅಕ್ಷರ ದಾಸೋಹ ಖಾತೆಗೆ ಹಣವನ್ನು ಜಮೆ ಮಾಡಲು ಒಪ್ಪಿ ತಪ್ಪೊಪ್ಪಿಗೆ ಪತ್ರವನ್ನು ಸಲ್ಲಿಸಿರುವ ಪರಿಣಾಮ ನಿಮ್ಮ ಮೇಲಿನ ಆರೋಪ ಸಾಬೀತಾಗಿರುತ್ತದೆ. ಇದರಿಂದಾಗಿ ನೀವು ಪ್ರಭಾರವಹಿಸಿಕೊಂಡಿದ್ದ ಅವಧಿಯ ಶಾಲೆಯಲ್ಲಿನ ಅವ್ಯವಹಾರಗಳ ಬಗ್ಗೆ ವಿಚಾರಣೆ ನಡೆಸಲು ತೀರ್ಮಾನಿಸಿ, ಶಿಸ್ತು ಕ್ರಮವಹಿಸಲು ತೀರ್ಮಾನಿಸಿದೆ, ನಿಮ್ಮ ವರ್ತನೆಯಿಂದಾಗಿ ಸಾರ್ವಜನಿಕರು ಇಲಾಖೆಯನ್ನು ಹಾಗೂ ಶಿಕ್ಷಕರನ್ನು ಅನುಮಾನದಿಂದ ನೋಡುವಂತಾಗಿದ್ದು, ಬಿಸಿಯೂಟದ ಹಣ ದುರುಪಯೋಗವನ್ನು ಗಂಭೀರವಾಗಿ ಪರಿಗಣಿಸಿ, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ಡಿಡಿಪಿಐ ಪತ್ರಿಕೆಗೆ ತಿಳಿಸಿದ್ದಾರೆ.
Related Articles
Advertisement
ಅಂಜಲಿ ಮಾರೀಸ್‌ರವರು ಪ್ರಭಾರಿ ಮುಖ್ಯ ಶಿಕ್ಷಕಿಯಾಗಿದ್ದ ವೇಳೆ ಬಿಸಿಯೂಟ ಹಣ ದುರುಪಯೋಗದ ಜೊತೆಗೆ ಪಿಠೋಪಕರಣಗಳಿಗಾಗಿ ಶಾಲಾ ಮಕ್ಕಳಿಂದ ವಸೂಲಿ ಮಾಡಿದ್ದ ೪೮ ಸಾವಿರ ರೂಗಳನ್ನು ಶಾಲಾ ಖಾತೆಗೆ ಜಮೆ ಮಾಡದೆ, ಪೀಠೋಪಕರಣವನ್ನು ಮಾಡಿಸದೆ ತಮ್ಮ ಬಳಿಯೇ ಹಣವಿಟ್ಟುಕೊಂಡು ದುರುಪಯೋಗಪಡಿಸಿಕೊಂಡ ಪಡಿಸಿಕೊಂಡಿದ್ದು ಸಹ ತನಿಖೆ ವೇಳೆ ಪೋಷಕರು ಅಧಿಕಾರಿಗಳಿಗೆ ದೂರಿದ್ದರು. ಮಾರನೇ ದಿನವೇ ಈ ಹಣವನ್ನು ಖಾತೆಗೆ ಜಮೆ ಮಾಡಿದ್ದರಾದರೂ ಅಕ್ಷರದಾಸೋಹದ ಹಣ ಮಾತ್ರ ಪಾವತಿಸಿರಲಿಲ್ಲ. ತನಿಖೆ ವೇಳೆ ಸಮರ್ಪಕ ಉತ್ತರ ನೀಡಿರಲಿಲ್ಲ.