Advertisement
ಕಳೆದ ಬಾರಿ ಮಳೆಗೆ ನೀರು ರಸ್ತೆಯಲ್ಲೇ ಹರಿದು ಸಂಚಾರ ಸಂಕಟವಾಗಿದ್ದ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆಯಾಗಿ ಮೋರಿಗಳನ್ನು ರಚಿಸಲಾಗಿದೆ.ಆದರೆ ಚರಂಡಿಯ ಮಣ್ಣನ್ನು ತೆಗೆಯದೆ ಹಾಗೆಯೇ ಬಿಟ್ಟಿರುವುದರಿಂದ ಮಳೆ ಬಂದಲ್ಲಿ ಈ ಮಣ್ಣೆಲ್ಲ ಮೋರಿಯ ಒಳಗೆ ಸೇರ್ಪಡೆಗೊಂಡು ಬ್ಲಾಕ್ ಆಗಿ ಸಂಚಾರ ದುಸ್ತರವಾಗಲಿದೆ.
ಕಲ್ವರ್ಟ್ ಮೋರಿ ರಚಿಸಲು ಅನುದಾನ ಬಂದಿದ್ದು ಲೋಕೋಪಯೋಗಿ ಇಲಾಖೆ ಕಾಮಗಾರಿ ಗುತ್ತಿಗೆ ನೀಡಿದೆ. ಗುತ್ತಿಗೆದಾರರು ಮೋರಿ ರಚಿಸಿ ತೆರಳಿದ್ದಾರೆ. ಅಧಿಕಾರಿಗಳು ಕಾಮಗಾರಿಯನ್ನು ಮಾತ್ರ ಪರಿಶೀಲಿಸಿದ್ದಾರೆಯೇ ಹೊರತು, ಕಾಮಗಾರಿಯಿಂದಾಗಿ ಮುಚ್ಚಿರುವ ಚರಂಡಿಗಳನ್ನು ತೆರೆಯುವುದು ತಮ್ಮ ಹೊಣೆಯಲ್ಲ ಎಂಬ ನಿರ್ಲಕ್ಷ ದಲ್ಲಿದ್ದಾರೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.