Advertisement

ಹಣ ವಸೂಲಿಯಲ್ಲಿ ಗ್ರಾಮ ಒನ್‌ ಕೇಂದ್ರಗಳು

03:26 PM Aug 09, 2023 | Team Udayavani |

ಕನಕಪುರ: ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಹಣ ವಸೂಲಿ ಮಾಡಿದ ಗ್ರಾಮ ಒನ್‌ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳದೇ ಇರುವುದು ಸರ್ಕಾರ ಮತ್ತು ಸಚಿವರ ಆದೇಶಗಳು ಜನಸಾಮಾನ್ಯರ ಕಣ್ಣೊರೆಸುವ ತಂತ್ರವೇ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿ ಸಲು. ಯಾವುದೇ ಹಣ ಕೊಡಬೇಕಾಗಿಲ್ಲ ಗೃಹ ಲಕ್ಷ್ಮೀ ಯೋಜನೆಗೆ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಅರ್ಜಿ ಸಲ್ಲಿಸಲು ಗ್ರಾಮ ಒನ್‌ ಸಿಬ್ಬಂದಿ ಹಣ ವಸೂಲಿ ಮಾಡಿ ದರೆ ಆ ಗ್ರಾಮ ಒನ್‌ ನೋಂದಣಿ ಐಡಿಯನ್ನು ಹಿಂಪಡೆದು ಅವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲು ಮಾಡುವಂತೆ ಇಲಾಖೆ ಸಚಿವರ ಆದೇಶವಾಗಿ ದ್ದರೂ ಸಹ ಹಣ ವಸೂಲಿ ಮಾಡು ತ್ತಿರುವ ಗ್ರಾಮ ಒನ್‌ ಸಿಬ್ಬಂದಿಗಳ ಮೇಲೆ ಜಿಲ್ಲಾ ಮತ್ತು ತಾ. ಆಡಳಿತ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ವಾಗ್ವಾದ : ದೊಡ್ಡ ಮರಳವಾಡಿ ಗ್ರಾಮ ಒನ್‌ ಕೇಂದ್ರದಲ್ಲಿ ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಸಾರ್ವಜನಿಕ ರಿಂದ ಪ್ರತಿ ಅರ್ಜಿಗೆ ನೂರು ರೂಪಾಯಿ ವಸೂಲಿ ಮಾಡುತ್ತಿರುವುದನ್ನು ಅರ್ಜಿ ಹಾಕಿದ ಕೆಲವು ಸಾರ್ವ ಜನಿಕರು ಗ್ರಾಮ ಒನ್‌ ಸಿಬ್ಬಂದಿಯನ್ನು ಪ್ರಶ್ನಿಸಿದ್ದರು. ಈ ವಿಚಾರಕ್ಕೆ ಗ್ರಾಮವನ್ನು ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ಕೂಡ ನಡೆದಿತ್ತು. ಸ್ಥಳಿಯರು ಮಾಧ್ಯಮಕ್ಕೆ ಮಾಹಿತಿ ಕೊಟ್ಟಿದ್ದರು ಗ್ರಾಮ ಒನ್‌ ಕೇಂದ್ರದಲ್ಲಿ ಸಾರ್ವ ಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಉದಯವಾಣಿ ಪತ್ರಿಕೆ ಹಾರೋ ಹಳ್ಳಿ ತಾ. ತಹಶೀಲ್ದಾರ್‌ ಗಮನಕ್ಕೆ ತಂದಿತ್ತು ಕೂಡಲೇ ಎಚ್ಚೆತ್ತುಕೊಂಡ ತಹಶೀಲ್ದಾರ್‌ ವಿಜಿ ಯಣ್ಣ ಕೂಡಲೇ ಹಣ ವಸೂಲಿ ಮಾಡುತ್ತಿರುವ ಗ್ರಾಮನ್‌ ಸಿಬ್ಬಂದಿಯನ್ನು ದೂರವಾಣಿ ಮೂಲಕ ಸಂಪರ್ಕಿ ಸಿದಾಗ  ಸಾರ್ವಜನಿಕರಿಂದ ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಹಣ ವಸೂಲಿ ಮಾಡಿ ರುವುದು ಸತ್ಯ ವೆಂದು ಗ್ರಾಮ ಒನ್‌ ಸಿಬ್ಬಂದಿಯೇ ಒಪ್ಪಿಕೊಂಡಿದ್ದರು.

ಅಗತ್ಯ ಕ್ರಮ ಹೇಳಿಕೆಗೆ ಸೀಮಿತ: ತಹಶೀಲ್ದಾರ್‌ ವಿಜಿ ಯಣ್ಣ ಅಗತ್ಯ ಕ್ರಮ ಕೈಗೊ ಳ್ಳುವುದಾಗಿ ಮಾಧ್ಯಮಕ್ಕೆ ಹೇಳಿಕೆಯನ್ನು ಕೊಟ್ಟಿದ್ದರು ಉದಯವಾಣಿ ಪತ್ರಿಕೆ ಯಲ್ಲಿ  ಈ ವರದಿ ಕೂಡ ಪ್ರಕಟವಾಗಿತ್ತು. ಆದರೆ ಸಾರ್ವಜನಿಕರಿಂದ ಗೃಹಲಕ್ಷ್ಮೀ ಯೋಜ ನೆಗೆ ಹಣ ವಸೂಲಿ ಮಾಡಿದ ಗ್ರಾಮ ಒನ್‌ ಕೇಂದ್ರದ ಸಿಬ್ಬಂದಿ ಮೇಲೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಅವರ ಸ್ವಕ್ಷೇತ್ರ ಹಾಗೂ ರಾಜ್ಯದ ಇನ್ನಿತರೆ ಕಡೆಗಳಲ್ಲಿ  ಗೃಹಲಕ್ಷ್ಮೀ ಯೋಜನೆ ನೋಂದ ಣಿಗೆ ಅರ್ಜಿ ಸಲ್ಲಿಸಲು ಹಣ ವಸೂಲಿ ಮಾಡುತ್ತಿದ್ದ ಕೆಲವು ಗ್ರಾಮ ಒನ್‌ ಕೇಂದ್ರಗಳ ನೋಂದಣಿ ಐಡಿ ಯನ್ನು ಹಿಂಪಡೆದು ಪ್ರಕರಣವನ್ನು ದಾಖಲು ಮಾಡಿದ್ದಾರೆ. ಆದರೆ ಈ ಆದೇಶ ರಾಮನಗರ ಜಿಲ್ಲೆಗೆ ಅನ್ವಯಿಸಿದಂತೆ ಕಾಣುತ್ತಿಲ್ಲ.

Advertisement

ಹೆಸರಿಗೆ ಮಾತ್ರ ನೋಂದಣಿ ಉಚಿತ: ಗೃಹಲಕ್ಷ್ಮೀ ಯೋಜನೆ ನೋಂದಣಿ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಹಣ ಕೊಡಬೇಕಾಗಿಲ್ಲ ಒಂದು ವೇಳೆ ಹಣ ವಸೂಲಿ ಮಾಡಿದರೆ ಅಂತಹ ಗ್ರಾಮ ಒನ್‌ ಕೆಂದ್ರಗಳ ನೋಂದಣಿ ಐಡಿಯನ್ನು ಹಿಂಪಡೆದು ಅವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲು ಮಾಡುವುದಾಗಿ ಸಚಿ ವರು ಹೇಳುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ  ಸರ್ಕಾರ ಮತ್ತು ಸಚಿವರ ಆದೇಶಗಳಿಗೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲವೋ ಅಥವಾ ಸರ್ಕಾರವೇ ಹಣ ವಸೂಲಿ ಮಾಡುವಂತೆ ಗ್ರಾಮ ಒನ್‌ ಸಿಬ್ಬಂದಿಗೆ ಸೂಚನೆ ಕೊಟ್ಟು ಹಣ ವಸೂಲಿ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆಂದು ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟಿರುವುದು ಜನರ ಕಣೊ°àರೆಸುವ ತಂತ್ರವೇ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾ ಗುತ್ತಿವೆ. ಸಾರ್ವಜನಿಕರಿಂದ ಹಣ ವಸೂಲಿ ಮಾಡಿದ ಗ್ರಾಮನ್‌ ಸಿಬ್ಬಂದಿಗಳ ಮೇಲೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಸರ್ಕಾರ ಗೃಹಲಕ್ಷ್ಮೀ ಯೋಜನೆ ಅರ್ಜಿ ನೋಂದಣಿಗೆ ಹಣ ವಸೂಲಿ ಮಾಡುವಂತೆ ಸರ್ಕಾರವೇ ಸೂಚನೆ ಕೊಟ್ಟಿದೆ ಎಂದು ಸಾರ್ವಜನಿಕರಿಗೆ ಮಾಹಿತಿ ಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಸಿಬ್ಬಂದಿಯೇ ತಪ್ಪೊಪ್ಪಿಕೊಂಡಿದ್ದರು ಯಾವುದೇ ಕ್ರಮ ಇಲ್ಲ :

ದೂರವಾಣಿ  ಮೂಲಕ ಸಂಪರ್ಕಿಸಿದಾಗ  ಸಾರ್ವಜನಿಕರಿಂದ ಹಣ ವಸೂಲಿ ಮಾಡುವುದನ್ನು ಗ್ರಾಮಒನ್‌ ಸಿಬ್ಬಂದಿಯೇ  ತಪ್ಪೊಪ್ಪಿಕೊಂಡಿದ್ದರು ಸಹ ಕ್ರಮ ಕೈಗೊಳ್ಳಬೇಕಾದ  ತಹಶೀಲ್ದಾರ್‌ ಹಣ ವಸೂಲಿ ಮಾಡಿದ ಗ್ರಾಮ ಒನ್‌ ಸಿಬ್ಬಂದಿ ಮೇಲೆ  ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ನೋಡಿದರೆ  ಗೃಹಲಕ್ಷ್ಮೀ ಯೋಜನೆ ನೋಂದಣಿಗೆ  ಹಣ ವಸೂಲಿ ಮಾಡಲು ಅಧಿಕಾರಿಗಳೇ ಬೆಂಬಲ ಕೊಡುತ್ತಿದ್ದಾರೆಯೇ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

ಉಚಿತ ನೋಂದಣಿಗೆ ಹಣ ವಸೂಲಿ ಮಾಡುತ್ತಿದ್ದ ಗ್ರಾಮ ಒನ್‌ ಕೆಂದ್ರದ ಸಿಬ್ಬಂದಿ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ನೋಡಿದರೆ ಅರ್ಜಿ ನೋಂದಣಿಗೆ ಸಾರ್ವಜನಿಕರಿಂದ ಹಣ ವಸೂಲಿ ಮಾಡುವಂತೆ ಸರ್ಕಾರ ಮತ್ತು ಅಧಿಕಾರಿಗಳೆ ಸೂಚನೆ ಕೊಟ್ಟು, ಹಣ ವಸೂಲಿ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂಬ ಸರ್ಕಾರ ಮತ್ತು ಸಚಿವರು ಹೇಳಿಕೆ ಕೊಟ್ಟಿರುವುದು ಸಾರ್ವಜನಿಕರ ಕಣ್ಣೋರೆಸುವ ತಂತ್ರ. -ಟಿ.ವಿ.ಕುಮಾರ್‌, ಮರಳವಾಡಿ ನಿವಾಸಿ

ಉಚಿತ ನೋಂದಣಿಗೆ ಸಾರ್ವಜನಿಕರಿಂದ ಹಣ ವಸೂಲಿ ಮಾಡದಂತೆ ಸಚಿವರು  ಆದೇಶ ಮಾಡಿದ್ದರೂ ಕೂಡ ದೊಡ್ಡ ಮರಳವಾಡಿ ಗ್ರಾಮ ಒನ್‌ ಕೇಂದ್ರ ದಲ್ಲಿ ಹಣ ವಸೂಲಿ ಮಾಡಿದರೂ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಈ ಭ್ರಷ್ಟಾಚಾರದಲ್ಲಿ  ಹಾರೋಹಳ್ಳಿ ತಹಶೀ ಲ್ದಾರ್‌ ಕೈವಾಡವಿದೆ ಇವರ ಮೇಲೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮಾಡಬೇಕು.-ಮಲ್ಲಿಕಾರ್ಜುನ್‌, ಅಧ್ಯಕ್ಷರು ಧಮ್ಮ ದೀವಿಗೆ ಚಾರಿಟಬಲ್‌ ಟ್ರಸ್ಟ್‌ 

-ಉಮೇಶ್‌ ಬಿ.ಟಿ.

Advertisement

Udayavani is now on Telegram. Click here to join our channel and stay updated with the latest news.

Next