Advertisement
ಮತದಾನದ ದಿನದವರೆಗೆ ದ.ಕ ಜಿಲ್ಲೆಯಲ್ಲಿ ಹಣ ವಿತರಣೆ ಬಗ್ಗೆ 3 ದೂರುಗಳು ದಾಖಲಾಗಿದ್ದರೆ ಮತದಾನದ ಹಿಂದಿನ ದಿನ ರಾತ್ರಿ 5 ದೂರುಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ 61,500 ರೂ. ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಮನೆ ಮನೆಗೆ ತೆರಳಿ ಹಣ ಹಂಚಲಾಗಿದೆ ಎಂಬ ಆರೋಪವೂ ಕೆಲವು ಕ್ಷೇತ್ರಗಳಲ್ಲಿದ್ದು, ಪ್ರಮುಖ ಪಕ್ಷಗಳು ಪರಸ್ಪರ ಆರೋಪಿಸಿವೆ. ಅನೇಕ ಕಡೆಗಳಲ್ಲಿ ಹಣ ಹಂಚಿಕೆ ವಿಷಯವೇ ಕಾರ್ಯಕರ್ತರ ನಡುವಿನ ಸಂಘರ್ಷಕ್ಕೆ ಮುಖ್ಯ ಕಾರಣವಾಗಿತ್ತು. ಪೊಲೀಸರಿಗೆ ದೊರೆತಿರುವ ಮಾಹಿತಿಯ ಪೈಕಿ ಕೆಲವು ಸುಳ್ಳು ಮಾಹಿತಿ ಆಗಿತ್ತು. ಇನ್ನು ಕೆಲವೆಡೆ ಸಾಕ್ಷ್ಯಲಭಿಸಿಲ್ಲ.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಣ, ಉಡುಗೊರೆ ಯಂತಹ ವಸ್ತುಗಳ ಅಕ್ರಮ ಸಾಗಣೆ ತಡೆಗೆ ವ್ಯಾಪಕ ತಪಾಸಣೆ ನಡೆಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾ.29 ರಿಂದ ಮೇ 10ರವರೆಗೆ ವಾಹನಗಳ ತಪಾಸಣೆ ವೇಳೆ ಸೂಕ್ತ ದಾಖಲೆಗಳು ಇಲ್ಲದ ಒಟ್ಟು 1.73 ಕೋ.ರೂ. ಪತ್ತೆ ಮಾಡಲಾಗಿತ್ತು. ಅನಂತರ ವಾರಸುದಾರರು ವಿಚಾರಣೆ ವೇಳೆ ಸೂಕ್ತ ದಾಖಲೆಗಳನ್ನು ತಂದಿರುವ ಹಿನ್ನೆಲೆಯಲ್ಲಿ ವಾಪಸ್ ನೀಡಲಾಗಿದೆ.
Related Articles
ಅಬಕಾರಿ ಇಲಾಖೆ ಮಾ.29ರಿಂದ ಮೇ 10ರವರೆಗೆ ಒಟ್ಟು 1,798 ದಾಳಿ ಗಳನ್ನು ನಡೆಸಿ 85 ಘೋರ ಮೊಕ ದ್ದಮೆಗಳನ್ನು ದಾಖಲಿಸಿದೆ. ಈ ವೇಳೆ 2,023.640 ಲೀ. ಐಎಂಎಲ್, 217.950 ಲೀ. ಗೋವಾ ಮದ್ಯ, 2,220 ಲೀ. ಶೇಂದಿ, 81.720 ಲೀ. ಕಳ್ಳಭಟ್ಟಿ, 1,225 ಲೀ ಗೇರುಹಣ್ಣಿನ ಕೊಳೆ, 175.750 ಲೀ. ಬಿಯರ್, 7.249 ಕೆಜಿ ನಿಷೇಧಿತ ಮಾದಕ ವಸ್ತು, 42 ವಾಹನಗಳನ್ನು ಸ್ವಾಧೀನಪಡಿಸಿ ಕೊಂಡಿದೆ.
ಓರ್ವ ಅಭ್ಯರ್ಥಿಗೆ ಗರಿಷ್ಠ ವೆಚ್ಚ 40 ಲ.ರೂ. ಎಂಬುದಾಗಿ ಚುನಾವಣ ಆಯೋಗ ನಿಗದಿಗೊಳಿಸಿತ್ತು.
Advertisement
ವೆಚ್ಚದ ಪರಿಶೀಲನೆ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಬಗ್ಗೆ ಸಂಗ್ರಹಿಸಿರುವ ಮಾಹಿತಿಯನ್ನು ಪರಿಶೀಲಿಸಿ ಇನ್ನಷ್ಟೇ ಕ್ರೋಢೀಕರಿಸಬೇಕಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 1.73 ಕೋ.ರೂ ವಶಪಡಿಸಿಕೊಳ್ಳಲಾಗಿತ್ತು. ಬಳಿಕ ವಾರಸುದಾರರು ಸೂಕ್ತ ದಾಖಲೆಗಳನ್ನು ನೀಡಿ ವಾಒಸು ಪಡೆದಿದ್ದಾರೆ.
-ಡಾ| ಕುಮಾರ್, ಅಧ್ಯಕ್ಷರು, ಸ್ವಾಧೀನಪಡಿಸಿಕೊಂಡ ನಗದು ಹಣ ಇತ್ಯರ್ಥ ಸಮಿತಿ