Advertisement

ರಾಜಿ ಇಲ್ಲದೆ ವಿತ್ತೀಯ ಕೊರತೆ ನಿರ್ವಹಣೆ

12:56 AM Jul 11, 2019 | Team Udayavani |

ಹೊಸದಿಲ್ಲಿ: ವೆಚ್ಚದಲ್ಲಿ ರಾಜಿ ಮಾಡಿಕೊಳ್ಳದೆ ವಿತ್ತೀಯ ಕೊರತೆಯನ್ನು ನಿರ್ವಹಿಸಲು ಸರಕಾರ ಬದ್ಧವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ. ಬಜೆಟ್‌ ಕುರಿತ ಚರ್ಚೆಯ ವೇಳೆ ಮಾತನಾಡಿದ ಅವರು, ಮೂಲಸೌಕರ್ಯದಲ್ಲಿ ಹೂಡಿಕೆ ಹೆಚ್ಚಳ, ವಿದೇಶಿ ನೇರ ಹೂಡಿಕೆ ನೀತಿಯಲ್ಲಿ ಬದಲಾವಣೆ ಮತ್ತು ಕಾರ್ಪೊರೇಟ್‌ ತೆರಿಗೆ ಇಳಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಿರೀಕ್ಷೆಯಂತೆ 2024-25ರ ವೇಳೆಗೆ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯನ್ನಾಗಿ ಭಾರತವನ್ನು ರೂಪಿಸಲಿದ್ದೇವೆ ಎಂದು ಹೇಳಿದ್ದಾರೆ.

Advertisement

ಆರ್ಥಿಕ ಪ್ರಗತಿ ಮತ್ತು ರಾಷ್ಟ್ರೀಯ ಭದ್ರತೆಯು ಸರಕಾರದ ಆದ್ಯತೆಯಾಗಿರಲಿದೆ. ಸಾಮಾನ್ಯ ಜನರಿಗೆ ಅನ್ವಯವಾಗುವ ಎಲ್ಲ ಯೋಜನೆಗಳಿಗೂ ಹೆಚ್ಚಿನ ಹಣಕಾಸು ಮೀಸಲಿಟ್ಟಿದ್ದೇವೆ. ವಿತ್ತೀಯ ಕೊರತೆಯನ್ನು ಶೇ. 3.4ರ ಬದಲಿಗೆ ಶೇ. 3.3ಕ್ಕೆ ಇಳಿಸುವ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖೀಸಿದ ವಿಚಾರವನ್ನೂ ಇದೇ ವೇಳೆ ಸಚಿವೆ ಸ್ಪಷ್ಟಪಡಿಸಿದ್ದಾರೆ.

ಏಲಕ್ಕಿ ಉತ್ತೇಜನಕ್ಕೆ ಕ್ಲಸ್ಟರ್‌: ಕೇರಳದ ಇಡುಕ್ಕಿಯಲ್ಲಿ ಏಲಕ್ಕಿ ಉದ್ದಿಮೆಗೆ ಉತ್ತೇಜನ ನೀಡುವ ಸಲುವಾಗಿ ಇಲ್ಲಿ ಕ್ಲಸ್ಟರ್‌ ಸ್ಥಾಪಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಸಚಿವ ಗೋಯಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next