Advertisement
ಮಂಗಳೂರು ಸಹಿತ ಜಿಲ್ಲೆಯಾದ್ಯಂತ ಸೋಮವಾರ ನಸುಕಿನ ವೇಳೆಯಿಂದಲೇ ಜಿಟಿಜಿಟಿ ಮಳೆ ಸುರಿದಿದೆ. ಒಂದೆಡೆ ಮೋಡ ಕವಿದ ವಾತಾವರಣ; ಇನ್ನೊಂದೆಡೆ ತುಂತುರು ಮಳೆಯೊಂದಿಗೆ ಮಳೆಗಾಲದ ವಾತಾವರಣ ಕಂಡುಬಂದಿತ್ತು.
Related Articles
ಬಂಟ್ವಾಳ: ಜೂನ್ ತಿಂಗಳ ಆರಂಭದಲ್ಲೇ ಮಳೆಗಾಲದ ಲಕ್ಷಣಗಳು ಕಂಡುಬಂದಿದ್ದು, ರವಿವಾರ ರಾತ್ರಿಯಿಂದಲೇ ಮಳೆ ಆರಂಭಗೊಂಡಿತ್ತು. ಸೋಮವಾರ ದಿನವಿಡೀ ಬಿಟ್ಟುಬಿಟ್ಟು ಮಳೆಯಾಗಿದೆ.
Advertisement
ಲಾಕ್‌ಡೌನ್ ಸಡಿಲಿಕೆ ಬಳಿಕ ಸೋಮವಾರ ಹೆಚ್ಚಿನ ಜನಸಂಚಾರ ಕಂಡುಬಂದಿದ್ದು, ಮಳೆಯ ಕಾರಣದಿಂದ ಜನ ಕೊಡೆ ಹಿಡಿದು ಸಾಗುವ ದೃಶ್ಯ ಕಂಡುಬಂತು.
ಬೆಳ್ತಂಗಡಿ: ಉತ್ತಮ ಮಳೆಬೆಳ್ತಂಗಡಿ: ತಾಲೂಕಿನಾದ್ಯಂತ ಸೋಮವಾರವು ಉತ್ತಮ ಮಳೆ ಸುರಿದಿದೆ.ಮುಂಜಾನೆಯಿಂದಲೆ ಮೋಡಕವಿದ ವಾತಾವರದಿಂದ ಕೂಡಿದ್ದು, ಬೆಳ್ತಂಗಡಿ, ಧರ್ಮಸ್ಥಳ, ಕೊಯ್ಯೂರು, ದಿಡುಪೆ, ಮಿತ್ತಬಾಗಿಲು, ಕಡಿರುದ್ಯಾವರ, ಕಲ್ಮಂಜ, ಮುಂಡಾಜೆ, ಬರಾಯ ಕನ್ಯಾಡಿ, ನೆರಿಯಾ, ಚಾರ್ಮಾಡಿ ಮುಂತಾದೆಡೆ ಉತ್ತಮ ಮಳೆಯಾಗಿದೆ. ಯಾವುದೇ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ. ರವಿವಾರ ಸಂಜೆ ಸುರಿದ ಮಳೆಗೆ ಮಲವಂತಿಗೆ ಗ್ರಾಮದ ಕರಿಯಾಲು ಮಹೇಶ್ ಗೌಡ ಅವರ ತೋಟಕ್ಕೆ ನದಿ ನೀರು ನುಗ್ಗಿ 60ಕ್ಕೂ ಅಧಿಕ ಅಡಿಕೆ ಸಸಿಗಳಿಗೆ ಹಾನಿಯಾಗಿದೆ. ಸುಳ್ಯ: ಸಾಧಾರಣ ಮಳೆ
ಸುಳ್ಯ: ತಾಲೂಕಿನೆಲ್ಲೆಡೆ ಬೆಳಗ್ಗೆ ಹಾಗೂ ಸಂಜೆ ವೇಳೆ ಸಾಧಾರಣ ಮಳೆಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣ ಕಂಡು ಬಂತು.