Advertisement

ಸೋಮವಾರದ ರಾಶಿ ಫಲ : ಈ ರಾಶಿಯವರು ಅನ್ಯರಿಂದ ಸಹಾಯ ನಿರೀಕ್ಷಿಸದಿರಿ…

07:17 AM Oct 03, 2022 | Team Udayavani |

ಮೇಷ: ಸುದೃಢ ಆರೋಗ್ಯ. ನಿರೀಕ್ಷಿತ ಸ್ಥಾನಮಾನ ಗೌರವಾದಿಗಳ ಪ್ರಾಪ್ತಿ. ಭೂಮಿ, ಆಸ್ತಿ ವಿಚಾರಗಳಲ್ಲಿ ಪ್ರಗತಿ. ದೂರದ ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ .ದಾಂಪತ್ಯ ಸುಖ ವೃದ್ಧಿ.

Advertisement

ವೃಷಭ: ಉತ್ತಮ ಜನಮನ್ನಣೆ. ನಿರೀಕ್ಷೆಗೂ ಮೀರಿದ ಧನಾರ್ಜನೆ. ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಯೋಜನೆ ಬದ್ಧವಾದ ಕೆಲಸ ಕಾರ್ಯಗಳು ನಡೆದು ಸುಖ ಸಂತೋಷ ವೃದ್ಧಿ. ಮಕ್ಕಳಿಂದ ಸುವಾರ್ತೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ.

ಮಿಥುನ: ಜವಾಬ್ದಾರಿಯುತ ನಡವಳಿಕೆಯಿಂದ ಕೆಲಸ ಕಾರ್ಯಗಳಲ್ಲಿ ಜನಪ್ರಿಯತೆ ಗೌರವ ಆದರ ಪ್ರಾಪ್ತಿ ಕೀರ್ತಿ ಸಂಪಾದನೆ. ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿದಾಯಕ ದಿನ. ಗೃಹದಲ್ಲಿ ಸಂಭ್ರಮದ ಪರಿಸ್ಥಿತಿ. ಗುರುಹಿರಿಯರಿಂದ ಉತ್ತಮ ಪ್ರೋತ್ಸಾಹ ಸಹಕಾರ.

ಕರ್ಕ: ಮಕ್ಕಳ ಬಗ್ಗೆ ಹೆಚ್ಚಿದ ನೆಮ್ಮದಿ, ಆಲೋಚನೆ ಹಾಗೂ ಸಂತೋಷ. ಅಧ್ಯಯನದಲ್ಲಿ ಹೆಚ್ಚಿದ ಆಸಕ್ತಿ. ದೇವತಾ ಕಾರ್ಯಗಳಲ್ಲಿ ತಲ್ಲೀನತೆ. ಗೃಹದಲ್ಲಿ ಸಂತೋಷದ ವಾತಾವರಣ. ದಾಂಪತ್ಯ ತೃಪ್ತಿಕರ. ಧಾರ್ಮಿಕ ಕಾರ್ಯಗಳಲ್ಲಿ ಏಕಾಗ್ರತೆಗೆ ಆದ್ಯತೆ.

ಸಿಂಹ: ಆರೋಗ್ಯ ಗಮನಿಸಿ. ವ್ಯವಹಾರದಲ್ಲಿ ಜಾಗೃತೆ ವಹಿಸುವುದರಿಂದ ಸ್ಥಾನಮಾನ ಪ್ರಾಪ್ತಿ. ಪಾರದರ್ಶಕತೆಗೆ ಆದ್ಯತೆ ನೀಡಿ. ಅನಗತ್ಯ ಚರ್ಚೆಗೆ ಆಸ್ಪದ ನೀಡಬೇಡಿ. ಹಣಕಾಸಿನ ವಿಚಾರದಲ್ಲಿ ಜಾಗೃತೆ ವಹಿಸಿ. ಧಾರ್ಮಿಕ ಕಾರ್ಯಗಳಲ್ಲಿ ಪರಿಶ್ರಮ, ಅಡಚಣೆ ತೋರೀತು.

Advertisement

ಕನ್ಯಾ: ಉತ್ತಮ ಜನರ ಒಡನಾಟ. ವ್ಯವಹಾರಗಳಲ್ಲಿ ಪ್ರಗತಿ. ದೂರ ಪ್ರಯಾಣ. ದಂಪತಿಗಳಲ್ಲಿ ಹೆಚ್ಚಿದ ಸಹಕಾರ. ಗೃಹೋಪಕರಣ ವಸ್ತುಗಳ ಖರೀದಿ. ಅನಿರೀಕ್ಷಿತ ಮಿತ್ರರ ಆಗಮನ. ಮನೆಯಲ್ಲಿ ಸಂತಸದ ವಾತಾವರಣ.

ತುಲಾ: ಸುಖ ಸಂತೋಷದಿಂದ ಕೂಡಿದ ದಿನ. ಬಂಧುಮಿತ್ರರ ಸಹಕಾರ ಪ್ರೋತ್ಸಾಹ. ವಾಹನ ಆಸ್ತಿ ವಿಚಾರಗಳಲ್ಲಿ ಮುನ್ನಡೆ. ನಿರಂತರ ಧನಾರ್ಜನೆ. ಉತ್ತಮ ವಾಕ್‌ಚತುರತೆಯಿಂದಲೂ, ಜವಾಬ್ದಾರಿಯಿಂದಲೂ ಕೂಡಿದ ಕಾರ್ಯ ವೈಖರಿ.

ವೃಶ್ಚಿಕ: ದೂರ ಸಂಚಾರ ಸಂಭವ. ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಒತ್ತಡ ಜವಾಬ್ದಾರಿ. ಧನಾರ್ಜನೆಗೆ ಕೊರತೆಯಾಗದು. ಅನ್ಯರಿಂದ ಸಹಾಯ ನಿರೀಕ್ಷಿಸದಿರಿ. ಗೃಹದಲ್ಲಿ ಶಾಂತಿ ಕಾಪಾಡಿ. ಅನಾವಶ್ಯಕ ಚರ್ಚೆಗೆ ಆಸ್ಪದ ನೀಡದಿರಿ.

ಧನು: ಕೆಲಸ ಕಾರ್ಯಗಳಲ್ಲಿ ಗೌರವ ಕೀರ್ತಿ ಸಂಪಾದನೆ. ಪ್ರಗತಿ. ಹೆಚ್ಚಿದ ಸ್ಥಾನ ಧನ ಲಾಭ. ಉತ್ತಮ ವಾಕ್‌ಚತುರತೆ. ಗುರುಹಿರಿಯರ ಸಹಕಾರ ಪ್ರೋತ್ಸಾಹ. ಆರೋಗ್ಯ ವೃದ್ಧಿ. ಮಕ್ಕಳಿಗೆ ಸರ್ವವಿಧದ ಸೌಲಭ್ಯ ಪ್ರಾಪ್ತಿ.

ಮಕರ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಸಮಯ ಸಂದರ್ಭಕ್ಕೆ ಸರಿಯಾಗಿ ನಿಪುಣತೆ ಪ್ರದರ್ಶನ. ಬಂಧುಮಿತ್ರರ ಸಹಕಾರ ಸಂತೋಷ. ದಂಪತಿಗಳಲ್ಲಿ ಅನ್ಯೋನ್ಯತೆಗೆ ಕೊರತೆಯಾಗದಂತೆ ವ್ಯವಹರಿಸಿ. ಮಕ್ಕಳ ಸುಖ ಸಂತೋಷ ವೃದ್ಧಿ.

ಕುಂಭ: ಸಣ್ಣ ಪ್ರಯಾಣ ಸಂಭವ. ಸಹೋದರ ಸಮಾನರಿಂದಲೂ ಸಹೋದ್ಯೋಗಿ ಗಳಿಂದಲೂ ಸಹಕಾರ ಪ್ರಾಪ್ತಿ. ಉದ್ಯೋಗ ವ್ಯವಹಾರ ಗಳಲ್ಲಿ ಪರಿಶ್ರಮದಿಂದ ಯಶಸ್ಸು ಲಭ್ಯ. ಗೃಹೋಪಕರಣ ವಸ್ತುಗಳಿಗಾಗಿ ಧನ ವ್ಯಯ.

ಮೀನ: ಆರೋಗ್ಯ ವೃದ್ಧಿ. ದೀರ್ಘ‌ ಪ್ರಯಾಣ ಸಂಭವ. ನೂತನ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ಸರಿಯಾದ ನಿರ್ಣಯದಿಂದ ತೃಪ್ತಿ. ಪರರಿಂದ ಬರಬೇಕಾದ ಧನ ಪ್ರಾಪ್ತಿ. ಮಕ್ಕಳಿಂದ ಸಂತೋಷ. ಬಂಧುಮಿತ್ರರಲ್ಲಿ ಸಂಯಮದಿಂದ ವ್ಯವಹರಿಸಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next