Advertisement

ಸೋಮವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

07:50 AM Nov 15, 2021 | Team Udayavani |

ಮೇಷ: ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರಗಳಲ್ಲಿ ಅಡಚಣೆಗಳು ನಿವಾರಣೆಯಾಗಿ ನೆಮ್ಮದಿ. ನಿರೀಕ್ಷಿತ ಸಫ‌ಲತೆ. ಉತ್ತಮ ಧನ ಸಂಗ್ರಹ. ಬಂಧುಮಿತ್ರರ ಸಹಾಯ. ಮಕ್ಕಳ ನಿಮಿತ್ತ ಪ್ರಯಾಣ ಖರ್ಚು ಸಂಭವ. ದಾಂಪತ್ಯ ಸುಖ ತೃಪ್ತಿದಾಯಕ.

Advertisement

ವೃಷಭ: ದೀರ್ಘ‌ ಪ್ರಯಾಣ. ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ. ಧನ ವ್ಯಯ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಸಾಂಸಾರಿಕ ಸುಖ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಅವಿವಾಹಿತರಿಗೆ ವಿವಾಹ ಭಾಗ್ಯ. ದೂರದ ವ್ಯವಹಾರಗಳಲ್ಲಿ ಪ್ರಗತಿ.

ಮಿಥುನ: ಪಾಲುದಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಸಹೋದ್ಯೋಗಿಗಳಿಂದಲೂ ಸಹೋದರ ಸಮಾನರಿಂದಲೂ ಉತ್ತಮ ಪ್ರೋತ್ಸಾಹ ಸಹಕಾರ ಲಭಿಸೀತು. ದೂರದ ವ್ಯವಹಾರದಿಂದ ಉತ್ತಮ ಧನ ಸಂಪತ್ತು ವೃದ್ಧಿ. ಆರೋಗ್ಯ ಸಾಮಾನ್ಯ.

ಕರ್ಕ: ಆರೋಗ್ಯ ಗಮನಿಸಿ. ಹಠಮಾರಿತನ ಸಲ್ಲದು. ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ. ಆಸ್ತಿ ವಿಚಾರಗಳಲ್ಲಿ ನಿರ್ಣಯ ಸಾಧ್ಯ. ದಾಂಪತ್ಯದಲ್ಲಿ ಪರಸ್ಪರ ಸಹಕಾರ.

ಸಿಂಹ: ಆರೋಗ್ಯ ಗಮನಿಸಿ. ಹೆಚ್ಚಿದ ಜವಾಬ್ದಾರಿಯಿಂದ ದೇಹಾಯಾಸ ತೋರೀತು. ಜನಪದರೊಂದಿಗೆ ತಾಳ್ಮೆ ಸಹನೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಅನ್ಯಥಾ ಚರ್ಚೆಗೆ ಆಸ್ಪದ ಬೇಡ. ಧನಾರ್ಜನೆಗೆ ಕೊರತೆ ಕಾಣದು. ಸಾಂಸಾರಿಕ ಸುಖ ಮಧ್ಯಮ.

Advertisement

ಕನ್ಯಾ: ದೀರ್ಘ‌ ಪ್ರಯಾಣ ಸಂಭವ. ದೇಹಾಯಾಸ ತೋರೀತು. ದೂರದ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನ ಸಂಪತ್ತು ವೃದ್ಧಿ. ಮಕ್ಕಳಿಂದಲೂ, ಗುರುಹಿರಿಯರಿಂದಲೂ ಸುಖ ಸಂತೋಷ ವೃದ್ಧಿ.ಆಸ್ತಿ ವಿಚಾರದಲ್ಲಿ ಹೆಚ್ಚಿದ ಬದಲಾವಣೆ.

ತುಲಾ: ಧಾರ್ಮಿಕ ಕೆಲಸ ಕಾರ್ಯಗಳಿಗೆ ಪ್ರಯಾಣ. ಆರೋಗ್ಯ ವೃದ್ಧಿ. ಗೌರವದ ಧನ ಸಂಪಾದನೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಆಸ್ತಿ ವಿಚಾರದಲ್ಲಿ ಪ್ರಗತಿ. ಸಾಂಸಾರಿಕ ಸುಖ ತೃಪ್ತಿ ವಿದ್ಯಾರ್ಥಿಗಳಿಗೆ ಹೆಚ್ಚಿದ ಸಂಭ್ರಮ. ಗುರುಹಿರಿಯರಿಂದ ಯೋಗ್ಯ ಮಾರ್ಗದರ್ಶನ.

ವೃಶ್ಚಿಕ: ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯವೈಖರಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ಆರ್ಥಿಕ ಧನಾರ್ಜನೆ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ದಾಂಪತ್ಯ ಸುಖ ಮಧ್ಯಮ. ಗಣ್ಯರ ಭೇಟಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ.

ಧನು: ಆರೋಗ್ಯದಲ್ಲಿ ಸಮಾಧಾನ. ಚಿಕ್ಕ ಪ್ರಯಾಣ ಸಂಭವ. ಮಾನಸಿಕವಾಗಿ ಸಂಭ್ರಮಿಸುವ ಕಾಲ. ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನ ಸುಖ. ಉದ್ಯೋಗ ವ್ಯವಹಾರಸ್ಥರಿಗೆ ಅಧಿಕ ಜವಾಬ್ದಾರಿ, ಉತ್ತಮ ಬದಲಾವಣೆ.

ಮಕರ: ಪರವೂರ ಮಿತ್ರರ ಭೇಟಿ. ದೂರದ ಆಸ್ತಿ ವಿಚಾರದಲ್ಲಿ ಅಭಿವೃದ್ಧಿಯ ನಡೆ. ಆರೋಗ್ಯ ವೃದ್ಧಿ. ಪಾಲುದಾರಿಕಾ ಕ್ಷೇತ್ರದವರಿಗೆ ಪರಸ್ಪರ ಸಹಕಾರದಿಂದ ಉನ್ನತಿ ಸಾಂಸಾರಿಕ ಸುಖ ಮಧ್ಯಮ. ಗುರುಹಿರಿಯರ ಆರೋಗ್ಯ ಗಮನಿಸಿ.

ಕುಂಭ: ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸ್ಥಾನ ಗೌರವಾದಿ ಸುಖ. ಅತ್ಯುತ್ತಮ ಧನಾರ್ಜನೆ. ಉತ್ತಮ ವಾಕ್‌ ಚತುರತೆ. ಮನೋರಂಜನೆಯಿಂದ ಕೂಡಿದ ಸಮಯ. ಮನೆಯಲ್ಲಿ ಸಂಭ್ರಮದ ವಾತಾವರಣ. ವ್ಯವಹಾರದಲ್ಲಿ ಶುಭ ಫ‌ಲ.

ಮೀನ: ಧಾರ್ಮಿಕ ಕಾರ್ಯಗಳ ನೇತೃತ್ವ. ದಾನ ಧರ್ಮಾದಿಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಮನಃ ಸಂತೋಷ. ಜನಮನ್ನಣೆ. ದೈರ್ಯ ಉತ್ಸಾಹದಿಂದ ಕೂಡಿದ ಕಾರ್ಯವೈಖರಿ. ಆರೋಗ್ಯದ ಬಗ್ಗೆ ಉದಾಸೀನತೆ ಬೇಡ. ಸಾಂಸಾರಿಕ ಸುಖ ತೃಪ್ತಿದಾಯಕ. ಗರುಹಿರಿಯರ ಆರೋಗ್ಯ ಸುದೃಢ.

Advertisement

Udayavani is now on Telegram. Click here to join our channel and stay updated with the latest news.

Next