Advertisement

ಮಠಗಳು ಧಾರ್ಮಿಕ ಸಂಸ್ಕಾರ ಕೇಂದ್ರಗಳು

03:36 PM Apr 12, 2017 | |

ಜೇವರ್ಗಿ: ದೇಶದಲ್ಲಿನ ಮಠ ಮಂದಿರಗಳು ಸಮಾಜದ ಸರ್ವ ವರ್ಗದ ಜನರಿಗೆ ಧಾರ್ಮಿಕ ಸಂಸ್ಕಾರ ನೀಡುವ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾಂದರು ನುಡಿದರು. 

Advertisement

ತಾಲೂಕಿನ ಯಡ್ರಾಮಿ ಹತ್ತಿರದ ರೇಣುಕಗಿರಿಯಲ್ಲಿ ಶಾಖಾಮಠದ ಮೂರನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿರುವ ಸಿದ್ಧಾಂತ ಶಿಖಾಮಣಿ ಪ್ರವಚನ, ಧರ್ಮಸಭೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸನಾತನ ವೀರಶೈವ ಧರ್ಮದಲ್ಲಿ ಅನನ್ಯ ಮತ್ತು ಅಸಾಧಾರಣ ಮಹತ್ವವಿದೆ. 84 ಲಕ್ಷ ಜೀವರಾಶಿಗಳಲ್ಲಿ ಮನುಷ್ಯನಿಗೆ ಮಾತ್ರ ಸಂಸ್ಕಾರ ನೀಡಲು ಸಾಧ್ಯವಾಗುತ್ತದೆ. ಸಂಸ್ಕಾರದ ಬಲದಿಂದ ಮನುಷ್ಯ ಮಹಾದೇವನಾಗುತ್ತಾನೆ. ಗುರುವೇ ಇರದಿದ್ದರೆ ಮನುಷ್ಯ ಪಶುವಿನಂತೆ ಬಾಳಬೇಕಾಗಿತ್ತು.

ಮನುಷ್ಯನನ್ನು ಮಾನವನನ್ನಾಗಿ ರೂಪಿಸುವ ಜವಾಬ್ದಾರಿ ಮಠ, ಗುರುಗಳ ಮೇಲಿದೆ ಎಂದರು. ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ| ಅಜಯಸಿಂಗ್‌, ಮಲ್ಲಾಬಾದ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು.

ರೇಣುಕಗಿರಿಗೆ ಬರುವ ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸಲು ಯಾತ್ರಿಕ ನಿವಾಸ ನಿರ್ಮಾಣಕ್ಕೆ 25 ಲಕ್ಷ ರೂ.ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಜೆಡಿಎಸ್‌ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಮಾತನಾಡಿ, ಮಲ್ಲಾಬಾದ ಏತನೀರಾವರಿ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.

Advertisement

ಆಲೂರ-ಕಾಸರಭೋಸಗಾದ ಕೆಂಚವೃಷಬೇಂದ್ರ ಶಿವಾಚಾರ್ಯರು, ಬಾಲತಪಸ್ವಿ ಸಾಂಬ ಶಿವಯೋಗಿ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ನಿಡಗುಂದದ ಕರುಣೇಶ್ವರ ಸ್ವಾಮೀಜಿ, ಹಿಪ್ಪರಗಾ ಎಸ್‌.ಎನ್‌ ಸಿದ್ಧಲಿಂಗ ಶಿವಾಚಾರ್ಯರು, ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ,

ಮಲ್ಲನಗೌಡ ಪಾಟೀಲ ರದ್ದೇವಾಡಗಿ, ರಾಜಶೇಖರ ಸೀರಿ, ಗೊಲ್ಲಾಳಪ್ಪಗೌಡ ಮಾಗಣಗೇರಾ, ನಿಂಗನಗೌಡ ಪೊಲೀಸ್‌ ಪಾಟೀಲ, ವಿಶ್ವನಾಥ ಸಾಹು ಆಲೂರ, ತಾಪಂ ಸದಸ್ಯ ಪ್ರಶಾಂತ ರಾಠೊಡ, ದೇವಿಂದ್ರಪ್ಪ ಸರಕಾರ, ನಿಂಗನಗೌಡ ಸೋಮಪ್ಪಗೋಳ, ಚಂದ್ರಶೇಖರ ಪುರಾಣಿಕ, ಕೆಂಚಪ್ಪಗೌಡ ಬಿರಾದಾರ, ಹಯ್ನಾಳಪ್ಪ ಗಂಗಾಕರ,

ಮಲ್ಲಿಕಾರ್ಜುನ ಹಲಕರ್ಟಿ, ಶರಣಬಸಪ್ಪ ಪಟ್ಟಣಶೆಟ್ಟಿ ಆಗಮಿಸಿದ್ದರು. ಗುರುಕುಲ ಸಾಧಕರಿಂದ ವೇದಘೋಷ ನಡೆಯಿತು, ಚಂದ್ರಶೇಖರ ಪುರಾಣಿಕ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿವುಕುಮಾರ ಪಾಟೀಲ ಸ್ವಾಗತಿಸಿದರು, ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು, ಸಿದ್ಧು ಪಾಟೀಲ ವಂದಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next