Advertisement

ಅಮ್ಮನ ಗೊಣಗಾಟ!

12:15 PM Oct 17, 2019 | mahesh |

ಅಮ್ಮ ಎಂದರೆ ಮೊದಲಿಗೆ ನೆನಪಾಗುವುದು ಪ್ರೀತಿ, ಮಮತೆ, ಅಕ್ಕರೆ. ಅಮ್ಮನ ಬಗ್ಗೆ ಎಷ್ಟೇ ಹೇಳಿದರೂ ಸಾಲದು ಎಂದು ಹೇಳಿದರೆ ಯಾರು ಇಲ್ಲವೆನ್ನುತ್ತಾರೆ !

Advertisement

ಶಾಲಾ-ಕಾಲೇಜಿಗೆ ಹೋಗುವ ಮಕ್ಕಳನ್ನು ಬೆಳಗ್ಗೆ ಹಾಸಿಗೆಯಿಂದ ಎಬ್ಬಿಸುವಾಗಲೇ ಅಮ್ಮಂದಿರ ಗೊಣಗಾಟ ಆರಂಭವಾಗಿರುತ್ತದೆ. ಅದರಲ್ಲೂ ಕಾಲೇಜಿಗೆ ಹೋಗುವ ಮಕ್ಕಳಿದ್ದರೆ ಅವಳಿಗೆ ಜವಾಬ್ದಾರಿ ಹೆಚ್ಚು. ಅವರಿಗೆ ತಿಳಿಹೇಳುತ್ತ, ತಪ್ಪು ಮಾಡಿದರೆ ಗದರುತ್ತ, ಒಳ್ಳೆಯ ಕೆಲಸಗಳನ್ನು ಮಾಡಿದರೆ ಅರ್ಥಮಾಡಿಕೊಂಡು ಒಂದಿಷ್ಟೂ ಬೇಸರವಿಲ್ಲದೆ ಪ್ರತಿನಿತ್ಯ ತನ್ನದೇ ಆದ ರೀತಿಯಲ್ಲಿ ಹೊಗಳುವುದು ಪ್ರತಿಯೊಬ್ಬ ತಾಯಿಯ ಕೌಶಲ. ಮೊದಲ ಭಾರಿಗೆ ಕಾಲೇಜಿಗೆ ಹೋಗುತ್ತಿರುವುದು, “ಕಾಲೇಜಿಗೆ ತಲುಪುವ ಮುನ್ನ ನಡುವೆ ಹಾದಿಯಲ್ಲಿ ಜೋಪಾನ, ಬಸ್ಸಿನಲ್ಲಿ ಹೋಗುವಾಗ, ಮುಂಭಾಗದಲ್ಲಿರುವ ವಾಹನವನ್ನು ಹತ್ತಿಳಿಯುವ ಸಂದರ್ಭದಲ್ಲಿ ಧಾವಂತ ಬೇಡ, ಕಾಲೇಜಿನ ಕ್ಯಾಂಪಸ್‌ ಒಳಗಾದರೂ ಜಾಗ್ರತೆಯಿಂದಿರುವುದು ಒಳ್ಳೆಯದು, ಕಾಲೇಜಿಗೆ ಹೋಗುತ್ತಿರುವುದು ವಿದ್ಯಾಭ್ಯಾಸಕ್ಕೆ ಎನ್ನುವುದನ್ನು ಮರೆಯಬೇಡ, ಪ್ರೇಮ-ಪ್ರಣಯ ವಿಷಯದೆಡೆ ಗಮನ ಬೇಡ, ಅನವಶ್ಯಕ ಮಾತು-ನಗು ಬೇಡ, ಪಾಠ ಚೆನ್ನಾಗಿ ಕೇಳು, ಒಳ್ಳೆಯ ಸ್ನೇಹಿತರನ್ನು ಪರಿಚಯ ಮಾಡಿಕೊ, ಕ್ಯಾಂಟೀನ್‌ನ‌ಲ್ಲಿ ಹೊಟ್ಟೆಗೆ ತಂಪಾಗುವ ತಿಂಡಿ ತಿನ್ನು…’ ಹೀಗೆ ಎಲ್ಲ ವಿಷಯಕ್ಕೂ ಕಾಳಜಿ-ಮುತುವರ್ಜಿ ವಹಿಸುವುದು ಅಮ್ಮನ ಪ್ರತಿನಿತ್ಯದ ಕೆಲಸ!

ನಮ್ರತಾ ಟಿ. ಜೆ.
ಪತ್ರಿಕೋದ್ಯಮ ವಿಭಾಗ
ಕಟೀಲ್‌ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next