Advertisement

ಮಾಮ್ಮಿ ಮಕಾ ಜಾಯ… ಯಶಸ್ವಿ ಕೊಂಕಣಿ ರಂಗ ಪ್ರಯೋಗ 

12:30 AM Mar 08, 2019 | |

 ಪರಿಚಯ ಪಾಂಬೂರು ಸಾಂಸ್ಕೃತಿಕ ಸಂಘಟನೆಯ ಆಶ್ರಯದಲ್ಲಿ ನಡೆದ ಪಂಚ ಭಾಷಾ “ರಂಗೋತ್ಸವದ’ ದಲ್ಲಿ ಫೆ.11ರಂದು ಪಾಂಗ್ಲಾಚೆ ಕಳೆ ಕಲಾವಿದರು ವಾಲ್ಸ್ಟನ್‌ ಡೇಸ ರಚಿಸಿ, ಗಣೇಶ್‌ ರಾವ್‌ ಎಲ್ಲೂರು ನಿರ್ದೇಶನದ “ಮಾಮ್ಮಿ ಮಕಾ ಜಾಯ… ’ನಾಟಕ ಪ್ರದರ್ಶಿಸಿದರು. 

Advertisement

ಇಂದು ನಮ್ಮ ನಿಮ್ಮೆಲ್ಲರ ಮನೆಯಲ್ಲಿ ಸಾಮಾನ್ಯವಾಗಿ ನಡೆಯಬಹುದಾದ ಮತ್ತು ಸರಳವಾದ ಸಂಭಾಷಣೆಯಿಂದ ಕೂಡಿದ ಗ್ರಾಮೀಣ ಸೊಗಡಿನ ಕಥಾ ವಸ್ತು ಹೊಂದಿದ ಈ ನಾಟಕ ಪ್ರೇಕ್ಷಕರನ್ನು ಹಿಡಿದಿಟ್ಟಿತು.ದಕ್ಷ ನಿರ್ದೇಶನ, ಪಕ್ವ ಅಭಿನಯ, ಮುದ ನೀಡಿದ ಸಂಗೀತ, ಸುಮಧುರ ಗಾಯನ, ಮನೋಹರ ಬೆಳಕಿನ ಸಂಯೋಜನೆ ಮತ್ತು ರಂಗವಿನ್ಯಾಸ ಒಟ್ಟಾರೆ ನಾಟಕದ ಯಶಸ್ವಿಗೆ ತನ್ನ ಕೊಡುಗೆಯನ್ನು ನೀಡಿತು.

ಒಂದು ಮಧ್ಯಮ ವರ್ಗದ ಮನೆಯ ಸರಸ , ವಿರಸ ಮತ್ತು ನೀರಸ ಎಲ್ಲವನ್ನೂ ಒಂದೇ ಸೂರಿನಡಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ ನಾಟಕ ತಂಡವು ಜನರಿಂದ ಸೈ ಎನಿಸಿಕೊಂಡಿತು. ಕುಟುಂಬಗಳಲ್ಲಿ ಸಾಮಾನ್ಯವಾಗಿ ನಡೆಯುವ ವಿಚಾರವೆ ಈ ನಾಟಕದ ಕಥಾವಸ್ತು.ಕಷ್ಟ ಪಟ್ಟು ದುಡಿದು ಜೋಪಾನವಾಗಿ ಬೆಳೆಸುವ ತಂದೆ ತಾಯಂದಿರಿಗೆ ಮಕ್ಕಳಿಂದ ಯಾವ ರೀತಿಯಲ್ಲಿ ಬೇಡಿಕೆಗಳು ಬರ್ತಾವೆ,ಅದನ್ನು ಅವರು ಹೇಗೆ ನೀಡುವರು ಮತ್ತು ಆ ನಂತರದ ದಿನಗಳಲ್ಲಿ ಆ ಸಂಸಾರಗಳು ಹೇಗೆ ಮುಂದುವರಿಯುತ್ತವೆ ಮತ್ತು ಯಾವ ರೀತಿಯ ಆಂತ್ಯ ಕಾಣುತ್ತವೆ ಎಂಬ ಸಾಮಾನ್ಯ ವಿಷಯವನ್ನು ಅತ್ಯಂತ ಭಾವನಾತ್ಮಕವಾಗಿ ನಿರೂಪಿಸಲಾಗಿದೆ. ನಿರ್ದೇಶಕರ ದಕ್ಷ ತರಬೇತಿಯಿಂದ ಹೊರ ಹೊಮ್ಮಿದ ಆರುಮಂದಿ ಕಲಾವಿದರ ಅಮೋಘ ನಟನೆ ಮೆಚ್ಚುಗೆಗೆ ಪಾತ್ರವಾಯಿತು.

ಪ್ರದರ್ಶನದ ಕೊನೆಯಲ್ಲಿ ನಡೆದ ವಿಶಿಷ್ಟವಾದ ವಿಮರ್ಶಾ ಕಾರ್ಯಕ್ರಮವಂತೂ ನಾಟಕದ ವಿವಿಧ ಮಜಲುಗಳಲ್ಲಿ ನಡೆದಿರಬಹುದಾದ ಲೋಪಗಳನ್ನು ನವಿರಾಗಿ ಗುರುತಿಸಿ ನಿರ್ದೇಶಕರ-ಕೃತಿಕಾರರ ಮತ್ತು ಕಲಾವಿದರ ಮೃದುವಾಗಿ ಕಿವಿ ಹಿಂಡುವ ಒಂದು ಪ್ರಯತ್ನವಾಗಿತ್ತು.ಇಂದೂ ಹಲವರು ವಿಮರ್ಶೆ ಮಾಡುತ್ತಾ ನಾಟಕದ ಹೊರಮೈ ಒಳಮೈಯನ್ನು ನಯವಾಗಿ ಸವರಿ ನೋವಾಗದಂತೆ ಗುದ್ದಿದ್ದೂ ಸತ್ಯವೇ.ಈ ‘ವಿಮರ್ಶೆ’ ಕಲಾವಿದನಿಗೂ ಮತ್ತು ಸಮಗ್ರ ನಾಟಕ ತಂಡಕ್ಕೂ ಬೆಳೆಯಲು ಒಂದು ಟಾನಿಕ್‌ ಎಂದರೂ ತಪ್ಪಲ್ಲ. 

ವಾಲ್ಸ್ಟನ್‌ ಡೇಸ 

Advertisement
Advertisement

Udayavani is now on Telegram. Click here to join our channel and stay updated with the latest news.

Next