Advertisement

Mollywood; ನಟಿಯರ ಕ್ಯಾರವನ್‌ನಲ್ಲಿ ರಹಸ್ಯ ಕೆಮರಾ: ರಾಧಿಕಾ

12:30 AM Sep 01, 2024 | Team Udayavani |

ತಿರುವನಂತಪುರ: ಮಲಯಾಳ ಚಿತ್ರ­ರಂ­ಗದಲ್ಲಿ ಮತ್ತೊಂದು ಮಾದರಿಯ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ನಟಿಯರ ಕ್ಯಾರವಾನ್‌­­ಗಳಲ್ಲಿ ರಹ­ಸ್ಯವಾಗಿ ಕೆಮ­ರಾಗಳನ್ನಿಟ್ಟು ಅವರ ಬೆತ್ತಲೆ ಚಿತ್ರಗಳನ್ನು ಚಿತ್ರೀಕರಣ ಮಾಡಲಾಗು­ತ್ತಿತ್ತು ಎಂದು ನಟಿ ರಾಧಿಕಾ ಶರತ್‌ ಕುಮಾರ್‌ ಹೇಳಿದ್ದಾರೆ.

Advertisement

ವಿಷಯ ತಿಳಿದ ಬಳಿಕ ನಾನು ಕ್ಯಾರವಾನ್‌ ಬಳಸುವುದು ಬಿಟ್ಟೆ ಎಂದಿ­ದ್ದಾರೆ. ಅಲ್ಲದೇ 46 ವರ್ಷಗಳಿಂದ ಚಿತ್ರರಂಗದಲ್ಲಿರುವ ನಾನು ನಟಿಯ­ರೊಂದಿಗೆ ಅನುಚಿತವಾಗಿ ವರ್ತಿಸುವ ಸಾಕಷ್ಟು ಮಂದಿಯನ್ನು ಎದುರಿಸಿದ್ದೇನೆ’ ಎಂದು ಹೇಳಿದ್ದಾರೆ.

ನನಗೂ ಕಹಿ ಅನುಭವ: ನಟಿ ಪಾರ್ವತಿ
ನಟಿ ಮಾಲಾ ಪಾರ್ವತಿ ಕೂಡ ಕಹಿ ಅನುಭವ ಹೊರಹಾಕಿದ್ದಾರೆ. “ಅಪೂರ್ವ ರಾಗಂ ಚಿತ್ರದಲ್ಲಿ ಸಹನಟನ ಅನುಚಿತ­ವರ್ತನೆ­ಯಿಂದ ದೃಶ್ಯವೊಂದರ ಚಿತ್ರೀಕರ­ಣಕ್ಕೆ 16 ರಿಟೇಕ್‌ ತೆಗೆದು ಕೊಂಡಿ­ ದ್ದಾಗಿ ಹೇಳಿದ್ದಾರೆ. ಈ ಘಟನೆ ವಿರುದ್ಧ ಹೋರಾಟ ನಡೆಸುವ ಬಗ್ಗೆ ಪತಿ ಸಲಹೆ ನೀಡಿದ್ದರು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next