Advertisement

ಜನರೊಂದಿಗೆ ಬೆರೆತು ಸಮಸ್ಯೆ ಪರಿಹಾರಕ್ಕೆ ಯತ್ನಿಸಿ

03:48 PM Jul 21, 2019 | Naveen |

ಮೊಳಕಾಲ್ಮೂರು: ಸಮಾಜದಲ್ಲಿ ಪತ್ರಕರ್ತರು ಜನರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಸಮಾಜಮುಖೀಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ನರೇನಹಳ್ಳಿ ಅರುಣಕುಮಾರ್‌ ಹೇಳಿದರು.

Advertisement

ಪಟ್ಟಣದ ಸಾಮರ್ಥ್ಯ ಸೌಧದದಲ್ಲಿರುವ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತವು ಬ್ರಿಟಿಷರಿಂದ ಮುಕ್ತರಾಗಿ ಸ್ವಾತಂತ್ರ್ಯ ಪಡೆಯಲು ದೇಶದ ಜನರ ಸಂಘಟನೆಗೆ ಪತ್ರಿಕೆಗಳು ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿವೆ. ಮಹಾತ್ಮಾ ಗಾಂಧೀಜಿ, ಬಿ.ಆರ್‌.ಅಂಬೇಡ್ಕರ್‌, ಲಾಲಾ ಲಜಪತರಾಯ ಮೊದಲಾದವರು ಪತ್ರಿಕೆಯಲ್ಲಿ ಕೆಲಸ ಮಾಡಿ ದೇಶದ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸಿದ್ದಾರೆ. ದೇಶದಲ್ಲಿ ಸಂವಿಧಾನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಯಾವ ಸರ್ಕಾರ ಇರಬೇಕು ಎಂಬುದನ್ನು ಮಾಧ್ಯಮದವರು ನಿರ್ಧರಿಸುವ ಮಟ್ಟಕ್ಕೆ ಶ್ರಮಿಸಲಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಸಿದ್ದಯ್ಯನಕೋಟೆಯ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪತ್ರಕರ್ತರು ವಚನ ಸಾಹಿತ್ಯದ ಕಡೆ ಮೊರೆ ಹೋದಲ್ಲಿ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯಬಹುದಾಗಿದೆ. 12ನೇ ಶತಮಾನದಲ್ಲಿ ನಿರ್ಮಾಣಗೊಂಡ ಅನುಭವ ಮಂಟಪದಲ್ಲಿ ಬದುಕುವುದರ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿತ್ತು. ವಚನ ಸಾಹಿತ್ಯದಿಂದ ಬಸವಾದಿ ಶಿವಶರಣರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಬದಲಾವಣೆ ಶ್ರಮಿಸಿದಂತೆ ಪತ್ರಕರ್ತರು ಶ್ರಮಿಸಬೇಕಾಗಿದೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಚ್.ಲಕ್ಷ್ಮಣಪ್ಪ ಮಾತನಾಡಿ, ಸಮಾಜದಲ್ಲಿ ಪತ್ರಕರ್ತರು ಯಾವುದೇ ಭದ್ರತೆಯಿಲ್ಲದೆ ತುಂಬಾ ಕಷ್ಟಕರ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಪತ್ರಕರ್ತರು ಕಾರ್ಮಿಕ ಇಲಾಖೆಯ ವ್ಯಾಪ್ತಿಯೊಳಗೆ ಬರುವುದರಿಂದ ಈ ಇಲಾಖೆಯಿಂದ ಸಿಗಬಹುದಾದ ಸೌಲಭ್ಯ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ಸೋಮಶೇಖರ್‌ ಮಾತನಾಡಿ, ಪತ್ರಿಕೆಗಳು ಸಮಾಜದ ಅಂಕುಡೊಂಕು ತಿದ್ದಿ ಸಮಾಜದ ಏಳ್ಗೆಗಾಗಿ ಸಮಾಜಮುಖೀ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಪತ್ರಿಕೆಗಳಲ್ಲಿ ಬಂದ ವರದಿಯು ಸಮಸ್ಯೆ ಪರಿಹರಿಸುವಂತಾಗಬೇಕಾಗಿದೆ ಎಂದರು.

Advertisement

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಿ.ನಾಗರಾಜ ಕಟ್ಟೆ, ಜಿಪಂನ ಕೆಡಿಪಿ ಸದಸ್ಯ ಎಸ್‌.ಜಯಣ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಹೊನ್ನಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಕೆ.ಎಚ್.ಸಣ್ಣಯಲ್ಲಪ್ಪ, ಅಧ್ಯಕ್ಷ ಡಿ.ರಾಜಣ್ಣ, ಕಾರ್ಯದರ್ಶಿ ಅಬ್ದುಲ್ ಮಾಲಿಕ್‌ ಖಾಜಿ, ಹಿರಿಯ ಪತ್ರಕರ್ತ ಕೆ.ಜಿ.ವೆಂಕಟೇಶ್‌, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಿ.ಚಿದಾನಂದಪ್ಪ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ಎಸ್‌.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಪರಮೇಶ್ವರಪ್ಪ, ದಸಂಸ ತಾಲೂಕು ಸಂಚಾಲಕರಾದ ಕೊಂಡಾಪುರ ಪರಮೇಶ್ವರಪ್ಪ, ಒ.ಕರಿಬಸಪ್ಪ, ಜನಸಂಸ್ಥಾನ ಸಂಸ್ಥೆಯ ಪಿ.ವಿರೂಪಾಕ್ಷಪ್ಪ, ವೆಡ್ಸ್‌ ಸಂಸ್ಥೆಯ ಗಂಗಾಧರಪ್ಪ, ಪ್ರೇರಣಾ ಸಂಸ್ಥೆಯ ಕೆ.ಜೆ.ವಿಜಯಲಕ್ಷ್ಮೀ, ವಕೀಲ ರಾಜಶೇಖರ ನಾಯಕ, ಸಿಪಿಐನ ತಾಲೂಕು ಪ್ರಧಾನ‌ ಕಾರ್ಯದರ್ಶಿ ಜಾಫರ್‌ ಷರೀಫ್‌, ಎಐಟಿಯುನ ದಾನಸೂರ ನಾಯಕ, ಎಚ್.ಎ. ಮಾರಣ್ಣ, ಪಪಂನ ಮಾಜಿ ಸದಸ್ಯ ಎಸ್‌.ಟಿ. ಚಂದ್ರಪ್ಪ, ಗ್ರಾಪಂ ಸದಸ್ಯ ನಾಗರಾಜ್‌, ಕೃಷ್ಣಮೂರ್ತಿ, ಮುಖಂಡರಾದ ಸಂಜೀವಪ್ಪ, ಕಸಾಪ ತಾಲೂಕು ಅಧ್ಯಕ್ಷ ಕೊಂಡ್ಲಹಳ್ಳಿ ಜಯಪ್ರಕಾಶ್‌, ಗೌರವಾಧ್ಯಕ್ಷ ಪಾತಯ್ಯ, ಅಧ್ಯಕ್ಷ ಕೆ.ಕೆಂಚಪ್ಪ, ಉಪಾಧ್ಯಕ್ಷ ಕೆ.ಈರಣ್ಣ ಯಾದವ್‌, ಬಿ.ಟಿ.ನಾಗಭೂಷಣ, ಡಿ.ಎನ್‌.ಗೋವಿಂದಪ್ಪ, ನಿರ್ದೇಶಕರಾದ ಜಿ.ಬಿ.ಮಲ್ಲಿಕಾರ್ಜುನ, ಕೊಂಡ್ಲಹಳ್ಳಿ ರಾಮಚಂದ್ರ, ಎಚ್.ಬಸವರಾಜ್‌, ಬಿ.ಟಿ.ಗೋಪಾಲ, ಟಿ.ತಿರುಮಲೇಶ್‌ ಹಾಗೂ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next